ಬೆಳ್ತಂಗಡಿಯಲ್ಲಿ ಮತ್ತೊಂದು ಕೋ.ಆಪರೇಟಿವ್ ಸೊಸೈಟಿಯಲ್ಲಿ ಅರ್ಧ ಕೋಟಿ ಅವ್ಯವಹಾರ!

ಬೆಳ್ತಂಗಡಿಯಲ್ಲಿ ಮತ್ತೊಂದು ಕೋ.ಆಪರೇಟಿವ್ ಸೊಸೈಟಿಯಲ್ಲಿ ಅರ್ಧ ಕೋಟಿ ಅವ್ಯವಹಾರ!

Share

IMG-20251128-WA0000-1024x709 ಬೆಳ್ತಂಗಡಿಯಲ್ಲಿ  ಮತ್ತೊಂದು ಕೋ.ಆಪರೇಟಿವ್ ಸೊಸೈಟಿಯಲ್ಲಿ ಅರ್ಧ ಕೋಟಿ ಅವ್ಯವಹಾರ!

ಬೆಳ್ತಂಗಡಿ : ಕೋ.ಆಪರೇಟಿವ್ ಸೊಸೈಟಿಗಳ ಪಾಲಿಗೆ ಸದಾ
ತೆರೆದ ಹೆಬ್ಬಾಗಿಲಿನಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಉಜಿರೆ ಮತ್ತು ಬೆಳ್ತಂಗಡಿ ನಗರಕ್ಕೆ ಕಾಲಿಡಲು ಒಂದೆಡೆ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಗಳು ಕೊ.ಆಪರೇಟಿವ್ ಸೊಸೈಟಿಗಳು ನೂಕು ನುಗ್ಗಲಿನಲ್ಲಿರುವಂತಿದ್ದು ಇನ್ನೊಂದೆಡೆ ಕೆಲವು ಕೋ.ಆಪರೇಟಿವ್ ಸೊಸೈಟಿಗಳು ಅವ್ಯವಹಾರದಲ್ಲಿ ಮುಳುಗಿ ಇಂದೋ ನಾಳೆಯೋ
ಮುಚ್ಚುವ ಭೀತಿಯಲ್ಲಿದ್ದು ಅವ್ಯವಹಾರಗಳಿಗೆ ಒಳಗೊಳಗೆ
ತೇಪೆ ಹಾಕೊಂಡು ಕಣ್ಣು ಮುಚ್ಚಿ ಹಾಲು ಕುಣಿಯುತ್ತಿವೆ.
ಈ ಮಧ್ಯೆ ಜನಸಮೃದ್ಧಿ’ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ(ಲಿ) ಬೆಳ್ತಂಗಡಿ ಶಾಖೆಯಲ್ಲಿ ಮೆಚ್ಯುರಿಟಿ ಆಗಿರುವ ಗ್ರಾಹಕರ ಲಕ್ಷಾಂತರ ರೂಪಾಯಿ ಆರ್ ಡಿ (ರಿಕ್ಯೂರಿಂಗ್ ಡೆಪಾಸಿಟ್) ಹಣವನ್ನು ಹಿಂತಿರುಗಿಸದೆ ಪೀಡಿಸುತ್ತಾ ಗ್ರಾಹಕರಿಗೆ ಮೂರು ನಾಮ ಹಾಕಲು ತಯಾರಿಯಲ್ಲಿರುವುದು ಬೆಳಕಿಗೆ ಬಂದಿದೆ.
ಮೂಲತ: ಬೆಂಗಳೂರಿನ ಯಲಹಂಕದಲ್ಲಿ ಪ್ರಧಾನ ಕಚೇರಿ
ಹೊಂದಿರುವ ಜನಸಮೃದ್ಧಿ’ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ (ಲಿ) ಇದರ ಬೆಳ್ತಂಗಡಿ ಶಾಖೆಯಲ್ಲಿ ಗ್ರಾಹಕರ ಕೈಗೆ ಸೇರಬೇಕಾಗಿರುವ ಸುಮಾರು ಅರ್ಧ ಕೋಟಿಗೂ ಅಧಿಕ ಹಣದ
ಅವ್ಯವಹಾರ ನಡೆದಿದ್ದು ತನ್ನ ಹಣಕ್ಕಾಗಿ ಅಲೆದಾಡಿ
ಅವ್ಯವಹಾರವನ್ನು ಪ್ರಶ್ನಿಸಿದ ಗ್ರಾಹಕನೇ ಶಾಖೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನವೀನ್ ಗೌಡ ಎಂಬವರೇ ಇದೀಗ ‘ಜನಸಮೃದ್ಧಿ’ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ(ಲಿ) ಇದರ ಬೆಳ್ತಂಗಡಿ ಶಾಖೆಯಲ್ಲಿ ಸುಮಾರು 2 ಲಕ್ಷ ರೂಪಾಯಿ ಆರ್ ಡಿ ಹಣವನ್ನು ಕಳೆದುಕೊಂಡು ಜೇಬಿಗೆ ಕತ್ತರಿ ಹಾಕಿಸಿಕೊಂಡ ಗ್ರಾಹಕ.
ಜನಸಮೃದ್ಧಿ’ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿ(ಲಿ)ಯ ಬೆಳ್ತಂಗಡಿ ಶಾಖೆಯು ಕೆಲವು ವರ್ಷಗಳಿಂದ ನಗರದ ಮೂರು ಮಾರ್ಗದ ಬಳಿ ಕಾರ್ಯಾಚರಿಸುತ್ತಿದೆ.

ಬೆಳ್ತಂಗಡಿ ಶಾಖೆಯಲ್ಲಿ ಸುಮಾರು 75ರಿಂದ 100 ಗ್ರಾಹಕರಿಗೆ ಅವರು ಕಟ್ಟಿದ ಆರ್ ಡಿ ಹಣ ಮೆಚ್ಯುರಿಟಿ ಆಗಿ ಎಂಟು ತಿಂಗಳುಗಳು ಕಳೆದರೂ ಸೊಸೈಟಿ ಹಣ ವಾಪಾಸು ನೀಡಿರುವುದಿಲ್ಲ. ತಮ್ಮ ಹಣ ಪಡೆಯದೆ ನೊಂದ ಗ್ರಾಹಕರು ವಿವರಿಸುವ ಪ್ರಕಾರ ಸುಮಾರು 50 ಲಕ್ಷ ರೂಪಾಯಿಯನ್ನು ನೀಡದೆ ಸತಾಯಿಸಲಾಗುತ್ತಿದೆ.

ಮಾಸಿಕವಾಗಿ ಸುಮಾರು 10 ಲಕ್ಷ ರೂಪಾಯಿ ಆರ್ ಡಿ ಹಣ ಸಂಗ್ರಹಿಸಲಾಗುತ್ತಿದ್ದು ಕಳೆದ 10 ತಿಂಗಳುಗಳಿಂದ ಮೆಚ್ಯುರಿಟಿ ಆಗಿರುವ ಆರ್ ಡಿ ಹಣವನ್ನು ಗ್ರಾಹಕರಿಗೆ ಈ ಸೊಸೈಟಿ ಹಿಂತಿರುಗಿಸಿರುವುದಿಲ್ಲ. ಹಣಕ್ಕಾಗಿ ಶಾಖೆಗೆ ಹೋಗಿ ವಿಚಾರಿಸಿದರೆ ಸಿಬ್ಬಂದಿ ಸಮರ್ಪಕ ಮಾಹಿತಿಯೂ ನೀಡದೆ ಏನೇನೋ ಕುಂಟು ನೆಪ ಹೇಳುತ್ತಾ ಜಾರಿಕೊಳ್ಳುತ್ತಿದ್ದು ಈ ಬಗ್ಗೆ ನಿಖರ ಕಾರಣ ಹೇಳದಿರುವುದು ಮತ್ತು ಸ್ಪಷ್ಟ ಮಾಹಿತಿ ನೀಡದೆ ಸಂಶಯಾಸ್ಪದ ಉತ್ತರಗಳನ್ನು ನೀಡುತ್ತಿರುವುದು ಹಣ ಕಳೆದುಕೊಂಡು ನೊಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ದೇಶಕನಾಗಲಿ, ವ್ಯವಸ್ಥಾಪಕ ನಿರ್ದೇಶಕನಾಗಲಿ ಗ್ರಾಹಕರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ , ಅಥವಾ ಪದೇ ಪದೇ ಕರೆ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಕರೆ ಸ್ವೀಕರಿಸದಿರುವ ಬಗ್ಗೆ ಮತ್ತು ಆರ್ ಡಿ ಹಣದ ಅವ್ಯವಹಾರದ
ಸತ್ಯಾಸತ್ಯತೆ ತಿಳಿದುಕೊಳ್ಳುವ ಕುತೂಹಲದಿಂದ ಮಾಧ್ಯಮ ಪ್ರತಿನಿಧಿಗಳು ದೂರವಾಣಿ ಕರೆ ಮಾಡಿದರೂ ಸಂಬಂಧಪಟ್ಟವರು ಯಾರೂ ಕರೆ ಸ್ವೀಕರಿಸುತ್ತಿಲ್ಲ. ಇದು ಸೊಸೈಟಿಯ ಆಡಳಿತ ಮಂಡಳಿಯ ಕಪಟ ಆರ್ಥಿಕ ವ್ಯವಹಾರಕ್ಕೂ ವಿಶ್ವಾಸಾರ್ಹತೆಗೂ ಸಾಕ್ಷಿಯಾಗಿದೆ.

IMG-20251125-WA0001-576x1024 ಬೆಳ್ತಂಗಡಿಯಲ್ಲಿ  ಮತ್ತೊಂದು ಕೋ.ಆಪರೇಟಿವ್ ಸೊಸೈಟಿಯಲ್ಲಿ ಅರ್ಧ ಕೋಟಿ ಅವ್ಯವಹಾರ!

ಬೆಂಗಳೂರು ಯಲಹಂಕದಲ್ಲಿ ಪ್ರಧಾನ ಕಚೇರಿ ಹೊಂದಿರುವ
ಜನಸಮೃದ್ಧಿ ಮಲ್ಟಿಪರ್ಪಸ್ ಕೋ.ಆತರೇಟಿವ್ ಸೊಸೈಟಿ (ಲಿ) ಬೆಳ್ತಂಗಡಿಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 15-17 ಶಾಖೆಗಳನ್ನು ತೆರೆದು ಕಾರ್ಯಾಚರಿಸುತ್ತಿವೆ.
ಅಂದಾಜಿನ ಪ್ರಕಾರ ಜನಸಮೃದ್ಧಿ ಮಲ್ಟಿಪರ್ಪಸ್ ಕೋ.ಆಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಸುಮಾರು 100 ಕೋಟಿ ವ್ಯವಹಾರ ನಡೆಯುತ್ತಿದೆ.
ಶಾಖಾ ಕಚೇರಿಗೆ ವಿಚಾರಿಸಿದವರಿಗೆ “ಇವತ್ತು ಕೊಡೋಣ.. ನಾಳೆ ಕೊಡೋಣ… ಚೆಕ್ ಕೊಡೋಣ… ನಿರ್ದೇಶಕರು, ಸಿಬ್ಬಂದಿ ಕೊಡುವ ಭರವಸೆ ಪದೇ ಪದೇ ಸುಳ್ಳಾಗುತ್ತಿದ್ದು ಹಲವು ಗಡುವುಗಳೇ ದಾಟಿದೆ.
ತನ್ನ ಆರ್ ಡಿ ಹಣ ವಾಪಾಸು ಕೊಡುವುದಾಗಿ ಕೊಟ್ಟ ಹಲವು ಗಡುವುಗಳು ದಾಟಿ, ಇತ್ತ ವ್ಯವಸ್ಥಾಪಕ ನಿರ್ದೇಶಕರೂ ದೂರವಾಣಿ ಕರೆ ಸ್ವೀಕರಿಸದೆ ಕಡೆಗಣಿಸಿದಾಗ ಆಕ್ರೋಶಗೊಂಡ ನವೀನ್ ಎಂಬವರು ನೇರವಾಗಿ ಬೆಳ್ತಂಗಡಿ ಶಾಖೆಗೆ ಹೋಗಿ ಹಣದ ಬಗ್ಗೆ ವಿಚಾರಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೊಸೈಟಿಗೆ ಬೀಗ ಜಡಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೊಂದ ಗ್ರಾಹಕ ಬೀಗ ಹಾಕಿದರೂ ಆರ್ ಡಿ ಹಣ ಹಿಂತಿರುಗಿಸದ ಸೊಸೈಟಿಯ
ಆಡಳಿತ ಮಂಡಳಿಗೆ ಗ್ರಾಹಕ ಹಗಲು ಹಾಕಿದ ಬೀಗವನ್ನು ಕೊನೆಗೆ ರಾತ್ರಿ ಹೊತ್ತು ತೆಗೆಸುವ ಗತಿ ಬಂದಿದೆ ಎಂದರೆ ಈ ಸೊಸೈಟಿ ಗ್ರಾಹಕರ ಲಕ್ಷಾಂತರ ರೂಪಾಯಿ ಹಣಕ್ಕೆ ಯಾವ ಗತಿ ತಂದಿಡಬಹುದೆಂಬುದೇ ನೊಂದ ಗ್ರಾಹಕರ ಆತಂಕ.

InShot_20251003_220916895-27-1024x1024 ಬೆಳ್ತಂಗಡಿಯಲ್ಲಿ  ಮತ್ತೊಂದು ಕೋ.ಆಪರೇಟಿವ್ ಸೊಸೈಟಿಯಲ್ಲಿ ಅರ್ಧ ಕೋಟಿ ಅವ್ಯವಹಾರ!

Post Comment

ಟ್ರೆಂಡಿಂಗ್‌

error: Content is protected !!