ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಶಶಿಕಾಂತ್ ಸುಲ್ಕೇರಿ ಆಯ್ಕೆ : ಇಂದು ಹರಿಯಾಣಕ್ಕೆ ಪ್ರಯಾಣ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಶಶಿಕಾಂತ್ ಸುಲ್ಕೇರಿ ಆಯ್ಕೆ : ಇಂದು ಹರಿಯಾಣಕ್ಕೆ ಪ್ರಯಾಣ

Share
IMG-20251124-WA0004-1024x782 ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಶಶಿಕಾಂತ್ ಸುಲ್ಕೇರಿ ಆಯ್ಕೆ : ಇಂದು ಹರಿಯಾಣಕ್ಕೆ ಪ್ರಯಾಣ

ಬೆಳ್ತಂಗಡಿ : ರಾಜ್ಯ ಮಟ್ಟದ 17 ವರ್ಷ ವಯೋಮಾನ ವಿಭಾಗದ
ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆಗೈದಿರುವ ಗ್ರಾಮೀಣ ಕ್ರೀಡಾ ಪ್ರತಿಭೆ ಶಶಿಕಾಂತ್ ಸುಲ್ಕೇರಿ ಅವರು ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ತಂಡಕ್ಕೆ
ಆಯ್ಕೆಯಾಗಿದ್ದಾರೆ.

ಈಗಾಗಲೇ ತಾಲೂಕು , ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ , ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆಗೈದಿರುವ ಯುವ ಪ್ರತಿಭೆ ಇದೀಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀರಾಮ ಪ್ರೌಢಶಾಲೆ ಸುಲ್ಕೇರಿ ಇಲ್ಲಿ 10 ನೇ ತರಗತಿ ವಿದ್ಯಾರ್ಥಿಯಾಗಿರುವ ಶಶಿಕಾಂತ್ಸು ಲ್ಕೇರಿ ಗ್ರಾಮದ ಭಂಡಾರಗೋಳಿ ನಿವಾಸಿ ಶ್ರೀಧರ್ ಮತ್ತು ಪುಷ್ಪಾ ದಂಪತಿಯ ಪುತ್ರ. ರಾಷ್ಟ್ರದ ಮಟ್ಟದ ಕಬಡ್ಡಿ ಪಂದ್ಯಾಟವು ಹರಿಯಾಣ ರಾಜ್ಯದಲ್ಲಿ ನಡೆಯಲಿದ್ದು , ಸೋಮವಾರ ಹರಿಯಾಣಕ್ಕೆ ತೆರಳಲಿದ್ದಾರೆ.

IMG-20251124-WA0001-768x1024 ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಶಶಿಕಾಂತ್ ಸುಲ್ಕೇರಿ ಆಯ್ಕೆ : ಇಂದು ಹರಿಯಾಣಕ್ಕೆ ಪ್ರಯಾಣ


ನವೆಂಬರ್ 27 ರಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಯಾಗಿ ವಿದ್ಯಾರ್ಥಿಯೊಬ್ಬ 17 ವರ್ಷ ವಯೋಮಾನದ ಸಬ್ ಜ್ಯೂನಿಯರ್ ವಿಭಾಗದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗುವ ಮೂಲಕ ಕಬಡ್ಡಿ
ಕ್ರೀಡೆಯಲ್ಲಿ ಹೊಸ ಬರವಸೆ ಮೂಡಿಸಿದ್ದಾರೆ.

InShot_20251003_220916895-24-1024x1024 ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡದ ಆಟಗಾರನಾಗಿ ಶಶಿಕಾಂತ್ ಸುಲ್ಕೇರಿ ಆಯ್ಕೆ : ಇಂದು ಹರಿಯಾಣಕ್ಕೆ ಪ್ರಯಾಣ

Post Comment

ಟ್ರೆಂಡಿಂಗ್‌

error: Content is protected !!