ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ

ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ

Share
IMG-20251117-WA0003-1024x725 ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ

ಬೆಳ್ತಂಗಡಿ : ಬಂದಾರು ಗ್ರಾಮದ ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಸಮಾಲೋಚನಾ ಸಭೆಯು ಭಾನುವಾರ ದೇವಸ್ಥಾನದ ವಠಾರದಲ್ಲಿ ನೆರವೇರಿತು.

ಆಡಳಿತ ಮಂಡಳಿ ಆಧ್ಯಕ್ಷರಾದ ನಾಣ್ಯಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ 25 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ತಾಂತ್ರಿಕ ಕಾರಣಕ್ಕಾಗಿ ಅನುದಾನವನ್ನು ವಿನಿಯೋಗಿಸಲು ಸಾಧ್ಯವಾಗಿರುವುದಿಲ್ಲ ಕೂಡಲೇ ಸೂಕ್ತ ರೀತಿಯಲ್ಲಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಕೊಂಡಲ್ಲಿ ಮಂಜೂರಾದ ಅನುದಾನವನ್ನು ವಿನಿಯೋಗಿಸಲು ಅನುಕೂಲವಾಗುತ್ತದೆ ಈ ಬಗ್ಗೆ ಆಡಳಿತ ಸಮಿತಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ದೇವಸ್ಥಾನದ ಜೀರ್ಣೋದ್ಧಾರದ ಭಾಗ್ಯ ನಮಗೆ ದೊರೆತಿದೆ,
ಎರಡು ವರ್ಷದಲ್ಲಿ ತಿಂಗಳಿಗೆ ಒಂದು ಸಾವಿರದಂತೆ ವರ್ಷಕ್ಕೆ ಹನ್ನೆರಡು ಸಾವಿರ ರೂಪಾಯಿ, ಎರಡು ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಕೊಡುವುದು ಗ್ರಾಮದ ಭಕ್ತಾದಿಗಳಿಗೆ ಕಷ್ಟವೇನಲ್ಲ, ಇಷ್ಟು ಕೊಡಲು ಸಾಧ್ಯವಿಲ್ಲದವರು ಈ ಕಾಲದಲ್ಲಿ ಯಾರೂ ಇರಲಿಕ್ಕಿಲ್ಲ ಎಂದರು.

20251116_111431-1024x461 ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ


ದೇವಸ್ಥಾನಕ್ಕೆ ಬರುವಾಗ ರಾಜಕೀಯವನ್ನು ಹೊರಗಿಟ್ಟು ಬರಬೇಕು, ಅವನು ಕಾಂಗ್ರೆಸ್ ಪಕ್ಷದವನು , ಇವನು ಬಿಜೆಪಿ ಪಕ್ಷದವನು ಎನ್ನುವುದನ್ನು ಬಿಡಬೇಕು ಇಲ್ಲಿ ಬಂದಮೇಲೆ ಎಲ್ಲರೂ ದೇವರ ಪಕ್ಷ, ಇಲ್ಲಿ ಬಂದ ಮೇಲೆ ನಾವೆಲ್ಲರೂ ದೇವರ ಜಾತಿ ಮಾತ್ರ , ಅವನು ಸ್ಪೃಶ್ಯ, ಇವನು ಅಸ್ಪೃಶ್ಯ ಎಂಬುದನ್ನು ಬಿಟ್ಟು ಎಲ್ಲರೂ ಒಂದಾಗಿ ದುಡಿಯಬೇಕು, ನನ್ನನ್ನೂ ಅಷ್ಟೇ , ಶಾಸಕನೆಂದು ಕರೆಯಬೇಡಿ ಇಲ್ಲಿ ನಾನೂ ಭಕ್ತ ಎಂದು ಶಾಸಕ ಹರೀಶ್ ಪೂಂಜ ಸಮಾಲೋಚನಾ ಸಭೆಯಲ್ಲಿ ಮಾರ್ಮಿಕವಾಗಿ ಕಿವಿ ಮಾತು ಹೇಳಿದರು.
ಈ ಹಿಂದೆ ಮಂಜೂರಾದ ಅನುದಾನದ ಜೊತೆಗೆ ಅನಿವಾರ್ಯವಾದರೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ಒದಗಿಸಲು ಒರ್ವ ಭಕ್ತನಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ವೇದಿಕೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಸೂರ್ಯ ನಾರಾಯಣ ಕುಡುಮತ್ತಾಯ, ದೇಜಪ್ಪ ಗೌಡ ಪೊಯ್ಯೋಳೆ , ಗ್ರಾ.ಪಂ. ಅಧ್ಯಕ್ಷ ದಿನೇಶ್ ಗೌಡ, ಮಿತ್ತಬಾಗಿಲು ಪಂ. ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ, ಲಿಂಗಪ್ಪ ಗೌಡ ಪೊಯ್ಯೋಳೆ, ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ ಮೇಲ್ವಿಚಾರಕಿ ಕು.ಶಿಲ್ಪಾ, ಒಕ್ಕೂಟದ ಅಧ್ಯಕ್ಷೆ
ವಿಜಯಾ ಉಪಸ್ಥಿತರಿದ್ದರು.
ರಂಜನ್ ಗೌಡ ಪ್ರಸ್ತಾವನೆಗೈದರು. ಧರ್ಣಪ್ಪ ಗೌಡ ಬಾನಡ್ಕ,
ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ, ಸಿ.ಎ. ಬ್ಯಾಂಕ್ ನಿರ್ದೇಶಕ ಪ್ರಭಾಕರ ಗೌಡ, ಉದಯ ಕುಮಾರ್ ಬಿ.ಕೆ.,
ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು. ಪ್ರೀತಮ್ ಸ್ವಾಗತಿಸಿ ಗಣೇಶ್ ಗೌಡ ವಂದಿಸಿದರು.

InShot_20251003_220916895-19-1024x1024 ಬಂದಾರು : ಪಿಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಾಲೋಚನಾ ಸಭೆ
Previous post

ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಾಧಕರಿಗೆ ಗೌರವ ಕಾರ್ಯಕ್ರಮ : ಆರಂಬೋಡಿ ಹೈನುಗಾರಿಕಾ ಸಾಧಕ ಪ್ರತಾಪ್ ಶೆಟ್ಟಿ ಕುಂಡಾಜೆ ಅವರಿಗೆ ‘ಕ್ಷೀರ ರತ್ನ’ ಪ್ರಶಸ್ತಿ

Next post

ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆ : ಬೆಳ್ತಂಗಡಿಯ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ

Post Comment

ಟ್ರೆಂಡಿಂಗ್‌

error: Content is protected !!