ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪೀಠದತ್ತ ಶೂ ಎಸೆತ : ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಲು ಒತ್ತಾಯಿಸಿ ದ.ಸಂ.ಸ. (ಅಂಬೇಡ್ಕರ್ ವಾದ) ಮನವಿ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪೀಠದತ್ತ ಶೂ ಎಸೆತ : ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಲು ಒತ್ತಾಯಿಸಿ ದ.ಸಂ.ಸ. (ಅಂಬೇಡ್ಕರ್ ವಾದ) ಮನವಿ

Share
IMG_20251010_114252-1 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪೀಠದತ್ತ   ಶೂ ಎಸೆತ : ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಲು ಒತ್ತಾಯಿಸಿ ದ.ಸಂ.ಸ. (ಅಂಬೇಡ್ಕರ್ ವಾದ) ಮನವಿ

ಬೆಳ್ತಂಗಡಿ : ನಮ್ಮ ದೇಶದ ಸುಪ್ರೀಂ ಕೋರ್ಟ್ ನ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಪೀಠದತ್ತ ಶೂ ಎಸೆದ ಸನಾತನವಾದಿ ಆರೋಪಿ ರಾಕೇಶ್ ಕುಮಾರ್ ನನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮುಖಂಡರುಗಳ ನಿಯೋಗವು ಗುರುವಾರ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಿಗೆ ಮನವಿ ಹಸ್ತಾಂತರಿಸಿತು.

ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಸೇರಿದ ದಲಿತ ಮುಖಂಡರುಗಳು ಮಾನ್ಯ ನ್ಯಾಯಮೂರ್ತಿಗಳನ್ನು ಅವಮಾನಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಮುಖಂಡರಾದ ಶ್ರೀಧರ ಕಳೆಂಜ ಮನವಿ ಮಂಡಿಸಿದರು.

ಸಲ್ಲಿಸಿದ ಮನವಿಯಲ್ಲಿ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ಸಂವಿಧಾನಕ್ಕೆ ನ್ಯಾಯಾಂಗಕ್ಕೆ ಮಾಡಿದ ಅವಮಾನವಾಗಿದ್ದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಾಶಪಡಿಸುತ್ತದೆ. ಇಂತಹ ಕೃತ್ಯವನ್ನು ಎಸಗಿದಾತನ ಮೇಲೆ ಕೂಡಲೇ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು , ಭಾರತೀಯ ಬಾರ್ ಕೌನ್ಸಿಲ್ ಈತನ ಪರವಾನಗಿಯನ್ನು ರದ್ದು ವಕೀಲಿ ವೃತ್ತಿಯಿಂದ ವೃತ್ತಿಯಿಂದ ವಜಾಗೊಳಿಸಬೇಕು , ದೇಶದ ಯಾವುದೇ ನ್ಯಾಯಾಲಯ , ನ್ಯಾಯ ಮಂಡಳಿ , ಕಾನೂನು ಪ್ರಾಧಿಕಾರದಲ್ಲಿ ವಕಾಲತ್ತು ನಡೆಸದಂತೆ ತಡೆಯಬೇಕು ಎಂದು ಒತ್ತಾಯಿಸಲಾಗಿದೆ‌.

IMG_20251004_110442-5 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪೀಠದತ್ತ   ಶೂ ಎಸೆತ : ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಲು ಒತ್ತಾಯಿಸಿ ದ.ಸಂ.ಸ. (ಅಂಬೇಡ್ಕರ್ ವಾದ) ಮನವಿ

ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಮೂಲಕ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಕರ್ನಾಟಕ ದ.ಸಂ.ಸ. (ಅಂಬೇಡ್ಕರ್ ವಾದ) ಮುಖಂಡರುಗಳಾದ ಬಿ.ಕೆ.ವಸಂತ್ ಬೆಳ್ತಂಗಡಿ, ಶೇಖರ್ ಕುಕ್ಕೇಡಿ, ರಮೇಶ್ ಆರ್ ಬೆಳ್ತಂಗಡಿ, ಶ್ರೀಧರ್ ಕಳೆಂಜ ,
ನಾರಾಯಣ ಪುದುವೆಟ್ಟು, ಸುಂದರ ನಾಲ್ಕೂರು,
ಶೀನ ಮಕ್ಕಿಜೆ ಶೇಖರ್ ಕೊಯ್ಯೂರು ಯತೀಶ್ ಧರ್ಮಸ್ಥಳ,
ಹರೀಶ್ ಉಜಿರೆ ಬಾಬು ಗೇರುಕಟ್ಟೆ, ಉಮೇಶ್ , ವಕೀಲರಾದ ಕು. ಶ್ವೇತಾ ಕರಂಬಾರು, ಕು. ಸುಮಾ, ಸುದರ್ಶನ್ ಮಂಜಿಲ ವಿಠ್ಠಲ ಸಾವ್ಯ, ರಾಜೇಶ್ ಭಟ್ ಸವಣಾಲು, ವಕೀಲ ಕಿರಣ್ ಸವಣಾಲು ಶೇಖರ್ ಲಾಯಿಲ, ಯಮುನಾ ಲಾಯಿಲ,
ಶೀನಪ್ಪ ಮಲೆಬೆಟ್ಟು ಮತ್ತಿತರರು ಪಾಲ್ಗೊಂಡಿದ್ದರು.

Previous post

ಸೌಜನ್ಯ ಪ್ರಕರಣಕ್ಕೆ 13 ವರ್ಷ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ಜನಾಗ್ರಹ ಸಭೆ

Next post

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಅವಮಾನ, ಸಂವಿಧಾನದ ಮೇಲಿನ ದಾಳಿ: ಸಂತೋಷ್ ಕುಮಾರ್ ಲಾಯಿಲ

Post Comment

ಟ್ರೆಂಡಿಂಗ್‌

error: Content is protected !!