ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದ ಹಿಂದೆ ಡಿವೈಎಸ್ ಪಿ ‘ಷಡ್ಯಂತ್ರ ‘ವರದಿ


ಬೆಳ್ತಂಗಡಿ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಗಡಿಪಾರು ಆದೇಶ ನೀಡಲು ಬಂಟ್ವಾಳ ಡಿವೈಎಸ್ಪಿ ಅವರು ಸುಳ್ಳು ಮತ್ತು ದುರುದ್ದೇಶಪೂರಿತ ವರದಿ ನೀಡಿರುವುದು ಕಾನೂನು ಉಲ್ಲಂಘನೆ ಆಗಿದೆ. ಈ ಕುರಿತು ತನಿಖೆ ಮತ್ತು ಕ್ರಮ ಕೈಗೊಳ್ಳಬೇಕು ಎಂದು ಇನ್ನೋರ್ವ ಸೌಜನ್ಯ ಹೋರಾಟಗಾರ ‘ನೀತಿ’ ಜಯಂತ್ ಟಿ ಒತ್ತಾಯಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ಅವರು ಉಲ್ಲೇಖಿಸಿರುವ 26 ಪ್ರಕರಣಗಳ ಪೈಕಿ 13 ಪ್ರಕರಣಗಳು ನ್ಯಾಯಾಲಯದಿಂದ ಖುಲಾಸೆಯಾಗಿವೆ ಎಂದು ಹೇಳಿದ್ದಾರೆ. ಆದರೆ ಅವರು ಖುಲಾಸೆ ಆದೇಶಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ “ಸಾಕ್ಷಿದಾರರನ್ನು ಹೆದರಿಸಿದ್ದಾರೆ” ಎಂದು ಹೇಳಿದ್ದಾರೆ. ಇದು ನ್ಯಾಯಾಲಯದ ತೀರ್ಪಿನ ವಿರುದ್ಧ ತಪ್ಪು ವ್ಯಾಖ್ಯಾನ ಮತ್ತು ನ್ಯಾಯಾಂಗ ನಿಂದನೆಯಾಗಿದೆ ಎಂದು ಜಯಂತ್ ಟಿ ಹೇಳಿದ್ದಾರೆ.
ಡಿವೈಎಸ್ಪಿ ಅವರು ಸಹಾಯಕ ಆಯುಕ್ತರಿಗೆ ನೀಡಿದ ವರದಿಯಲ್ಲಿ ನಿಜವಾದ ದಾಖಲೆಗಳಿಲ್ಲದೆ ಸುಳ್ಳು ಮಾಹಿತಿ ನೀಡಿದ್ದು ಇದು
(IPC Sec 182, 177) ಉಲ್ಲಂಘನೆಯಾಗಿದೆ, ವರದಿ ಸಿದ್ಧಪಡಿಸುವಾಗ ಯಾವುದೇ ಎಫ್ ಐಆರ್ ಅಥವಾ ಸಾಕ್ಷ್ಯ ದಾಖಲೆ ಇಲ್ಲದೆ ಪಿರ್ಯಾದಿದಾರರ ಹೇಳಿಕೆಗಳನ್ನು ಉಲ್ಲೇಖಿಸಿರುವುದು (CrPC Sec 154, 157 ಮತ್ತು Indian Evidence Act Sec 114(g)) ಉಲ್ಲಂಘನೆಯಾಗಿದೆ ಎಂದು ಜಯಂತ್ ಟಿ ಆರೋಪಿಸಿದ್ದಾರೆ.
1963 Section 56 ಅಡಿಯಲ್ಲಿ ಸಾರ್ವಜನಿಕ ಶಾಂತಿಗೆ ಅಪಾಯವಿದ್ದಾಗ ಮಾತ್ರ ಕೈಗೊಳ್ಳಬಹುದದು ಆದರೆ ಈ ಪ್ರಕರಣದಲ್ಲಿ ಯಾವುದೇ ಶಾಂತಿ ವ್ಯತ್ಯಯದ ದಾಖಲೆ ಇಲ್ಲ. ಆದ್ದರಿಂದ ಗಡಿಪಾರು ಆದೇಶವು ಕಾನೂನುಬಾಹಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಡಿವೈಎಸ್ಪಿ ವರದಿಯಲ್ಲಿ “ರೌಡಿ ಪ್ರವೃತ್ತಿಯುಳ್ಳವರು, ದರ್ಪಿಗಳಾಗಿದ್ದಾರೆ” ಎಂದು ಹೇಳಿದ್ದು ಯಾವುದೇ ಅಧಿಕೃತ ತನಿಖೆ ಅಥವಾ ಪುರಾವೆ ಇಲ್ಲದೆ ವೈಯಕ್ತಿಕ ಅಭಿಪ್ರಾಯದ ಆಧಾರದಲ್ಲಿ ನೀಡಲಾಗಿದೆ. ಇದು (IPC Sec 499, 500) ಮಾನಹಾನಿ ಹಾಗೂ (All India Services Conduct Rules 1968 Rule 3(1)(ii)) ಉಲ್ಲಂಘನೆಯಾಗಿದೆ. ನ್ಯಾಯಾಲಯದ ಖುಲಾಸೆ ಆದೇಶಗಳನ್ನು ತಿರಸ್ಕರಿಸುವ ಮೂಲಕ ಡಿವೈಎಸ್ಪಿ ಅವರು ನ್ಯಾಯಾಂಗದ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಹಾಗೂ ನ್ಯಾಯಾಂಗ ನಿಂದನೆಯಾಗಿದೆ. ಗಡಿಪಾರು ಕ್ರಮದ ಹಿಂದೆ ರಾಜಕೀಯ ಅಥವಾ ಧಾರ್ಮಿಕ ಒತ್ತಡ ಇರುವ ಶಂಕೆ ಇದೆ, ಇದು ಅಧಿಕಾರ ದುರ್ಬಳಕೆಯ ಸೂಚನೆಯಾಗಿದ್ದು ಈ ಬಗ್ಗೆ
(Prevention of Corruption Act 1988 Sec 13(1)(d), IPC Sec 120B Criminal Conspiracy) ಅಡಿಯಲ್ಲಿ ತನಿಖೆ ಅಗತ್ಯವಿದೆ , ಈ ಕ್ರಮವು ನ್ಯಾಯಕ್ಕಾಗಿ ಹೋರಾಡುವವರ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ
ಉಲ್ಲಂಘನೆಯಾಗಿದೆ ಹಾಗೂ ಈ ಕ್ರಮವು ರಾಷ್ಟ್ರೀಯ
ಮಾನವಹಕ್ಕುಗಳ ಪ್ರಕಾರ ಪೊಲೀಸ್ ಅಧಿಕಾರದ ದುರುಪಯೋಗವಾಗಿದೆ ಜಯಂತ್ ಟಿ ಆರೋಪಿಸಿದ್ದಾರೆ.
ಡಿವೈಎಸ್ಪಿ ಅವರ ವರದಿ ನ್ಯಾಯಾಲಯದಿಂದ ಖುಲಾಸೆಯಾದ ಪ್ರಕರಣಗಳನ್ನು ಮರುಪರಿಗಣಿಸಿ ತಪ್ಪು ಚಿತ್ರಣ ನೀಡಿದೆ. ಇದು ನ್ಯಾಯಾಂಗ ತೀರ್ಪಿನ ಅಪಮಾನ ಮತ್ತು ಸಾರ್ವಜನಿಕ ಗೊಂದಲಕ್ಕೆ ಕಾರಣವಾಗಿದೆ. ಡಿವೈಎಸ್ಪಿ ಅವರು “ನಾನು ಹೇಳಿದ್ದೇ ಸರಿ” ಎಂಬ ರೀತಿಯ ವೈಯಕ್ತಿಕ ಹೇಳಿಕೆಯನ್ನು ಅಧಿಕೃತ ವರದಿಯಲ್ಲಿ ಬಳಸಿರುವುದು ಅಧಿಕಾರ ದುರ್ಬಳಕೆಯ ಸ್ಪಷ್ಟ ಉದಾಹರಣೆಯಾಗಿದೆ.
ಸೌಜನ್ಯ ನ್ಯಾಯ ಹೋರಾಟ ಹತ್ತಿಕ್ಕಲು ಡಿವೈಎಸ್ಪಿ ವರದಿ ದುರುದ್ದೇಶಪೂರಕವಾಗಿ ತಯಾರಿಸಲಾಗಿದೆ.
ನ್ಯಾಯಾಲಯದಲ್ಲಿ ಖುಲಾಸೆಯಾದ 13 ಪ್ರಕರಣಗಳನ್ನು ಮತ್ತೆ ಪ್ರಸ್ತಾಪಿಸಿ ಹೋರಾಟಗಾರರ ವಿರುದ್ಧ ತಪ್ಪು ಚಿತ್ರಣ ನೀಡಲಾಗಿದೆ. ಇದು Article 19 ಮತ್ತು 21ರ ಉಲ್ಲಂಘನೆಯಾಗಿದೆ,
ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ದಾಖಲಾಗಿರುವ 26 ಪ್ರಕರಣಗಳಲ್ಲಿ 13 ಖುಲಾಸೆಯಾಗಿವೆ 3 ವಿಚಾರಣೆಯಲ್ಲಿವೆ,
6 ತನಿಖೆಯ ಹಂತದಲ್ಲಿವೆ. ಆದರೆ ಯಾವುದೇ ಹೊಸ ಸಾರ್ವಜನಿಕ ಶಾಂತಿಭಂಗ ಪ್ರಕರಣದ ದಾಖಲೆ ಇಲ್ಲದೆ ಗಡಿಪಾರು ಮಾಡಲಾಗಿದೆ ಎಂದು ಹೋರಾಟಗಾರ ಜಯಂತ್ ಟಿ ಆರೋಪಿಸಿದ್ದಾರೆ. ಈ ಕ್ರಮವು ಪ್ರಜಾಪ್ರಭುತ್ವದ ವಿರುದ್ಧದ ದಮನವಾಗಿದೆ. ನ್ಯಾಯಕ್ಕಾಗಿ ಹೋರಾಡುವ ನಾಗರಿಕನನ್ನು ಕಾನೂನುಬಾಹಿರವಾಗಿ ಮೌನಗೊಳಿಸುವುದು Article 14, 19, 21 ಉಲ್ಲಂಘನೆಯಾಗಿದೆ,
ಈ ವರದಿಯ ಹಿಂದೆ ರಾಜಕೀಯ ಅಥವಾ ಪ್ರಭಾವಶಾಲಿ ವಲಯದ ಒತ್ತಡ ಇರುವ ಸಾಧ್ಯತೆ ಇದೆ. ಸರ್ಕಾರದ ಅಧಿಕಾರಿಗಳು ಜನಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡಬೇಕಾದರೆ, ಡಿವೈಎಸ್ಪಿ ಅವರು ಪ್ರಭಾವಶಾಲಿಗಳ ಒತ್ತಡಕ್ಕೆ ಒಳಗಾಗಿ ನ್ಯಾಯ ಹೋರಾಟಗಾರರ ವಿರುದ್ಧ ವರದಿ ನೀಡಿದ್ದಾರೆ ಎಂಬುದು ಜಯಂತ್ ಟಿ ಅವರ ಆರೋಪವಾಗಿದೆ.

ಗಡಿಪಾರು ಆದೇಶ ನೀಡುವ ಮೊದಲು ಆರೋಪಿಯ ವಾದ ಕೇಳದೆ ನಿರ್ಧಾರ ಕೈಗೊಳ್ಳಲಾಗಿದ್ದು ಇದು ಮಾನವಹಕ್ಕುಗಳಿಗೆ ಮಾಡಿರುವ ಹಾನಿಯಾಗಿದೆ, ಈ ಘಟನೆ ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲಿನ ನಂಬಿಕೆಗೆ ಧಕ್ಕೆ ಉಂಟು ಮಾಡಿದೆ ಮತ್ತು ರಾಜ್ಯದ ಕಾನೂನು ವ್ಯವಸ್ಥೆಯ ಗೌರವ ಕುಸಿಯುವಂತೆ ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿವೈಎಸ್ಪಿ ಬಂಟ್ವಾಳ ಅವರ ವರದಿಯನ್ನು ಮರುಪರಿಶೀಲಿಸಬೇಕು, ವರದಿ ತಯಾರಿಸಿದ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು, ಗಡಿಪಾರು ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು, ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೊಳಪಡಿಸಬೇಕು, ಮಾನವ ಹಕ್ಕು ಆಯೋಗ ಮತ್ತು ಲೋಕಾಯುಕ್ತ ತನಿಖೆಗೆ ದಾಖಲಿಸಬೇಕು ಎಂದು ಜಯಂತ್ ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಇಂಥ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ನ್ಯಾಯಾಂಗ ಗೌರವಕ್ಕೆ ಹಾನಿ ಮತ್ತು ನಾಗರಿಕರ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಸೌಜನ್ಯ ಹೋರಾಟಗಾರ ‘ನೀತಿ’ ತಂಡದ ಜಯಂತ್ ಟಿ , ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶದಲ್ಲಿ ಡಿವೈಎಸ್ಪಿ ಅವರು ಎಸಗಿರಬಹುದಾದ ಕಾನೂನಾತ್ಮಕ ಗಂಭೀರ ಎಡವಟ್ಟುಗಳ ಬಗ್ಗೆ ಕಾನೂನಾತ್ಮಕ ಸೂಕ್ಷ್ಮ ವಿಶ್ಲೇಷಣೆಗಳೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.
















Post Comment