ಮಂಚವೇ ಹಂಚಿಕೊಳ್ಳದೆ ಹೀಗೊಂದು ಸಲಿಂಗ ಹನಿಟ್ರ್ಯಾಪ್!

ನಾಸಿಕ್ ಬ್ಯಾಂಡ್ ಜಗ್ಗ ಹೆಣೆದ ಮಗ್ಗದಲ್ಲಿ ಸಿಲುಕಿದ ‘ಮೀನು’ : ಲಲನೆಯ ಧ್ವನಿಗೆ ಮರುಳಾಗಿ ವಿಲವಿಲ…!
ಬೆಳ್ತಂಗಡಿ : ಬೇಗ ದುಡ್ಡು ಮಾಡಬೇಕೆಂಬ ವ್ಯಾಮೋಹಕ್ಕೆ ಬಿದ್ದ ಯುವಕನೊಬ್ಬ ತನ್ನದೇ ಊರಿನ ವಿವಾಹಿತ ವ್ಯಕ್ತಿಯೊಬ್ಬರನ್ನು
ಹುಡುಗಿ ದನಿಯಲ್ಲಿ ಪರಿಚಯಿಸಿಕೊಂಡು ಪ್ರೀತಿಸುವಂತೆ ನಟಿಸಿ
ಮೋಹಕ ಮೋಸದ ಬಲೆಗೆ ಸಿಲುಕಿಸಿ ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಹಣದ ಬೇಡಿಕೆ ಇಟ್ಟು ಒಂದನೇ ಕಂತು ಪೀಕಿಸಿ ಮತ್ತೆ ಎರಡನೇ ಡಿಮಾಂಡ್ ಮುಂದಿಟ್ಟು ಹಣ ಕೊಡದಿದ್ದರೆ, ನಮ್ಮಲ್ಲಿ ರೌಡಿಗಳ ಗ್ಯಾಂಗ್ ಇದೆ, ನಿಮ್ಮ ಗಂಡನನ್ನು ಕಿಡ್ನ್ಯಾಪ್ ಮಾಡಿ ಮುಗಿಸಿ ಬಿಡುವುದಾಗಿ ಮತ್ತೆ ಜೀವ ಬೆದರಿಕೆಯೊಡ್ಡಿ ಹಣ ಪಡೆಯಲು ಹೋಗಿ ತಾನೇ ಇಟ್ಟ ಬೋನಿಗೆ ಬಿದ್ದು ಮಹಿಳೆಯಿಂದ ಭರ್ಜರಿ ಗೂಸಾ ತಿಂದು ಧರ್ಮಸ್ಥಳ ಪೊಲೀಸ್ ವಶಕ್ಕೆ ಸೇರಿದ ಸ್ವಾರಸ್ಯಕರ ಪ್ರಸಂಗವೊಂದು ಬಂದಾರು ಗ್ರಾಮದಲ್ಲಿ ಮೊನ್ನೆಯಷ್ಟೇ ನಡೆದಿದೆ.

ಹೆಸರು : ಶದೀಗಜ ಗೌಡ (ತಿದ್ದಿಕೊಳ್ಳಿ)
ವಯಸ್ಸು :22-24
ಊರು: ಮೊಗ್ರು -ಬಂದಾರು ಗಡಿ ಭಾಗ,
ಚಹರೆ : ಗೋಧಿ ಮೈಮಣ್ಣ, ಸಾಧಾರಣ ಮೈಕಟ್ಟು,
ಭಾಷೆ : ತುಳು, ಕನ್ನಡ ಮತ್ತು ಪಚ್ಚೆ ಪೆದಂಬು!
ಹವ್ಯಾಸ : ನಾಸಿಕ್ ಬ್ಯಾಂಡ್, ಮ್ಯಾಚ್ ವೀಕ್ಷಕ ವಿವರಣೆ,
ಅಪ್ಪನನ್ನು ಮೀರಿಸುವ ಮೂಗುತ್ತಿ ತಜ್ಞ! ಇತರ ಚಾಳಿ : ಊರೂರು ಸುತ್ತಿ ಮೂಗುತ್ತಿ ಶೋಧ, ಸಲಿಂಗ-ಸ್ತ್ರೀಲಿಂಗ ಅಶ್ಲೀಲ ಫೊಟೋ ವೀಡಿಯೋ ಕೇಳುವುದು / ಕಳಿಸುವುದು / ಲಲನೆಯರ ದನಿಯಲ್ಲಿ ಕಿಲಕಿಲ ಮಾತನಾಡಿ ಬಲೆಗೆ ಬೀಳಿಸಿಕೊಂಡು ಜೇಬಿಗೆ ಕನ್ನ ಹಾಕುವುದು!
ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಂದಾರು ಗ್ರಾಮದ ನಾಸಿಕ್ ಬ್ಯಾಂಡ್ ಬಳಗದಲ್ಲಿ ಪೆಟ್ರೋಲ್ ಕುಡಿದು ಬೆಂಕಿಯೊಂದಿಗೆ ಸರಸವಾಡುವ ಸಾಹಸಮಯ ಟ್ಯಾಲೆಂಟ್ ಪ್ರದರ್ಶಿಸುತ್ತಾ ಸ್ಥಳೀಯವಾಗಿ ಗುರುತಿಸಿಕೊಂಡಿದ್ದ ಸುರ ಸುಂದರ ಸುಕುಮಾರನೇ ಈ ಪ್ರಕರಣದಲ್ಲಿ “ಸರಸಕೆ ಬಾರೋ ಸರ ಸರನೆ…” ಎಂದು ಫೋನಿನಲ್ಲಿ ಹುಡುಗಿಯ ದನಿಯಲ್ಲಿ ಪುರುಷನನ್ನೇ ಆಹ್ವಾನಿಸಿ ದುಡ್ಡು ವಸೂಲಿ ಮಾಡಿದ ವಿಲಕ್ಷಣ ಚಾಳಿಯ ‘ಚಾಲಿ ಪೋಲಿ’ ಸೂತ್ರಧಾರ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಪಾಣೆಕಲ್ಲು ಸಮೀಪದ ವಿವಾಹಿತ ಕೃಷಿಕ ವ್ಯಕ್ತಿಯೇ ಈ ಪ್ರಕರಣದಲ್ಲಿ ಬೇನಾಮಿ ಲಲನೆಯ ದನಿಗೆ ಮರುಳಾಗಿ ತನ್ನ ಸೊಂಟದ ಕೆಳಗಿನ ಖಾಸಗಿ ಫೊಟೋ ಕಳಿಸಿ ಮೋಸದ ಬಲೆಗೆ ಸಿಲುಕಿ ಹಣ ಕಳೆದುಕೊಂಡು ವಿಲವಿಲ ಒದ್ದಾಡಿದ ಬಲಿಪಶು! ಬಲೆಗೆ ಬಿದ್ದು
ಹಣ ಕಳೆದುಕೊಂಡ ವ್ಯಕ್ತಿ ಕೃಷಿಕ. ಬಂದಾರು ಪಾಣೆಕಲ್ಲು ಸಮೀಪದ ನಿವಾಸಿ. ಮುತ್ತಿನಂಥ ಹೆಂಡ್ತಿಯ ಗಂಡ, ಮುದ್ದು ಮಕ್ಕಳ ತಂದೆ.
ಈತನ ಮೊಬೈಲ್ ನಂಬರ್ ಗೆ ಕೆಲವು ದಿನಗಳ ಹಿಂದೆ ಒಂದು ದೂರವಾಣಿ ಕರೆ ಬರುತ್ತದೆ. ಕರೆ ಸ್ವೀಕರಿಸಿದಾಗ ಆ ಕಡೆಯಿಂದ
ಹುಡುಗಿಯೊಬ್ಬಳು ಮಾದಕ ಮಾರಕ ದನಿಯಿಂದ ಮಾತನಾಡಿದ್ದಾಳೆ.
ರಾಂಗ್ ನಂಬರ್ ಅಂದುಕೊಂಡರೂ ಪದೇ ಪದೇ ಫೋನ್ ಬಂದಿದೆ. ಮತ್ತೆ ಮತ್ತೆ ಹುಡುಗಿ ಕಾಲ್ ಬರುವಾಗ ಯಾಕೋ ಈತನೂ
ಆ ಅಮಲು ದನಿಗೆ ಬೌಲ್ಡ್ ಆಗಿದ್ದೇ ಮೊದಲ ಎಡವಟ್ಟು.
ಹೀಗೆ ಶುರುವಾದ ಪರಸ್ಪರ ಮೊಬೈಲ್ ಸಂಭಾಷಣೆ ಕೆಲವೇ ದಿನಗಳಲ್ಲಿ ಪ್ರೀತಿ ಪ್ರೇಮದವರೆಗೂ ಮುಂದುವರಿಯಿತು. ಭೇಟಿ ಮಾತ್ರ ಸಾಧ್ಯವಾಗಿಲ್ಲ, ಬರೇ ಮೊಬೈಲ್ ಸಂಭಾಷಣೆಯಲ್ಲೆ ಅವನಿಗೆ ‘ಅವಳ’ ಮೇಲೆ ಆಕರ್ಷಣೆ ಉಂಟಾಗಿತ್ತು.
ಆದರೆ ಈತ ಬಯಸಿದರೂ ಪರಸ್ಪರ ಭೇಟಿಗೆ ಆ ‘ಅವಳು’ ಅವೈಡ್ ಮಾಡುತ್ತಲೇ ಬರಲು ಕಾರಣವೂ ಇತ್ತು. ಇವರಿಬ್ಬರ ನಿಗೂಢ ಪ್ರೇಮಕ್ಕೆ
ಇನ್ ಸ್ಟ್ರಾ ಗ್ರಾಮ್ ಕೊಂಡಿಯಾಗಿತ್ತು. ಮನೆಯಲ್ಲಿ ಹೆಂಡ್ತಿಗೂ ಗೊತ್ತಾಯಿತು. ಹೀಗೆ ಈ ಅಪರಿಚಿತ ಜೋಡಿಯ ಪರಿಚಯ ಸ್ನೇಹವಾಗಿ ಸ್ನೇಹ ಪ್ರೇಮಕ್ಕೆ ತಿರುಗಿ ದೇಹ ಮಾತ್ರ ಹಂಚಿಕೊಳ್ಳಲು ಬಾಕಿಯಿತ್ತು. ಆದರೆ ಇಬ್ಬರೂ ಪರಸ್ಪರ ಸೊಂಟದ ಕೆಳಗಿನ ಫೊಟೋ – ವೀಡಿಯೋಗಳನ್ನು ಲಂಗು ಲಗಾಮಿಲ್ಲದೆ ಹಂಚಿಕೊಳ್ಳುವವರೆಗೆ ನೈತಿಕತೆಯ ಬೇಲಿ ದಾಟಿ ಮುಂದುವರಿದಿದ್ದರು.

ಒಂದು ದಿನ, ಆ ಹುಡುಗಿ (?) “ನಿಮ್ಮ ಫೊಟೋ ಕಳಿಸಿ… ನಗ್ನ ದೇಹದ ಫೊಟೋ ಕಳಿಸಿ… ” ಎಂದು ಕೇಳಿದ್ದಳು. ಇವನೂ ಅಷ್ಟೇ , ನೋಡಬಾರದನ್ನೆಲ್ಲ ನೋಡಲು ಆಸೆ ಪಟ್ಟ. ಅವಳು (?) ಕೇಳಿದ್ದನ್ನೆಲ್ಲ ಅವನೂ, ಅವನು ಕೇಳಿದ್ದನ್ನೆಲ್ಲ ಅವಳೂ ಪರಸ್ಪರ ಇಬ್ಬರೂ ಹಂಚಿಕೊಂಡರು.! ಅವನು ಆ ಬಲೆಗೆ ಬಿದ್ದಾಯಿತು ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ನನಗೆ ನಿಮ್ಮ ‘ಅದು’ ನೋಡುವಾಸೆ, ಇದು ನೋಡುವಾಸೆ, ‘ಅದರ’ ಫೊಟೋ ಕಳಿಸಿ ಎಂದೆಲ್ಲಾ ಕೇಳಿದ್ದೇ ತಡ, ವಿವಾಹಿತ ಕಳಿಸಿಯೇ ಬಿಟ್ಟ..!
ಅಸಲೀ ‘ಮೋಹಿನಿಯಾಟಂ’ ಶುರುವಾಗುವುದೇ ಇಲ್ಲಿಂದ..!!
ಈತ ತನ್ನ ‘ಅದರ’ ಬಹು ಭಂಗಿಯ ಫೊಟೋಗಳನ್ನು ಕಳಿಸಿದ್ದೇ ತಡ , ಸಲುಗೆ ಇನ್ನಷ್ಟು ಮುಂದುವರಿಯಿತು. ಇದೇ ಸಂದರ್ಭ ನೋಡಿ ‘ಅವಳು’ ನನಗೆ 70,000/ ರೂಪಾಯಿ ಹಣ ಬೇಕು, ಕಳಿಸಿ ಎಂದು ಕೇಳಿ ಬಿಟ್ಟಳು. ಅಷ್ಟು ಹಣ ಇಲ್ಲ ಎಂದು ಆ ವ್ಯಕ್ತಿ ಹಿಂಜರಿದಿದ್ದರು.
ಹಣ ಕಳಿಸಲು ಹಿಂಜರಿದಾಗ ” ಅದೆಲ್ಲಾ ಗೊತ್ತಿಲ್ಲ, ಹಣ ಕೊಡದಿದ್ದರೆ ನೀವು ಕಳಿಸಿದ ಎಲ್ಲಾ ಫೊಟೋ ವೀಡಿಯೋ ಊರೆಲ್ಲಾ ವೈರಲ್ ಮಾಡ್ತೇನೆ, ರೇಪ್ ಮಾಡಿದ್ದಾರೆ ಎಂದು ಕಂಪ್ಲೇಂಟ್ ಕೊಡುತ್ತೇನೆ, ಮರ್ಯಾದೆ ತೆಗೆಯುತ್ತೇನೆ…” ಎಂದೆಲ್ಲಾ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಅಷ್ಟರಲ್ಲಿ ಈ ವ್ಯಕ್ತಿಯ ಪತ್ನಿಗೂ ವಿಚಾರ ಗೊತ್ತಾಗಿ ದಂಪತಿ ಮಧ್ಯೆ ರಂಪಾಟವೇ ನಡೆದಿತ್ತು. ಪತಿಯ ಕಿತಾಪತಿಯಿಂದ ಫ್ಯಾಮಿಲಿ ಮರ್ಯಾದೆ ಹೋಗುತ್ತದೆಂದು ಆತಂಕಗೊಂಡ ಪತ್ನಿ ಚಿನ್ನವನ್ನಾದರೂ ಬ್ಯಾಂಕಲ್ಲಿಟ್ಟು ಹಣ ಕೊಡೋಣ, ಇಲ್ಲವಾದರೆ ಇಡೀ ಮರ್ಯಾದೆ ಹರಾಜಾಗುತ್ತದಲ್ಲಾ… “
ಎಂದು ಹಣ ಕೊಡಲು ಒಪ್ಪಿಕೊಂಡರು.
ಇಷ್ಟೊಂದು ಸುಲಭವಾಗಿ ದುಡ್ಡು ಮಾಡಬಹುದೆಂದು ಇಂಥ ಕ್ರಿಮಿನಲ್ ಐಡಿಯಾ ಈತನಿಗೆ ಹೇಗೆ ಹೊಳೆಯಿತೋ..?!
ಎಂಥಾ ಜೇಬಿಗೆ ಚೆನ್ನಾಗಿ ಕತ್ತರಿ ಹಾಕಬಹುದೆಂದು ಖಚಿತಪಡಿಸಿಕೊಂಡು ಮೊಬೈಲ್ ಕರೆ ಮಾಡಿದ್ದು ಹುಡುಗಿ ದನಿಯಲ್ಲಿ ಮಾತನಾಡಿ ಪರಿಚಯಿಸಿಕೊಂಡು ಕಿಲಕಿಲ ನಗುತ್ತಾ ಮಾತನಾಡಿ ಡೌಟೇ ಬಾರದಂತೆ ಉಪಾಯವಾಗಿ ಬಲೆಗೆ ಬೀಳಿಸಿಕೊಂಡಿದ್ದೇ ತಡ ಕೆಲವೇ ದಿನಗಳಲ್ಲಿ ಆ ಮಾದಕ ದನಿಯ ಮೋಹಕ ಮೋಸದ ಬಲೆಗೆ
ಈ ‘ಮೀನು’ ಬಿದ್ದು ವಿಲ ವಿಲ ಒದ್ದಾಡಿದೆ.
ಇಂಥ ಸಂದರ್ಭ ಕಾದು ಸುರ ಸುಂದರ ಸುಪುತ್ರ ಅಸಲೀ ಆಟ ಶುರು ಮಾಡಿದ್ದಾನೆ;
ಆತಂಕಗೊಂಡ ದಂಪತಿ ಹಣ ಕೊಡುವ ದಿನ ನಿಗದಿಪಡಿಸಿದ
ಉಪ್ಪಿನಂಗಡಿಗೆ ಬರುವಂತೆ ತಿಳಿಸಿದರು. ಮರ್ಯಾದೆಗೆ ಅಂಜಿ ಚಿನ್ನ ಬ್ಯಾಂಕಲ್ಲಿಟ್ಟು 70,000 ರೂಪಾಯಿ ಹಿಡ್ಕೊಂಡು ಗಂಡ ಹೆಂಡತಿ ಉಪ್ಪಿನಂಗಡಿಗೆ ಹೋದರು. ಹೋಗುವಾಗಲೂ ದಾರಿ ಮಧ್ಯೆ ಪದೇ ಪದೇ ಕರೆ ಬಂದಿತ್ತು. ಉಪ್ಪಿನಂಗಡಿ ತಲುಪಿ ದೂರವಾಣಿ ಕರೆ ಮಾಡಿ ನಾವು ಬಂದಿದ್ದೇವೆ, ಎಲ್ಲಿ ಸಿಗ್ತೀರಾ ಎಂದು ಆ ನಂಬರ್ ಗೆ ಫೋನ್ ಮಾಡಿ ವಿಚಾರಿಸಿದಾಗ ” ನಾನು ಬರಕ್ಕಾಗಲ್ಲ ಬೇರೆಯವರನ್ನು ಕಳಿಸುತ್ತೇನೆ, ನೀವು ಕುಮಾರಧಾರ ಸೇತುವೆ ಬಳಿ ಬಂದು ಕಾಲ್ ಮಾಡಿ , ಅಲ್ಲಿಗೆ ಬರ್ತಾರೆ ” ಅಂತ ಅವಳು ತಿಳಿಸಿದಳು.
ಹಣದೊಂದಿಗೆ ಅವಳು ಹೇಳಿದ ಜಾಗಕ್ಕೆ ಹೋದಾಗ ಮೂರು ಮಾರ್ಗ ಸೇರುವಲ್ಲಿ ಮೂರು ಮಂದಿ ಯುವಕರು ಬಂದಿದ್ದಾರೆ, ಗಂಡ ಹೆಂಡತಿ ಮೊದಲೇ ನಿಗದಿಯಾದ ಹಣವನ್ನು ಹುಡುಗರ ಕೈಗಿಟ್ಟು
ಅಬ್ಬಾ ಫ್ಯಾಮಿಲಿ ಮರ್ಯಾದೆ ಉಳಿಯಿತಲ್ಲ, ಸದ್ಯ ಯಾರಿಗೂ ಗೊತ್ತಾಗಲಿಲ್ಲವಲ್ಲ , ದುಡ್ಡು ಕಳ್ಕೊಂಡ್ರೂ ಪರವಾಗಿಲ್ಲ ಅಂದುಕೊಂಡು
ನಿಟ್ಟುಸಿರು ಬಿಟ್ಟರು.

ಈ ಸಂದರ್ಭ “ಇನ್ನು ಮುಂದೆ ಯಾವುದೇ ಫೋನ್ ಮಾಡಬಾರದು, ಕಾಂಟಾಕ್ಟ್ ಇವತ್ತಿಗೇ ಕೊನೆಯಾಗಬೇಕು..” ಎಂದು ದಂಪತಿ
ಹಣಕ್ಕಾಗಿ ಬಂದ ಯುವಕರಲ್ಲಿ ವಿನಂತಿಸಿಕೊಂಡು ಹೊರಟಿದ್ದರು.
ಇಲ್ಲಿಗೆ ಮುಗಿಯಿತೆಂದುಕೊಂಡರೆ ಕೆಲವು ದಿನಗಳ ನಂತರ ಮತ್ತೆ ಆ ‘ಹುಡುಗಿ’ ಮತ್ತೆ ಫೋನ್ ಮಾಡಿ , ಮೆಸೇಜ್ ಮಾಡಿ ಮೊದಲಿನಂತೆ ಮಾತನಾಡಿ 50,000/- ರೂಪಾಯಿ ಹಣದ ಬೇಡಿಕೆಯಿಟ್ಟು ಪದೇ ಪದೇ ಬೆಂಬಿಡದೆ ಪೀಡಿಸಲಾರಂಭಿಸಿದೆ.
ಇನ್ನು ಸುಮ್ಮನೆ ಸಹಿಸಿಕೊಂಡರೆ ಮನೆ,ಆಸ್ತಿ ಮಾರುವ ಪರಿಸ್ಥಿತಿ ಬರಬಹುದೆಂದು ಅರ್ಥ ಮಾಡಿಕೊಂಡರು. ಗಂಡ ಹೆಂಡತಿ ಅಷ್ಟರವರೆಗೆ ದಂಪತಿ ಮಧ್ಯೆ ಮಾತ್ರ ಇದ್ದ ಗುಟ್ಟನ್ನು ಬೇರೆ ಉಪಾಯವಿಲ್ಲದೆ, ತನ್ನ ಪತಿ ಯಾವುದೋ ಒಬ್ಬಳು ಹುಡುಗಿಯ ಬಲೆಯಲ್ಲಿ ಸಿಲುಕಿಕೊಂಡು ಹಣ ಕಳೆದುಕೊಂಡ ಸಂಗತಿಯನ್ನು ಗಂಡನ ಸಹೋದರರನ್ನು ಕರೆದು ಹೇಳಿಕೊಳ್ಳಬೇಕಾಯಿತು.
ಎಲ್ಲರೂ ಮಾತನಾಡಿಕೊಂಡು ಮುಂದೆನು ಮಾಡಬಹುದೆಂಬ ನಿರ್ಧಾರಕ್ಕೆ ಬಂದಿದ್ದರು.
ಮತ್ತೆ ಹಣಕ್ಕಾಗಿ ಪೀಡಿಸಲಾರಂಭಿಸಿದ ಹುಡುಗಿ ವಾಪಾಸ್ 50 ಸಾವಿರ ರೂಪಾಯಿ ಹಣ ತಂದು ಕೊಡದಿದ್ದರೆ ನಮ್ಮ ಗ್ಯಾಂಗಲ್ಲಿ ರೌಡಿಗಳಿದ್ದಾರೆ ಗಂಡನನ್ನು ಕೊಲ್ಲುವುದಾಗಿಯೂ ನನಗೆ ಕಳಿಸಿದ ಬೆತ್ತಲೆ ಫೊಟೋ, ವೀಡಿಯೋಗಳನ್ನು ವೈರಲ್ ಮಾಡುವುದಾಗಿಯೂ
ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಆ ‘ಹುಡುಗಿ’. ಧೈರ್ಯವಾಗಿ
ಒಂದು ದಾರಿ ಹುಡುಕಿಕೊಂಡ ದಂಪತಿ , ಎರಡನೇ ಡಿಮಾಂಡ್
50 ಸಾವಿರ ರೂಪಾಯಿ ಕೊಡುತ್ತೇವೆ, ದಯವಿಟ್ಟು ಯಾವುದನ್ನೂ ವೈರಲ್ ಮಾಡಬೇಡಿ, ಹಣಕ್ಕೆ ಬನ್ನಿ ಎಂದು ದಿನ ನಿಗದಿ ಮಾಡಿಯೇ ಬಿಟ್ಟರು.
ಇಂಥ ದಿನ, ನಮ್ಮ ಊರಿಗೆ ಬನ್ನಿ ಎಂದು ಕರೆದರು. ಆಯಿತು ಮೊನ್ನೆ ಬಂದ ಯುವಕರೇ ನೀವು ಹೇಳಿದ ಜಾಗಕ್ಕೆ ಬರುತ್ತಾರೆ , ಅವರಲ್ಲಿ ಕೊಟ್ಟು ಕಳಿಸಿ” ಎಂದು ಹೇಳಿದರು. ಆ ದಿನ ಮಾತನಾಡಿಕೊಂಡ ಸಮಯಕ್ಕೆ ಸರಿಯಾಗಿ ಬಂದಾರು ಪಾಣೆಕಲ್ಲು ಸಮೀಪ ಗಂಡ ಹೆಂಡತಿ ಹಣಕ್ಕಾಗಿ ಬರುವವರನ್ನು ಕಾಯುತ್ತಿದ್ದರು.
ಹುಡುಗರು ಕಾರಲ್ಲಿ ಬರುತ್ತಾರೆಂದು ಆ ಹುಡುಗಿ ತಿಳಿಸಿದ್ದಳು. ಸಮಯಕ್ಕೆ ಸರಿಯಾಗಿ ಆಲ್ಟೋ ಕಾರೊಂದು ಬಂದು ನಿಂತಿದೆ.
ಕಾರಲ್ಲಿ ಒಬ್ಬ ಯುವಕ ಬಂದಿದ್ದಾನೆ.
ಕಾರು ಬಂದು ನಿಂತಿದ್ದ ತಡ… ಅಲ್ಲಿ ನಿಂತಿದ್ದ ಮಹಿಳೆ ಚಟ.. ಪಟ.. ಬಾರಿಸಿದಾಗ ಕೆನ್ನೆ ಗಾಳಿಪಟದಂತಾಗಿದೆ. ಬಳೆ ಸದ್ದಿನ ಏಟಿಗೆ ನೆತ್ತಿಗೇರಿದ ಚಟ ಇಳಿದಿರಬಹುದು.!
ಮುಖಾಮೂತಿ ನೋಡದೆ ಮಹಿಳೆಯಿಂದ ಭರ್ಜರಿ ಗೂಸಾ ಬಿದ್ದಿದೆ. ಮೊದಲ ಡೀಲ್ ಕುದುರಿಸಿ ಸಕ್ಸಸ್ ಆಗಿದ್ದ ನಾಸಿಕ್ ಜಗ್ಗ ಎರಡನೇ ಡೀಲ್ ಪಡೀಲಾಗುತ್ತೆ ಅಂತ ಕನಸಿನಲ್ಲೂ ಯೋಚಿಸಿರಲಿಲ್ಲ. ಇದೇ ಹೊತ್ತಿಗೆ ಮಹಿಳೆಯ ಪತಿ ಮತ್ತು ಸಹೋದರರು ಪೊದೆಯ ಮರೆಯಿಂದ ಎದ್ದು ಬಂದವರು ತಮ್ಮ ಪಾಲಿನದ್ದೂ ಕಡಿಮೆಯಾಗಬಾರದೆಂದು ಬಂದ ಯುವಕನಿಗೆ ಬೇರೆನೇ ಬಂಜಾರ ಬಡಿಸಿದ್ದಾರೆ.!
ಗಂಡ ಹೆಂಡ್ತಿ ಮತ್ತು ಗಂಡನ ಸಹೋದರರು ಆಲ್ಟೋ ಕಾರನ್ನು ಸುತ್ತುವರಿದು ಇಡೀ ಕಹಾನಿಯನ್ನು ಇಂಚಿಂಚು ಬಾಯ್ಬಿಡಿಸಿದರು.
ಫೋನ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿ 70 ಸಾವಿರ ಪೀಕಿಸಿದ ಹುಡುಗಿಯ ಹೆಸರೇನು? ನೀನು ಯಾರು?
ನೀನು ಯಾಕೆ ಬಂದಿದ್ದಿ? ಈಗ ನಿನ್ನನ್ನು ವಾಪಾಸ್ 50 ಸಾವಿರ ಹಣಕ್ಕಾಗಿ ಕಳಿಸಿದವಳು ಎಲ್ಲಿದ್ದಾಳೆ. ಅವಳು ಯಾಕೆ ಬಂದಿಲ್ಲ? ಅಶ್ಲೀಲ ಫೊಟೋ ಕೇಳಿದ್ದು ಯಾರು? ಅವಳ ಹೆಸರೇನು, ಹೇಳು ಎಂದು ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಕೇಳಿ ನಾಲ್ಕು ಭಾರಿಸಿದಾಗ ಕೊನೆಗೆ ಆಲ್ಟೋ ಕಾರಲ್ಲಿ ಬಂದವ ಇನ್ನು ಎಸ್ಕೇಪ್ ಆಗಲು ಸಾಧ್ಯನೇ ಇಲ್ಲ ಅಂತ ಗೊತ್ತಾದಾಗ ಬೇರೆ ದಾರಿಯೇ ಇಲ್ಲದೆ ಕೊನೆಗೆ ಎಲ್ಲಾ ಸತ್ಯ ಬಾಯ್ಬಿಟ್ಟ.!
ಬೇರೆ ಯಾವ ಹುಡುಗಿಯೂ ಇಲ್ಲ, ಮಣ್ಣಾಂಗಟ್ಟಿನೂ ಇಲ್ಲ , ಹಣಕ್ಕೆ ಫೋನ್ ಮಾಡಿದ್ದು ಮೆಸೇಜ್ ಮಾಡಿದ್ದು , ಇಷ್ಟು ಸಮಯ ಹುಡುಗಿ ಧ್ವನಿಯಲ್ಲಿ ಮಾತನಾಡಿದ್ದು ದುಡ್ಡಿಗೆ ಬಂದವನೆ!
“ಹುಡುಗಿಯಂತೆ ಮಾತನಾಡಿದ್ದು ನಾನೇ, ಇದೇ ಊರಿನವನು” ಎಂದು ಹೇಳಿಕೊಂಡ, ಮೋಸದ ಬಲೆಗೆ ಬಿದ್ದ ವ್ಯಕ್ತಿಗೂ ಗೊತ್ತಿರಲಿಲ್ಲ, ಹಣ ವಸೂಲಿ ಮಾಡಿದ್ದು ಹುಡುಗಿಯಲ್ಲ, ಇದೇ ಊರಿನ ಗಿಡುಗನಂಥ ಹುಡುಗ ಎಂಬ ಸತ್ಯ ಬಯಲಾದಾಗ ಹುಡುಗಿ ಎಂದು ಭ್ರಮಿಸಿ ಜೇಬಿಗೆ ಕತ್ತರಿ ಹಾಕಿಸಿಕೊಂಡ ವ್ಯಕ್ತಿಗೂ ಶಾಕ್!
ಏಕೆಂದರೆ ; ಆ ದ್ವನಿ “ಅವಳದ್ದಾಗಿರಲಿಲ್ಲ ; ಅವನದ್ದಾಗಿತ್ತು ..!!
ಇವನೇನು ಬೇರೆ ದೂರದ ಊರಿನವನೂ ಆಗಿರಲಿಲ್ಲ. ಹುಡುಗಿ ದನಿಯಲ್ಲಿ ಮಾತನಾಡಿ ಪ್ರೀತಿ, ಪ್ರೇಮ, ಪ್ರಣಯಗಳ ಬಗ್ಗೆ ಕಾಲ್, ಮೆಸೆಜ್ ಮೂಲಕ ‘ರಾಸಲೀಲೆ’ಯಾಡಿ ನಂಬಿಸಿ
ಹಣ ದೋಚಿದ್ದ ನಾಸಿಕ್ ಜಗ್ಗ ಮತ್ತು ಹಣ ಕಳೆದುಕೊಂಡ ದಂಪತಿ ಒಂದೇ ಊರಿನವರಾಗಿದ್ದು ಇವರ ಮನೆ ಪರಸ್ಪರ 2 ಕಿ.ಮೀ. ಅಂತರದಲ್ಲಿದ್ದು ಹಣಕ್ಕಾಗಿ ಮಜಕ್ಕಾಗಿ ಹುಡುಗಿಯಂತೆ
ಮಾತನಾಡಿದ ಈತನ ಕ್ರಿಮಿನಲ್ ಐಡಿಯಾ ಧೈರ್ಯಕ್ಕೆ ಮೆಚ್ಚಲೇ ಬೇಕು!

ಬೆಳ್ತಂಗಡಿಯಲ್ಲಿ ‘ಆರ್ಟ್ಸ್ ವರ್ಕ್ಸ್ ‘ ಶಾಪ್ ಮಾಡಿಕೊಂಡಿರುವ ಬಂದಾರಿನ ನಾಸಿಕ್ ಬ್ಯಾಂಡ್ ಬಳಗದ ಸ್ನೆಹಿತನಲ್ಲಿ ” ಬೆಳಾಲಿನಲ್ಲಿ ಹಣ ಸಿಗೋದಿದೆ ಒಮ್ಮೆ ಕಾರು ಕೊಡು ಅಂತ ” ಬೆಳ್ತಂಗಡಿಗೆ ಬಂದು ಕೇಳಿದ್ದಾನೆ. ನಾನು ಕಾರು ಕೊಡುವುದಿಲ್ಲ , ನನಗೆ ಕಷ್ಟ ಆಗುತ್ತದೆ , ಒಮ್ಮೊಮ್ಮೆ ಅರ್ಜಂಟ್ ಒಡಾಟಕ್ಕೆ ಬೇಕಾಗುತ್ತದೆ ಅಂತ ಹೇಳಿದ್ರೂ ಕೇಳದೆ ಒಮ್ಮೆ ಕೊಡು ಮಾರಾಯ ಒತ್ತಾಯಿಸಿದ್ದಾನೆ, ಆಗ, ಸರಿ ಹಾಗಾದ್ರೆ ನಾನೆ ಬರುತ್ತೇನೆ , ಅಂತ ಬೆಳ್ತಂಗಡಿ ಉಜಿರೆ ಮಾರ್ಗವಾಗಿ ಬೆಳಾಲು ಕಡೆ ಇಬ್ಬರೂ ಬಂದಿದ್ದಾರೆ.
ಬೆಳಾಲು ತಲುಪಿದಾಗ ಇಲ್ಲಿ ಎಲ್ಲಿ ಅಂತ ಕೇಳಿದ್ರೆ ” ಸ್ವಲ್ಪ ಮುಂದೆ ಹೋಗಬೇಕು ಅಂತ ಬೈಪಾಡಿಗೆ ಕರೆದೊಯ್ದಿದ್ದಾನೆ, ಬೈಪಾಡಿ ತಲುಪಿದಾಗ ಅಲ್ಲಿನ ಬಾರ್ ಗೆ ಊಟಕ್ಕೆ ಹೋಗಿದ್ದಾರೆ, ಅಷ್ಟರಲ್ಲಿ ಕಾಲ್ ಬಂದ ಹಾಗೆ ಹೊರಗೆ ಬಂದ ‘ಜಗ್ಗ ‘ “ನೀನು ಊಟ ಮಾಡು ಒಮ್ಮೆ ಕೀ ಕೊಡು, ಇಲ್ಲೇ ಪಕ್ಕ ನಾನು ಹೋಗಿ ಬರುತ್ತೇನೆ ,” ಅಂತ ಕೀ ತೆಗೆದುಕೊಂಡು ಕಾರಲ್ಲಿ ಬೈಪಾಡಿಯಿಂದ ಹೋಗಿದ್ದಾನೆ.
ಹೋಗಿದ್ದು 7 ಕಿ.ಮೀ ದೂರಕ್ಕೆ ಅಂತ ಕಾರು ಕೊಟ್ಟವರಿಗೇನು ಗೊತ್ತು. ಕಾರು ಕೀ ಕೊಟ್ಟ ಯುವಕ ಗಂಟೆಗಟ್ಲೆ ಕಾದು ಸುಸ್ತಾಗಿ ಕಾಲ್ ಮಾಡಿದ್ರೆ ರಿಸೀವ್ ಮಾಡಿಲ್ಲ, ಆಗ ಕಾರು ಕೊಟ್ಟ ಯುವಕನಿಗೆ ಮನೆ ಪಕ್ಕದ ಒಬ್ರು ಪರಿಚಯದವರ ಕಾಲ್ ಬಂದಿದ್ದು “ನೀವು ನಿಮ್ಮ ಕಾರು ಯಾರಿಗೆ ಕೊಟ್ಟಿದ್ದಿರಿ? ನಿಮ್ಮ ಕಾರು ಇಲ್ಲಿ ಹುಡಿಯಾಗಿದೆ ತಿಳಿಸಿದರು. ಕಾರು ಕೊಟ್ಟ ಯುವಕನಿಗೆ ಜಗ್ಗನ ಗೇಮ್ ಗೊತ್ತಾಗಿದ್ದೇ ಆಗ.
“ಕಾರು ಕೊಟ್ಟು ಕೆಟ್ಟೆ ” ಅಂತ ಯುವಕ ತಲೆ ಹೊಡ್ಕೊಂಡ್ರೂ ಕಾಲ ಮಿಂಚಿ ಹೋಗಿತ್ತು.
ಹುಡುಗಿಯಂತೆ ಮಾತನಾಡಿ ಎರಡನೇ ಸಲ ಹಣ ವಸೂಲಿ ಮಾಡಲು ಹೋದ ಜಗ್ಗನನ್ನು ಬೋನಿಗೆ ಬೀಳಿಸಿದವರು ಸೂಪರ್ ಪ್ಲಾನ್ ಮಾಡಿ ಮಧ್ಯಾಹ್ನದ ತುಂತುರು ಮಳೆಗೆ ಬಿಸಿ ಬಿಸಿ ಕಜ್ಜಾಯ ಬಡಿಸಿದ್ದರು.
ಕೊನೆಗೆ ಪೊಲೀಸರಿಗೆ ಕರೆ ಮಾಡಿದಾಗ ಹೊಯ್ಸಳ ವಾಹನದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದು ಖತರ್ನಾಕ್ ಯುವಕನನ್ನು ಧರ್ಮಸ್ಥಳ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಯುವಕನನ್ನು ವಶಕ್ಕೆ ಪಡೆದ ಧರ್ಮಸ್ಥಳ ಪೊಲೀಸರು ಜಗ್ಗನ
ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಆ ಮೊಬೈಲ್ ಅಶ್ಲೀಲ ಫೊಟೋ, ವೀಡಿಯೋಗಳಿಂದ ತುಂಬಿ ತುಳುಕುತ್ತಿತ್ತು. ಮೊಬೈಲ್ ನಲ್ಲಿ ಕಂಡು ಬಂದ ರಾಶಿ ರಾಶಿ ಅಶ್ಲೀಲ ವೀಡಿಯೋ, ಫೊಟೋಗ ನೋಡಿದ ಧರ್ಮಸ್ಥಳ ಪೊಲೀಸರೇ ಬೆಚ್ಚಿ ಬಿದ್ದು ತಲೆ ತಿರಗಿ ಬೀಳಲು ಮಾತ್ರ ಬಾಕಿ. ಏನು ಮಹ್ರಾಯ… ನೀನು ಪ್ರಜ್ವಲ್ ರೇವಣ್ಣನ ತಮ್ಮನಾ..?” ಅಂತ ಪೊಲೀಸರೇ ಕೇಳಬೇಕಾದರೆ ಈತನ ಮೊಬೈಲ್ ನಲ್ಲಿ ಏನೇನು ಅಶ್ಲೀಲ ಕಸದ ರಾಶಿ ಇದ್ದಿರಬಹುದು!?
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಖತರ್ನಾಕ್ ನನ್ನು ಹಣ ಕಳೆದುಕೊಂಡ ದಂಪತಿಯ ಮುಂದೆ ಪೊಲೀಸರು ವಿಚಾರಣೆ ನಡೆಸಿದ್ದು ದಂಪತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಲಪಟಾಯಿಸಿದ
ಹಣವನ್ನು ಪೊಲೀಸರ ಸಮಕ್ಷಮ ಒಪ್ಪಿಕೊಂಡಂತೆ ಹೇಗೋ ವಾಪಾಸು ಕೊಟ್ಟಿದ್ದಾನೆ. ಮತ್ತು ಗೂಸಾ ತಿಂದ ಸಂದರ್ಭ ಜಖಂಗೊಂಡ ಸ್ನೇಹಿತನ ಕಾರಿನ ರಿಪೇರಿ ಹಣವನ್ನು ಕೊಡುವುದಾಗಿಯೂ ಒಪ್ಪಿಕೊಂಡಿದ್ದು ಪೊಲೀಸರು ಎಚ್ಚರಿಕೆ ನೀಡಿ ಮುಚ್ಚಳಿಕೆ ಪಡೆದಿದ್ದಾರೆ.
ಇದೀಗ ಈತನ ಇನ್ನಷ್ಟು ಕಚಡಾ ಲಫ್ಡಾಗಳ ಪಟ್ಟಿ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಮೋಹಕ ಮೋಸದ ಗಾಳಕ್ಕೆ ಸಿಲುಕಿಸಿ ಬೆದರಿಸಿ ಹಣ ವಸೂಲಿ ಮಾಡುವುದಕ್ಕಾಗಿ ಕಿಲಾಡಿ ಜಗ್ಗ ಹೆಣೆದ ಮಗ್ಗವನ್ನು
‘ಹನಿಟ್ರ್ಯಾಪ್’ ಎನ್ನಬೇಕೆ? ‘Money ಟ್ರ್ಯಾಪ್’ ಎನ್ನಬೇಕೆ? ಓದುಗರೇ ತೀರ್ಮಾನಿಸಬೇಕು.
















Post Comment