ಸೌಜನ್ಯ ಪ್ರಕರಣಕ್ಕೆ 13 ವರ್ಷ: ಅಕ್ಟೋಬರ್ 9ರಂದು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನ

ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವ
ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ – ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ರಂದು ಭರ್ತಿ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 9ರಂದು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನವನ್ನಾಗಿ ಆಚರಿಸಲು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕರೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ
ಚಂದಪ್ಪ ಗೌಡ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ 2012ರ ಅಕ್ಟೋಬರ್ 9ರಂದು ಬೆಳಿಗ್ಗೆ ಉಜಿರೆ ಎಸ್ ಡಿ ಎಂ ಕಾಲೇಜಿಗೆ ಹೋದವಳು ಸಂಜೆ ಕಾಲೇಜಿನಿಂದ ಹೊರಟು ಗೆಳತಿಯೊಂದಿಗೆ ಕೆಎಸ್ ಆರ್ ಟಿ ಬಸ್ ಹತ್ತಿದವಳು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದ ಬಳಿಕ ನಾಪತ್ತೆಯಾಗಿದ್ದಳು.

ಮರುದಿನ ಅಂದರೆ ಅಕ್ಟೋಬರ್ 10ರಂದು ಸೌಜನ್ಯಳ ಮೃತದೇಹ ಅತ್ಯಾಚಾರಕ್ಕೊಳಗಾಗಿ ನೇತ್ರಾವತಿ ಸ್ನಾನಘಟ್ಟದ ಸಮೀಪ ಮಣ್ಣಸಂಕ
ಎಂಬಲ್ಲಿ ಪತ್ತೆಯಾಗಿತ್ತು. ಸೌಜನ್ಯ ಪ್ರಕರಣಕ್ಕೆ 13 ವರ್ಷಗಳು ತುಂಬುತ್ತಿರುವ ಅಕ್ಟೋಬರ್ 9ರಂದು ರಾಜ್ಯದಾದ್ಯಂತ ತಾಲೂಕು , ಜಿಲ್ಲಾ ಮಟ್ಟದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಳಿಕ ಆಯಾ ತಹಶೀಲ್ದಾರ್ , ಜಿಲ್ಲಾಧಿಕಾರಿ ಮೂಲಕ ವೇದವಲ್ಲಿ , ಪದ್ಮಲತಾ , ಆನೆ ಮಾವುತ ನಾರಾಯಣ , ಸಹೋದರಿ ಯಮುನಾ ಮತ್ತು ಸೌಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ , ಎಸ್ಐಟಿ ತನಿಖೆ ನ್ಯಾಯಯುತವಾಗಿ ನಡೆಸಲು ಮತ್ತು ಸೌಜನ್ಯ ಪರ ಹೋರಾಟಗಾರರ ಮೇಲಿನ ದೌರ್ಜನ್ಯ ನಿಲ್ಲಿಸಲು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ವೇದಿಕೆ ತಿಳಿಸಿದೆ.
ಅಂದು ಬೆಳಗ್ಗೆ 10 ಘಂಟೆಗೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ “ಧರ್ಮಸ್ಥಳ ದೌರ್ಜನ್ಯಗಳು – ಇತಿಹಾಸ ಮತ್ತು ವರ್ತಮಾನ” ಎಂಬ ಪುಸ್ತಕ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.















Post Comment