ಧರ್ಮಸ್ಥಳ ಬಂಗ್ಲೆಗುಡ್ಡ ಎಸ್ ಐ ಟಿ ಶೋಧ : ಇಂದು 2 ತಲೆ ಬುರುಡೆಗಳು ಪತ್ತೆ

ಎರಡು ದಿನದಲ್ಲಿ 8 ಮಾನವ ಅಸ್ಥಿಪಂಜರಗಳು
ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಪರಿಸರದ ಬಂಗ್ಲೆಗುಡ್ಡೆ ಕಾನೂನು ಬಾಹಿರ ಶವ ಸಂಸ್ಕಾರ ಮತ್ತು ಕಳೇಬರ ರಾಶಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಗುರುವಾರ ಎರಡನೇ ದಿನವೂ
ಶೋಧ ಕಾರ್ಯ ನಡೆಸಿದ್ದು ಅರಣ್ಯದ ಮಧ್ಯೆ ಮತ್ತೆ ಎರಡು ತಲೆ ಬುರುಡೆಗಳು ಪತ್ತೆಯಾಗಿದೆ.
ಧರ್ಮಸ್ಥಳ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಅಸ್ಥಿಪಂಜರಕ್ಕಾಗಿ ಎರಡನೇ ದಿನ ನಡೆಸಿದ ಕಾರ್ಯಾಚರಣೆ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.18ನೇ ಗುರುವಾರ ನಡೆಸಿದ ಶೋಧ ಕಾರ್ಯದ ವೇಳೆ ಮಾನವರ ಎರಡು ತಲೆಬರುಡೆಗಳು ಹಾಗೂ ಇತರ ಅವಶೇಷಗಳು ಹಾಗೂ ವಾಕಿಂಗ್ ಸ್ಟಿಕ್ ಇತ್ಯಾದಿ ವಸ್ತುಗಳು ಪತ್ತೆಯಾಗಿವೆ.ಪತ್ತೆಯಾದ ತಲೆಬುರುಡೆ ಹಾಗೂ ಇತರ ವಸ್ತುಗಳನ್ನು ಸ್ಥಳ ಮಹಜರು ನಡೆಸಿದ ಬಳಿಕ ಎಸ್ ಐ ಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧವಾರ ಪತ್ತೆಯಾದ 6 ತಲೆ ಬುರುಡೆಗಳು ಸೇರಿ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು 8 ಮಾನವ ಅಸ್ಥಿಪಂಜರಗಳು ಪತ್ತೆಯಾಗಿದೆ.















Post Comment