ಹೊಕ್ಕಾಡಿಗೋಳಿ ವೀರ – ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತ

ವೇಣೂರು : ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತವು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಅಮ್ಮನವರ ಮತ್ತು ಮೂಜುಲ್ನಾಯ ಕೊಡಮಣಿತ್ತಾಯ ದೈವದ ಪ್ರಾರ್ಥನೆಯೊಂದಿಗೆ ನವೆಂಬರ್ 9ನೇ ಭಾನುವಾರದಂದು ಬೆಳಿಗ್ಗೆ ನೆರವೇರಿತು.
ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ದೀಪ ಬೆಳಗಿಸಿ ಕಂಬಳಪೂರ್ವ ಕೆಲಸ ಕಾರ್ಯಗಳು ಜೊತೆಗೆ ಕಂಬಳವು ಯಶಸ್ವಿಯಾಗಿ ಮುನ್ನಡೆಯಲಿ ಎಂದೂ ಸ್ಥಳ ಸಾನಿಧ್ಯದ ದೈವ ದೇವರಲ್ಲಿ ಪ್ರಾರ್ಥಿಸಿಕೊಂಡರು.
ಈ ಸಂದರ್ಭ ಕಂಬಳ ಸಮಿತಿಯ ಗೌರವಧ್ಯಕ್ಷರಾದ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಪ್ರಧಾನ ಕಾರ್ಯದರ್ಶಿ ಪ್ರಭಾಕರ್.ಎಚ್, ಕಾರ್ಯದರ್ಶಿ ಪುಷ್ಪರಾಜ್ ಜೈನ್, ಸ್ಥಳ ದಾನಿಗಳಾದ ರಾಜು ಶೆಟ್ಟಿ ಹೊಕ್ಕಾಡಿ, ಸುಧೀರ್ ಶೆಟ್ಟಿ ಕಂಬಳ ಮನೆ, ಪ್ರವೀಣ್ ಕುಲಾಲ್, ಸುಂದರ ಪೂಜಾರಿ ನಿಡ್ಯಾಲ,
ಉಪಾಧ್ಯಕ್ಷರಾದ ಸಂತೋಷ್ ಮಂಜಿಲ, ಸುರೇಶ್.ಎಚ್., ಹೊಕ್ಕಾಡಿಗೋಳಿ, ರಾಜೇಶ್ ಹುಲಿಮೇರು, ನವೀನ್ ಆಚಾರ್ಯ ಉಪ್ಪಿರ, ನಿತೇಶ್ ಹನ್ನೆರಡುಕವಲು, ಸ್ಥಳೀಯ ಭಜನಾ ಮಂಡಳಿ, ಕಂಬಳ ಸಮಿತಿ, ಊರ ಸಂಘ ಸಂಸ್ಥೆಗಳ ಪ್ರಮುಖರು ಸದಸ್ಯರು, ಕಂಬಳಾಭಿಮಾನಿಗಳು ಪಾಲ್ಗೊಂಡರು.


















Post Comment