ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ : ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಮಾನವ ಅಸ್ಥಿಪಂಜರಗಳು ಪತ್ತೆ

ಸತ್ಯ ಹೇಳಲು ಸಿಡಿದೆದ್ದ ಬುರುಡೆಗಳೇ ಉತ್ತರ;
ಬುರುಡೆ ಬಿಟ್ಟವರು ತತ್ತರ, ನಿರುತ್ತರ…!!
ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಪರಿಸರದ ಬಂಗ್ಲೆಗುಡ್ಡೆ ಕಾನೂನು ಬಾಹಿರ ಶವ ಸಂಸ್ಕಾರ ಮತ್ತು ಕಳೇಬರ ರಾಶಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಅಧಿಕಾರಿಗಳು
ಬಂಗ್ಲೆಗುಡ್ಡದಲ್ಲಿ ಬುಧವಾರ ಶೋಧ ಕಾರ್ಯ ನಡೆಸಿದ್ದು ಅರಣ್ಯದ ಮಧ್ಯೆ ಗಂಡಸಿನ ಹಿರಿಯ ನಾಗರಿಕ ಐಡಿ ಕಾರ್ಡ್ ಸಹಿತ ಮೂರು ಮಾನವ ಕಳೇಬರಗಳು ಪತ್ತೆಯಾಗಿದ್ದು ಚಿನ್ನಯನ ಮುಂದೆ ಪತ್ತೆಯಾಗದ ಅಸ್ಥಿಪಂಜರಗಳು ಸರಣಿಯಾಗಿ ಪ್ರತ್ಯಕ್ಷವಾಗುತ್ತಿವೆ.
ಎಸ್.ಐ.ಟಿ ಕಾರ್ಯಾಚರಣೆ ವೇಳೆ ಇಲ್ಲಿನ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡದಲ್ಲಿ 9 ಮಾನವರ ಅಸ್ಥಿಪಂಜರಗಳು ಮತ್ತು ಹಾಗೂ ಒಂದು ಐಡಿ ಕಾರ್ಡ್ ಪತ್ತೆಯಾಗಿರುವುದಾಗಿ ಎಸ್.ಐ.ಟಿ ಮೂಲಗಳಿಂದ ತಿಳಿದು ಬಂದಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಬುಧವಾರ ಸಂಜೆ 5ಗಂಟೆ ಸಮಯಕ್ಕೆ ಶೋಧ ಕಾರ್ಯದಲ್ಲಿ ತೊಡಗಿದ್ದ ಎಸ್.ಐ.ಟಿ ಅಧಿಕಾರಿಗಳಿಗೆ 9 ಮಾನವ ಅಸ್ಥಿಪಂಜರಗಳು ಮತ್ತು ಒಂದು ಪುರುಷನ ಹಿರಿಯ ನಾಗರಿಕ ಐಡಿ ಕಾರ್ಡ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿರುವುದಾಗಿಯೂ ರಕ್ಷಣೆ ಕೊಟ್ಟಲ್ಲಿ ಸಮಾಧಿಗಳನ್ನು
ತೋರಿಸಲು ಸಿದ್ಧನಿರುವುದಾಗಿಯೂ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಸಾಕ್ಷಿ ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆ ಇದೇ ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿತ್ತೆಂಬ ಸಂಗತಿ ಬೆಳಕಿಗೆ ಬಂದಿತ್ತು.
ಬುರುಡೆ ಪತ್ತೆಯಾದ ಬಂಗ್ಲೆಗುಡ್ಡೆಯ ಸ್ಥಳ ಮಹಜರಿಗಾಗಿ ವಿಠಲ ಗೌಡ ಅವರನ್ನು ಕರೆದೊಯ್ದ ಸಂದರ್ಭ ಹಲವಾರು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಎಸ್ ಐ ಟಿ ತನಿಖೆಯು ಇನ್ನೊಂದು ಆಯಾಮದತ್ತ ತಿರುಗಿದ್ದು ಇದೀಗ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆಗಳನ್ನು ಮುಗಿಸಿದ ಎಸ್.ಐ.ಟಿ ಬಂಗ್ಲೆಗುಡ್ಡದ 5 ಸ್ಥಳಗಳಲ್ಲಿ
9 ಮಾನವ ದೇಹಗಳ ಅಸ್ಥಿಪಂಜರಗಳು ಪತ್ತೆಯಾಗಿವೆ.
ಎಸ್ ಐ ಟಿ ಶೋಧ ತಂಡದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯ ಮತ್ತಿತರ ಅಧಿಕಾರಿಗಳು ಭಾಗಿಯಾದರು.















Post Comment