ಅಳದಂಗಡಿ ಕೆದ್ದು ಬಳಿ ಖಾಸಗಿ ಬಸ್ಸು ಹಿಂದಿನಿಂದ ಢಿಕ್ಕಿ: ಆಟೋ ಜಖಂ, ಇಬ್ಬರಿಗೆ ಗಾಯ

ಬೆಳ್ತಂಗಡಿ : ಕಾರ್ಕಳ ಹೆದ್ದಾರಿಯಲ್ಲಿ ಗುರುವಾಯನಕೆರೆಯಿಂದ ಅಳದಂಗಡಿ ಕಡೆ ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಅಳದಂಗಡಿ ಕೆದ್ದು ಬಳಿ ಕಾರ್ಕಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ಸು ಓವರ್ ಟೇಕ್ ತರಾತುರಿಯಲ್ಲಿ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡು ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಾರ್ಕಳ ಕಡೆ ಹೋಗುತ್ತಿದ್ದ ವಿಶಾಲ್ ಎಂಬ ಖಾಸಗಿ ಬಸ್ಸು ರಿಕ್ಷಾದ ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದ್ದು ರಿಕ್ಷಾ ಜಖಂಗೊಂಡಿದೆ. ಖಾಸಗಿ ಬಸ್ಸು ಢಿಕ್ಕಿ ಹೊಡೆದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
















Post Comment