ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಕ.ಜಾ. ಸಮಿತಿ ಸದಸ್ಯರಾಗಿ ಬೆಳ್ತಂಗಡಿಯ ಪತ್ರಕರ್ತ ದೇವೀಪ್ರಸಾದ್ ನೇಮಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಕ.ಜಾ. ಸಮಿತಿ ಸದಸ್ಯರಾಗಿ ಬೆಳ್ತಂಗಡಿಯ ಪತ್ರಕರ್ತ ದೇವೀಪ್ರಸಾದ್ ನೇಮಕ

Share
IMG_20250921_153922 ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಕ.ಜಾ. ಸಮಿತಿ ಸದಸ್ಯರಾಗಿ ಬೆಳ್ತಂಗಡಿಯ ಪತ್ರಕರ್ತ ದೇವೀಪ್ರಸಾದ್ ನೇಮಕ

ಬೆಳ್ತಂಗಡಿ : ದ.ಕ.ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ನೇಮಕಗೊಳಿಸಿ ಸರಕಾರ ಆದೇಶ (ಸಂಖ್ಯೆ: ಕಸಂವಾ 10 ಕೆ.ಎಲ್ ಆಕ 2025, ಬೆಂಗಳೂರು ದಿನಾಂಕ 10.09.2025.) ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಸ್ಥಳೀಯ ಹಂತದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು (ಉಲ್ಲೇಖ -1) ಸರ್ಕಾರದ ಆದೇಶದನುಸಾರ ಬೆಳ್ತಂಗಡಿಯ ‘ಜೈಕನ್ನಡಮ್ಮ’ ವಾರಪತ್ರಿಕೆಯ ಸಂಪಾದಕರಾದ ದೇವಿಪ್ರಸಾದ್ ಅವರನ್ನು ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ಮಾಡಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡಪರ ಆಶಯಗಳನ್ನು ಕನ್ನಡ ಭಾಷೆ, ಸಂಸ್ಕೃತಿಪರ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ನಿರೀಕ್ಷೆಯೊಂದಿಗೆ ಈ ಮಹತ್ವದ ಜವಾಬ್ದಾರಿವಹಿಸಿ ನೇಮಕವನ್ನು ಮಾಡಲಾಗಿದೆ.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ
ಡಾ.ಸಂತೋಷ್ ಹಾನಗಲ್ಲು ಅವರ (ಸಂಖ್ಯೆ ಕ.ಅ.ಪ್ರಾ./ಕಾ-3/15/2024-25- ಉಲ್ಲೇಖ-1) ಅಧಿಕೃತ ಪತ್ರವು ದೇವೀಪ್ರಸಾದ್ ಅವರಿಗೆ ತಲುಪಿದೆ.

Previous post

ಪತಿ ಸಾವಿನ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಗಂಭೀರ ಆರೋಪ : ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್ ಐ ಟಿ ಗೆ ದೂರು ನೀಡಿದ ಧರ್ಮಸ್ಥಳ ಸಿ.ಕೆ. ಚಂದ್ರನ್

Next post

ಕರ್ನಾಟಕ ಹಿಂ.ವ. ಆಯೋಗ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆಜಾತಿ ಕಾಲಂ ನಂ:9ರಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ನಮೂದಿಸಲು ಸಮುದಾಯಕ್ಕೆ ಮನವಿ

Post Comment

ಟ್ರೆಂಡಿಂಗ್‌

error: Content is protected !!