ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು

ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು

Share
IMG-20251015-WA0006 ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ  ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು

ಬೆಳ್ತಂಗಡಿ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶವನ್ನು ಪ್ರಶ್ನಿಸಿ ಮಾಧ್ಯಮಗಳಿಗೆ ವೀಡಿಯೋ ನೀಡಿರುವ ಸೌಜನ್ಯ ಹೋರಾಟಗಾರ ‘ನೀತಿ’ ಜಯಂತ್.ಟಿ. ವಿರುದ್ಧ ಬೆಳ್ತಂಗಡಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳ ವರದಿಯ ಆಧಾರದಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಅವರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆ.18ರಂದು ಆದೇಶ ಹೊರಡಿಸಿದ್ದರು.

InShot_20251003_221444379-1024x1024 ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ  ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು

ಈ ಗಡಿಪಾರು ಆದೇಶವನ್ನು ಪ್ರಶ್ನಿಸಿ ಹೋರಾಟಗಾರ ಜಯಂತ್ ಟಿ ಪ್ರಶ್ನಿಸಿ ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೋ ಹೇಳಿಕೆ ನೀಡಿದ್ದು ಇದೀಗ ಗಡಿಪಾರು ಆದೇಶದಲ್ಲಿ ಪರಿಗಣಿಸಲಾದ ವರದಿಯ ಅಂಶಗಳು ಸರಿಯಾಗಿದೆ ಎಂದು ತಿಳಿದಿದ್ದರೂ ಜನರನ್ನು ಪ್ರಚೋದಿಸಲು ಸುಳ್ಳು ಮಾಹಿತಿಗಳ ಮೂಲಕ ಬಂಟ್ವಾಳ ಡಿವೈಎಸ್ಪಿ ಮತ್ತು ಪುತ್ತೂರು ಎಸಿ ವಿರುದ್ಧ ಹೋರಾಟಗಾರ ಜಯಂತ್ ಟಿ ಎಂಬವರು ವಿಡಿಯೋ ಮಾಡಿಪ್ರಸಾರದ ಮೂಲಕ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ BNS-353(1)(b) ಅಡಿಯಲ್ಲಿ ಜಯಂತ್ ಟಿ ವಿರುದ್ಧ
ಅ.14 ರಂದು ಸುಮೊಟೊ ಪ್ರಕರಣ ದಾಖಲಾಗಿದೆ.

IMG-20251011-WA0001 ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ  ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು
Previous post

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದ ಹಿಂದೆ ಡಿವೈಎಸ್ ಪಿ ‘ಷಡ್ಯಂತ್ರ ‘ವರದಿ

Next post

ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ

Post Comment

ಟ್ರೆಂಡಿಂಗ್‌

error: Content is protected !!