ಕಾಶಿಪಟ್ಣದಲ್ಲಿ ಆತಂಕ ಹುಟ್ಟಿಸಿದ ಅರೆ ಸುಟ್ಟ ಮಾನವ ತಲೆಬುರುಡೆ!

ಬೆಳ್ತಂಗಡಿ : ಮಾನವ ಮೃತ ದೇಹದ ಅರೆ ಸುಟ್ಟ ಭಾಗಗಳು ಮನೆಯ ಪರಿಸರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಕಾಣಿಸಿಕೊಂಡ ಘಟನೆ ಕಾಶಿಪಟ್ಣದಲ್ಲಿ ಬೆಳಕಿಗೆ ಬಂದಿದ್ದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಸ್ಮಶಾನದ ಸಮೀಪದಲ್ಲಿರುವ ಮನೆಯೊಂದರ ಅಂಗಳದಲ್ಲಿ ಮತ್ತು ಪರಿಸರದಲ್ಲಿ ಮಾನವನ ಶವದ ಸುಟ್ಟು ಕರಕಲಾದ ತಲೆ ಬುರುಡೆ ಮತ್ತಿತರ ಭಾಗಗಳು ಪತ್ತೆಯಾಗಿರುವುದು ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ವಾಸದ ಮನೆಯ ಪರಿಸರದಲ್ಲಿ ಕಾಣಿಸಿಕೊಂಡ ಅರೆ ಸುಟ್ಟ ಶವದ ಅವಶೇಷಗಳು ಸ್ಥಳೀಯ ಸ್ಮಶಾನದಿಂದ ನಾಯಿಗಳು ಕಚ್ಚಿಕೊಂಡು ಬಂದು ತಿಂದು ಹಾಕಿರಬಹುದೆಂದು ಶಂಕಿಸಲಾಗಿದ್ದರೂ ಸ್ಥಳೀಯರಲ್ಲಿ ಒಂದು ರೀತಿಯ ಆತಂಕ ಮೂಡಲು ಕಾರಣವಾಗಿದೆ.

















Post Comment