ಈ ಜಗದೀಶ್ ಒಬ್ಬ ‘ಬಿ.ಖಾತಾ’ ಬ್ರೋಕರ್..!!

ಬೆಳ್ತಂಗಡಿ : ಹಳೇ ಬಸ್ ನಿಲ್ದಾಣದ ಸಾಮಾಗ್ರಿ ವಿಲೇವಾರಿ , ಚರ್ಚ್ ರೋಡ್ ಇಂಟರ್ ಲಾಕ್, ಸ್ಮಶಾನದ ಕಾಮಗಾರಿ ವಿಚಾರದಲ್ಲಿ ಸ್ಮಶಾನ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಂದೇಶ ಹಾಕಿದ್ದಾರೆ, ಆದರೆ ನಾನಾಗಲಿ ನಮ್ಮ ಮುಖ್ಯಾಧಿಕಾರಿಯಾಗಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, 40 ಲಕ್ಷ ರೂ. ವೆಚ್ಚದ ಸುಸಜ್ಜಿತ ಸ್ಮಶಾನ ನಿರ್ಮಾಣ ಮಾಡಿದೆವು , ಆದರೆ ಬಿ.ಖಾತಾ ಬ್ರೋಕರ್ ಜಗದೀಶ್ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಿದ್ದಾನೆ. ಬ್ರೋಕರ್ ಜಗದೀಶನ ಗುರು ಬ್ರಹ್ಮಾಂಡ ಭ್ರಷ್ಟಾಚಾರ ಕುಟುಂಬದಿಂದ ಬಂದವನು ಎಂದು ಪಟ್ಟಣ ಪಂಚಾಯಿತ್ ಅಧ್ಯಕ್ಷ ಜಯಾನಂದ ಆರೋಪಿಸಿದ್ದಾರೆ.

ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜಯಾನಂದ ಗೌಡ ಬಸ್ ನಿಲ್ದಾಣದ ಸಾಮಾಗ್ರಿ ಮತ್ತು ಚರ್ಚ್ ರಸ್ತೆ ಇಂಟರ್ ಲಾಕ್ ಗಳನ್ನು ಮೊದಲೇ ಪಟ್ಟಣ ಪಂಚಾಯತ್ ನಿರ್ಣಯಗಳನ್ನು ಮಾಡಿ ಕಾನೂನು ಪ್ರಕಾರ ವಿಲೇವಾರಿ ಮಾಡಲಾಗಿದೆ, ನಿರುಪಯುಕ್ತ ಗುಜರಿ ಸಾಮಾಗ್ರಿಗಳನ್ನು ಮೂರು ಮಂದಿ ಗುಜರಿ ವ್ಯಾಪಾರಿಗಳನ್ನು ಸಂಪರ್ಕಿಸಿ ಹೆಚ್ಚು ಬೆಲೆ ಕೊಡುವ ವ್ಯಾಪಾರಿಗೆ ಕೊಡಲಾಗಿದೆ, ಇತರ ಕೆಲವು ಸಾಮಾಗ್ರಿಗಳನ್ನು ಗುತ್ತಿಗೆದಾರರು ವಿನಂತಿಸಿಕೊಂಡ ಮೇರೆಗೆ ನೂತನ ಸ್ಮಶಾನದ ದಾಸ್ತಾನು ಕಟ್ಟಡಕ್ಕೆ ಬಳಸಲು ನೀಡಲಾಗಿದೆ, ಹಾಗೂ ಚರ್ಚ್ ರಸ್ತೆಯಿಂದ ತೆಗೆದ ಇಂಟರ್ ಲಾಕ್ ಗಳನ್ನು ಸಂಬಂಧಪಟ್ಟವರ ವಿನಂತಿ ಮತ್ತು ಅರ್ಜಿಯ ಮೇರೆಗೆ ಜೂನಿಯರ್ ಕಾಲೇಜು ಸೈನ್ಸ್ ಬ್ಲಾಕ್ ಹಾಗೂ ಲಾಯಿಲಾ ಹಿಂದೂ ರುದ್ರ ಭೂಮಿ ಅಭಿವೃದ್ಧಿಗೆ ನೀಡಲಾಗಿದೆ, ಆದರೆ ಸ್ಶಶಾನದಲ್ಲಿ ರಾಜಕೀಯ ಮಾಡುವವನು ಅದೇ ಸ್ಮಶಾನಕ್ಕೆ ಹೋಗುತ್ತಾನೆ ಎಂದು ವಾಗ್ಬಾಣ ಬಿಟ್ಟರು.
ನಾವು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ, ಯಾವ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ, ಅಪಪ್ರಚಾರ ಮಾಡಿದವರನ್ನು ಮಾರಿಯಮ್ಮನೇ ನೋಡಿಕೊಳ್ಳಲಿ ಎಂದು ಸವಾಲು ಹಾಕಿದ ಜಯಾನಂದ ಗೌಡ , ಏನಾದರೊಂದು ತಾಂತ್ರಿಕ ಸಮಸ್ಯೆಗಳ ನೆಪದಲ್ಲಿ ಕಚೇರಿಗೆ ಬಂದು ಅಧಿಕಾರಿಗಳಿಗೆ , ಸಿಬ್ಬಂದಿಗಳಿಗೆ ಬೆದರಿಕೆ ಹಾಕುವ ಜಗದೀಶ್ ನನ್ನು ಔಷಧಿ ವ್ಯಾಪಾರಿಗಳ ಸಂಘದಲ್ಲಿ ಅವ್ಯವಹಾರ ಮಾಡಿದ್ದಕ್ಕೆ ಕಿತ್ತೆಸೆದಿದ್ದಾರೆ. ಬ್ಯಾಂಕಿನವರು ಲೋನ್ ಕೊಟ್ಟಿಲ್ಲ ಎಂಬ ಸಿಟ್ಟಿನಲ್ಲಿ ವಿಘ್ನೇಶ್ ಕಟ್ಟಡದ ಚರಂಡಿ ಸಮಸ್ಯೆಯನ್ನು ವಿವಾದ ಮಾಡಿದ್ದು ಜಗದೀಶ್, ನಾನು ಇವನ ಹಾಗೆ ಬ್ರೋಕರ್ ಗಿರಿ ಮಾಡುವುದಿಲ್ಲ, ನನಗೆ ಅಪ್ಪ ಮಾಡಿದ ಆಸ್ತಿ ಇದೆ, ನಾನು
ದುಡಿದದ್ದು ಇದೆ ಎಂದು ಟಾಂಗ್ ಕೊಟ್ಟರು.
ಇದು ದ್ವೇಷದ ರಾಕೀಯ ವಸಂತ ಬಂಗೇರ, ಗಂಗಾಧರ ಗೌಡ ಯಾರೂ ದ್ವೇಷದ ರಾಜಕಾರಣ ಮಾಡುತ್ತಿರಲಿಲ್ಲ ಎಂದು ಜಯಾನಂದ ಗೌಡ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬೆಳ್ತಂಗಡಿ ಸ್ಮಶಾನ ಸಮಿತಿಯ ಅಧ್ಯಕ್ಷರುಗಳಾದ ಶಶಿಧರ ಪೈ, ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು.

























Post Comment