ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ

ಮಾನವೀಯತೆ ಮೆರೆದ ಖಾಸಗಿ ಬಸ್ ಮಾಲಕ ಮತ್ತು ಚಾಲಕ
ಬೆಳ್ತಂಗಡಿ : ಅಕ್ಟೋಬರ್ 2ನೇ ಗುರುವಾರದಂದು ಉಪ್ಪಿನಂಗಡಿ – ಕಕ್ಯಪದವು ಮಧ್ಯೆ ಸಂಚರಿಸುವ “JEEVAN JYOTHI”
(ಜೀವನ್ ಜ್ಯೋತಿ)ಖಾಸಗಿ ಬಸ್ಸಿನಲ್ಲಿ ಚಿನ್ನದ ಉಂಗುರವೊಂದು ಬಸ್ ಮಾಲೀಕರಾದ ಅಝೀಝ್ ಅವರ ಕಣ್ಣಿಗೆ ಬಿತ್ತು.
ಚಿನ್ನವನ್ನು ಹೆಕ್ಕಿಕೊಂಡು ಆ ರಸ್ತೆಯಲ್ಲಿ ಪ್ರಯಾಣಿಸುವ ಹಲವರನ್ನು ಸಂಪರ್ಕಿಸಿ ಚಿನ್ನದ ವಾರಿಸುದಾರರನ್ನು ಪತ್ತೆಹಚ್ಚಲು ಹುಡುಕಾಡಲು ಶುರು ಮಾಡಿದರು.
ಕೆಲವೇ ಗಂಟೆಗಳಲ್ಲಿ ಕಳೆದುಕೊಂಡ ಚಿನ್ನದ ವಾರಿಸುದಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಸ್ ಚಾಲಕ ಮಹಮ್ಮದ್ ಹಾಗೂ ಬಸ್ ಮಾಲೀಕರು ಚಿನ್ನವನ್ನು ವಾಪಾಸ್ ಮರಳಿಸಿದ ಪ್ರಸಂಗ ನಡೆಯಿತು.

ಬಸ್ಸಿನಲ್ಲಿ ಪ್ರಯಾಣಿಸುವವರು ಮನೆಗೆ ಬರುವ ಅತಿಥಿಗಳಂತೆ ಎಂದು ಭಾವನೆಯಿಂದ ಯಾರೋ ಕಳೆದುಕೊಂಡ ಚಿನ್ನದುಂಗುರವನ್ನು ವಾರಸುದಾರರನ್ನು ಹುಡುಕಿ ಗೌರವಯುತವಾಗಿ ಅವರ ಕೈಗೊಪ್ಪಿಸುವ ಮೂಲಕ ಮಾನವೀಯತೆ ಮೆರೆದ ಉಪ್ಪಿನಂಗಡಿ-ಕಕ್ಯಪದವು
‘ಜೀವನ್ ಜ್ಯೋತಿ’ ಬಸ್ ಚಾಲಕ ಮತ್ತು ಮಾಲಕರ ಬಗ್ಗೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇದೇ ರೂಟ್ ನಲ್ಲಿ ಸಂಚರಿಸುವ ‘ಜೀವನ್ ಜ್ಯೋತಿ’ ಬಸ್ ಎಂದರೆ ಪ್ರಯಾಣಿಕರಿಗೆ ಅಚ್ಚು ಮೆಚ್ಚು, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ , ಭದ್ರತೆ ನಮ್ಮ ಜವಾಬ್ದಾರಿ ಎಂಬ ಭಾವನೆ ಹೊಂದಿರುವ ಹೊಂದಿರುವ ಈ ಖಾಸಗಿ ಬಸ್ಸಿನ ಚಾಲಕ ಮತ್ತು ಮಾಲಕರಿಗೆ ಚಿನ್ನದ ವಾರಸುದಾರರು ಕೈಜೋಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.














Post Comment