ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Share
IMG-20251103-WA0001-1024x453 ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ವಿವಾಹಿತ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ವಿಟ್ಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮಹಿಳೆ ಪತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕಲ್ಯಾಜೆ ಎಂಬಲ್ಲಿನ ನಿವಾಸಿ ಅಬ್ದುಲ್ ಆರೀಫ್ಎಂಬವರ ಪತ್ನಿ ಶೈನಾಝ್ (31) ಹಾಗೂ ಮಕ್ಕಳಾದ ಮಹಮ್ಮದ್ ಹರ್ಷೀಲ್ (14) ಶಝಾ ಫಾತಿಮಾ (9)ಎಂಬವರೊಂದಿಗೆ ನಾಪತ್ತೆಯಾದ ಮಹಿಳೆಯಾಗಿದ್ದಾರೆ.

ಈಕೆಯ ಪತಿ ಅಬ್ದುಲ್ ಆರೀಫ್ ಅವರು ಅಕ್ಟೋಬರ್ 30ರಂದು ಬೆಳಿಗ್ಗೆ ಸುಮಾರು 5.00 ಗಂಟೆ ಹೊತ್ತಿಗೆ ತನ್ನ ಕೆಲಸದ ನಿಮಿತ್ತ ವಿಟ್ಲಕ್ಕೆ ಹೋಗಿ ಸಂಜೆ ಸುಮಾರು 15.30 ಗಂಟೆಗೆ ಮನೆಗೆ ವಾಪಾಸು ಬಂದಾಗ ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಇರಲಿಲ್ಲ. ಕನ್ಯಾಡಿ ಗ್ರಾಮದ ದೇರ್ಲಕ್ಕಿ ಎಂಬಲ್ಲಿರುವ ಪತ್ನಿಯ ತವರು ಮನೆಗೆ
ಹೋಗಿರಬಹುದೆಂದು ಅತ್ತೆ ಮನೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಪತ್ನಿ ಮತ್ತು ಮಕ್ಕಳು ಅಲ್ಲಿಗೆ ಹೋಗಿಲ್ಲ; ಎಂಬ ವಿಚಾರ ತಿಳಿದು ಬಂದಿತ್ತು.
ಬಳಿಕ ತುಮಕೂರಿನಲ್ಲಿರುವ ತನ್ನ ನಾದಿನಿಗೆ ಕರೆ ಮಾಡಿವಿಚಾರಿಸಿದ್ದು ಅಲ್ಲಿಗೂ ಹೋಗಿರುವುದಿಲ್ಲ. ಗಾಬರಿಗೊಂಡು ಮನೆಯಲ್ಲಿ ನೋಡಿದಾಗ ಪತ್ನಿ ತನ್ನ ಮತ್ತು ಮಕ್ಕಳ ಬಟ್ಟೆ ಬರೆಗಳನ್ನು ಹಾಗೂ ಎಲ್ಲರ ದಾಖಲೆಗಳಿರುವ ಬ್ಯಾಗನ್ನು ತೆಗೆದುಕೊಂಡು ಹೋಗಿರುವ ವಿಚಾರ ತಿಳಿದು ಬಂದಿತ್ತು. ಕಾಣೆಯಾಗಿರುವ ಪತ್ನಿ ಮಕ್ಕಳು ಬಗ್ಗೆ, ನೆರೆಕರೆಯಲ್ಲಿ ಅವಳ ಸ್ನೇಹಿತರಲ್ಲಿ ಸಂಬಂಧಿಕರ ಮನೆಯಲ್ಲಿ ವಿಚಾರಿಸಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರುವ ಕಾರಣ
ಈಕೆಯ ಪತಿ ಅಬ್ದುಲ್ ಆರೀಫ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

InShot_20251003_220916895-1-1024x1024 ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು
IMG-20251011-WA0001 ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು
Screenshot_20251020_063956_WhatsApp-1-549x1024 ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Post Comment

ಟ್ರೆಂಡಿಂಗ್‌

error: Content is protected !!