ಧರ್ಮಸ್ಥಳ ಬುರುಡೆ ಪ್ರಕರಣ: ಬೆಳ್ತಂಗಡಿ ಕೋರ್ಟ್ ಗೆ ಚಿನ್ನಯ್ಯ ಹಾಜರು- ಮಧ್ಯಾಹ್ನ ನಂತರವೂ ಮುಂದುವರಿದ ಬಿಎನ್.ಎಸ್.ಎಸ್ 183 ಹೇಳಿಕೆ ದಾಖಲು ಪ್ರಕ್ರಿಯೆ

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ ಮತ್ತು ಕಾನೂನುಬಾಹಿರ ದಫನ ಪ್ರಕರಣದ ಸಾಕ್ಷಿ ದೂರುದಾರ,
ಆರೋಪಿ ಚಿನ್ನಯ್ಯನನ್ನು ಬಾಕಿ ಇರುವ BNSS 183 ಹೇಳಿಕೆಯನ್ನು ದಾಖಲಿಸಲು ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ಸಾಕ್ಷಿ ದೂರುದಾರ ಬುರುಡೆ ಪ್ರಕರಣದ ಆರೋಪಿ ಸೆ.25ರಂದು ಸುಮಾರು 11ಗಂಟೆಗೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬಂದಿದ್ದು ಬಳಿಕ 12 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಚಿನ್ನಯ್ಯನ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು ಇಂದು ಸಂಜೆವರೆಗಿನ ಕಲಾಪ ಸಮಯವನ್ನು ಈತನ ಹೇಳಿಕೆ ದಾಖಲಿಸುವುದಕ್ಕಾಗಿ ಮೀಸಲಿರಿಸಲಾಗಿದೆ ಎಂದು ತಿಳಿದು ಬಂದಿದೆ.














Post Comment