ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ

ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ

Share
IMG-20251103-WA0004-1024x768 ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ

ಮುಂದಿನ ವಾರ ಕರೆ ಮುಹೂರ್ತ

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ವೀರ – ವಿಕ್ರಮ ಜೋಡುಕರೆ ಕಂಬಳ ಹೊಕ್ಕಾಡಿಗೋಳಿ ಇದರ ಪ್ರಥಮ ಹಂತದ ಪೂರ್ವಭಾವಿ ಸಭೆಯು ಕಂಬಳ ವಠಾರದಲ್ಲಿ ನವೆಂಬರ್ 2ನೇ ಭಾನುವಾರ ಜರಗಿತು.

ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು ವಹಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರ ಪ್ರಮುಖರು, ಕಂಬಳಾಭಿಮಾನಿಗಳು ಚರ್ಚಿಸಿದ ಬಳಿಕ ಡಿಸೆಂಬರ್ 21ರಂದು ಹೊಕ್ಕಾಡಿಗೋಳಿ ಕಂಬಳವು ವಿಜೃಂಭಣೆಯಿಂದ ಜರಗಲಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು.
ಮುಂದಿನ ವಾರ ಕರೆ ಮುಹೂರ್ತವು ನಡೆಯಲಿದ್ದು ಕಂಬಳಕ್ಕೆ ಸಹಕರಿಸುವ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂಡಳಿಯ ಸದಸ್ಯರು, ಕಂಬಳಾಭಿಮಾನಿಗಳು ಕುದಿ ಕಂಬಳ ನಡೆಸಲು ಶ್ರಮದಾನದ ಮೂಲಕ ಕೈಜೋಡಿಸುವಂತೆ ವಿನಂತಿಸಲಾಯಿತು.
ಶೀಘ್ರದಲ್ಲಿ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಗೌರವ ಸಲಹೆ ‌ಗಾರರು, ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಗೌರವನ್ವಿತ ಸದಸ್ಯರು ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

InShot_20251003_220916895-2-1024x1024 ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ
Screenshot_20251020_063956_WhatsApp-2-549x1024 ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ
IMG-20251011-WA0001-1 ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ

Post Comment

ಟ್ರೆಂಡಿಂಗ್‌

error: Content is protected !!