ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ

ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ

Share
IMG-20251018-WA0005 ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ  ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ

ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗಿ ಮನೆಗೆ ಮರಳಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಹಣವಿದ್ದ ಬ್ಯಾಗ್ ಒಂದನ್ನು ಅದೇ ಬಸ್ ಮಾಲಕ ಮತ್ತು ಸಿಬ್ಬಂದಿ ಬ್ಯಾಗನ್ನು ವಾರಸುದಾರರಿಗೆ ತಲುಪಿಸಿ ಮಾನವೀಯತೆ ಮೆರೆದ ಮತ್ತೊಂದು ಪ್ರಸಂಗ ಅಕ್ಟೋಬರ್ 17ರ ಶುಕ್ರವಾರ ನಡೆದಿದೆ.
ಉಪ್ಪಿನಂಗಡಿ – ಬಾಜಾರ ಮಧ್ಯೆ ಸಂಚರಿಸುವ ‘ಜೀವನ್ ಜ್ಯೋತಿ’ ಖಾಸಗಿ ಬಸ್ಸಿನಲ್ಲಿ ಹಣ ಇರುವ ಬ್ಯಾಗ್ ಒಂದು ಬಸ್ ನಿರ್ವಾಹಕ ಹಾಗೂ ಮಾಲಕರಾದ ಅಝೀಝ್ ಜೆಜೆ ಅವರಿಗೆ ಸಿಕ್ಕಿತ್ತು. ಬ್ಯಾಗ್ ಸಿಕ್ಕಿದ ಕೂಡಲೇ ಯಾರದೆಂದು ವಿಚಾರಿಸಿದಾಗ ಬ್ಯಾಗ್ ಕಳೆದುಕೊಂಡವರು ಬಸ್ಸಿನಲ್ಲಿ ಇರಲಿಲ್ಲ. ಈ ಬಗ್ಗೆ ಬಸ್ಸಿನ ಮಾಲಕ ಮತ್ತು ನಿರ್ವಾಹಕ ಹಲವು ಗಂಟೆಗಳ ಕಾಲ ವಾರಿಸುದಾರರಿಗಾಗಿ ವಿಚಾರಿಸಿ ಹುಡುಕಾಡಿ ಕೊನೆಗೆ ಪರ್ಸ್ ಕಳೆದುಕೊಂಡ ಮಹಿಳೆ ಬಂದು ವಿಚಾರಿಸಿದಾಗ ಪರ್ಸ್ ನಲ್ಲಿದ್ದ ವಸ್ತು ಹಾಗೂ ಹಣದ ಮೊತ್ತ , ಗುರುತು ಮತ್ತು ಮಾಹಿತಿ ತಿಳಿದುಕೊಂಡು ಪರ್ಸ್ ಅನ್ನು ಕೊಟ್ಟು ಮಾನವೀಯತೆ ಮೆರೆದರು.


ಪರ್ಸ್ ಕಳೆದುಕೊಂಡ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಿದ್ದು ಆ ತಾಯಿ ಹಣ ಕಳೆದುಕೊಂಡು ತುಂಬಾ ನೊಂದಿದ್ದು ಕಳೆದುಕೊಂಡ ಹಣದ ಆಸೆ ಬಿಟ್ಟಿದ್ದರು. ಆಸೆಯನ್ನೇ ಬಿಟ್ಟಿದ್ದ ಪರ್ಸ್ ಹಣ ಮತ್ತೆ ಕೈ ಸೇರಿದಾಗ ಮಹಿಳೆ ಕಣ್ಣಲ್ಲಿ ಆನಂದ ಭಾಷ್ಪ ಕಂಡಿತ್ತು.
ಆ ಮಹಿಳೆ ಪರ್ಸ್ ಹಿಂದಿರುಗಿಸಿದ ಬಸ್ ಮಾಲಕ ಮತ್ತು ನಿರ್ವಾಹಕರಿಗೆ ಧನ್ಯವಾದ ಸಲ್ಲಿಸಿ ತುಂಬು ಹೃದಯದಿಂದ ಆಶೀರ್ವದಿಸಿ ಹೋದರು.

IMG-20251018-WA0001-1024x723 ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ  ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ


ಏನೇ ಆಗಲಿ ಕೆಲ ದಿನಗಳ ಹಿಂದೆಯಷ್ಟೇ ಕಳೆದುಕೊಂಡ ಚಿನ್ನವನ್ನು ಹಿಂದಿರುಗಿಸಿದ ‘ಜೀವನ್ ಜ್ಯೋತಿ’ ಬಸ್ ಮಾಲಕರು ಮತ್ತು ಸಿಬ್ಬಂದಿ ವರ್ಗ ಇದೀಗ ಮತ್ತೆ ಕಿಕ್ಕಿದ ಹಣದ ಪರ್ಸ್ ನ್ನು ಹಿಂದಿರುಗಿಸಿದ ಉಪ್ಪಿನಂಗಡಿ – ಕಕ್ಯಪದವು ಮತ್ತು ಉಪ್ಪಿನಂಗಡಿ – ಬಾಜಾರ ಮಧ್ಯೆ ಸಂಚರಿಸುವ ಪ್ರಯಾಣಿಕರು ‘ಜೀವನ್ ಜ್ಯೋತಿ’ ಬಸ್ಸಿನ ಮಾಲಕ , ಸಿಬ್ಬಂದಿಯ ಪ್ರಾಮಾಣಿಕ ಮತ್ತು ಮಾನವೀಯ ಸೇವೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

InShot_20251003_221444379-2-1024x1024 ಉಪ್ಪಿನಂಗಡಿ : ಆಸ್ಪತ್ರೆಗೆ ಹೋಗುವ ವೇಳೆ ಖಾಸಗಿ ಬಸ್ಸಿನಲ್ಲಿ ಬ್ಯಾಗ್ ಕಳೆದುಕೊಂಡ  ಮಹಿಳೆ: ಬಸ್ಸಿನಲ್ಲಿ ಸಿಕ್ಕಿದ ಹಣದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಮಾಲಕ
Previous post

ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು

Next post

ರಾಜ್ಯ ಮಟ್ಟದ ವಾಲಿಬಾಲ್ ನಲ್ಲಿ ಅತ್ಯತ್ತಮ ‘ಸರ್ವಾಂಗೀಣ ಆಟಗಾರ’ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಿಶಿರ್ ಜಯವಿಕ್ರಮ್

Post Comment

ಟ್ರೆಂಡಿಂಗ್‌

error: Content is protected !!