ಕುಪ್ಪೆಟ್ಟಿ -ಕಲ್ಲೇರಿ ರಸ್ತೆಯ ಭಯಾನಕ ಹೊಂಡ ಮುಚ್ಚಿಸಲು ಊರವರಿಗೆ ಸಾಥ್ ನೀಡಿದ ರಕ್ಷಿತ್ ಶಿವರಾಮ್


ಬೆಳ್ತಂಗಡಿ : ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯು ಜಾನುವಾರುಗಳೂ ನಡೆದಾಡಲು ಹಿಂಜರಿಯುವಷ್ಟು ತೀವ್ರ ಹದಗೆಟ್ಟಿದ್ದು ಕುಪ್ಪೆಟ್ಟಿ -ಕಲ್ಲೇರಿ ಮಧ್ಯೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಸಹಕಾರದಿಂದ ಊರವರೇ ಜೆಸಿಬಿ ತರಿಸಿ ಟಿಪ್ಪರ್ ಮೂಲಕ ಜಲ್ಲಿ ಮಿಕ್ಸ್ ಡೆಸ್ಟ್ ತಂದು ಹೊಂಡಗಳಿಗೆ ತುಂಬಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆ ಮೂಲಕ ವಾಹನ ಸವಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಪ್ಪೆಟ್ಟಿ -ಕಲ್ಲೇರಿ ಮಧ್ಯೆ ರಸ್ತೆಯ ಭಯಾನಕ ಹೊಂಡಗಳನ್ನು ಮುಚ್ಚಲು ತುರ್ತು ಸ್ಪಂದನೆ ನೀಡಿ ಸ್ಥಳೀಯ ಯುವಕರಿಗೆ ಸಾಥ್ ನೀಡಿದ ರಕ್ಷಿತ್ ಶಿವರಾಮ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಮತ್ತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.














Post Comment