ಲಾಯಿಲ ಪುತ್ರಬೈಲ್ ಸಮಾಜ ಮಂದಿರ ಶಿಥಿಲಾವಸ್ಥೆಯಲ್ಲಿ : ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದರಕ್ಷಿತ್ ಶಿವರಾಮ್

ಬೆಳ್ತಂಗಡಿ : ಅಪಾಯದಲ್ಲಿರುವ ಲಾಯಿಲ ಗ್ರಾಮದ ಪುತ್ರಬೈಲು
ಸಮಾಜ ಮಂದಿರ ಕಟ್ಟಡದ ವೀಕ್ಷಣೆಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದ ನಿಯೋಗ ಭೇಟಿ ನೀಡಿ ಸ್ಥಳೀಯ ಬೈರ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಶೀಘ್ರದಲ್ಲಿ ಸುಸಜ್ಜಿತ ನೂತನವಾದ ಸಮಾಜ ಮಂದಿರ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಮಂಜೂರುಗೊಳಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಪುತ್ರ ಬೈಲು ಪರಿಶಿಷ್ಟ ಜಾತಿ ಕುಟುಂಬಗಳ ಕಾಲೋನಿ ಪ್ರದೇಶದಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಲಾಯಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಸಮಾಜ ಮಂದಿರ ಶಿಥಿಲಾವಸ್ಥೆಗೆ ತಲುಪಿದ್ದು ಸ್ಥಳೀಯ ಕುಟುಂಬಗಳು ಸಮಾಜ ಮಂದಿರಕ್ಕೆ ಹೊಸ ಕಟ್ಟಡದ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಸ್ಥಳೀಯರ ಮನವಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಬೇಡಿಕೆ ಈಡೇರಿಸುವ
ಭರವಸೆ ನೀಡಿದರು.
ಈ ಸಂದರ್ಭ ನಿಯೋಗದಲ್ಲಿ ದ. ಕ.ಜಿಲ್ಲಾ ಕೆಡಿಪಿ ಸದಸ್ಯ ನ್ಯಾಯವಾದಿ ಸಂತೋಷ ಕುಮಾರ್ ಲಾಯಿಲ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸೌಮ್ಯ ಲಾಯಿಲ, ಸ್ಥಳೀಯ ಸಾಮಾಜಿಕ ಹೋರಾಟಗಾರ ಸುರೇಶ್ ಬೈರ ಪುತ್ರಬೈಲ್, ಲಾಯಿಲ ಗ್ರಾಮ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕೆ. ಎಚ್ . ಖಾಲಿದ್, ಮಹಮ್ಮದ್ ಆಲಿ, ಸಾವಿತ್ರಿ ಗ್ರೇಸಿಯನ್, ವಿವೇಕ್ ಪುತ್ರಬೈಲ್, ಉಮೈರ, ಜಗನಾಥ್ ಪುತ್ರಬೈಲ್, ಮಂಜುನಾಥ್ ಪುತ್ರಬೈಲ್ ಉಪಸ್ಥಿತರಿದ್ದರು.


















Post Comment