ಉಪ್ಪಿನಂಗಡಿ – ಕಲ್ಲೇರಿ ಮಧ್ಯೆ ಬಾಳೆ ನೆಟ್ಟು ಹೀಗೊಂದು ಪ್ರತಿಭಟನೆ

ಬೆಳ್ತಂಗಡಿ : ಮನುಷ್ಯರು, ವಾಹನಗಳ ಸಂಚಾರ ಬಿಡಿ ಜಾನುವಾರುಗಳೂ ದಾಟಲು ಹೆದರುವಷ್ಟು ಹದಗೆಟ್ಟಿರುವ
ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಕಲ್ಲೇರಿ ಸಮೀಪ
ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ನಾಗರಿಕರು ಸೋಮವಾರ
ವಿಶಿಷ್ಟ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿಯಿಂದ
ಉಪ್ಪಿನಂಗಡಿವರೆಗೆ ನಡೆದಾಡಲು ಹಿಂಜರಿಯುವಷ್ಟು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಅಕ್ರೋಶಗೊಂಡ ಸ್ಥಳೀಯ ನಾಗರಿಕರು ಕಲ್ಲೇರಿ – ಕರಾಯ ಮಧ್ಯೆ ಶಿವಗಿರಿ ಎಂಬಲ್ಲಿ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ಇದೀಗ ಸಾಂಕೇತಿಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಅರ್ಪಣೆ….!
ಬಾಳೆ ಎಡಕ್ಕೆ ಬಿಡು ಮಾರ್ಗ ಬಲಕ್ಕೆ ಬಿಡು
ನಟ್ಟ ನಡುವಲ್ಲಿ ನೀ ಹೋಗು ಬಸ್ಸುರಾಯ
ಅಲ್ಲಿಹುದೆನ್ನ ಗ್ಯಾರೇಜು…
ಭಾಗ್ಯದ ಬಸ್ಸುರಾಯ ಹೋಗಿ ಬಾ ನನ್ ಗ್ಯಾರೇಜಿಗೇ…

















Post Comment