ಧರ್ಮಸ್ಥಳ ಪ್ರಕರಣ: ದೂರುದಾರರಿಗೆ ಕಿರುಕುಳ ನೀಡದೆ ತನಿಖೆ ಮುಂದುವರಿಸಲು ಎಸ್ ಐ ಟಿಗೆ ಹೈಕೊರ್ಟ್ ಸೂಚನೆ

‘ಕೋಮಾ’ಸ್ಥಿತಿಯಲ್ಲಿದ್ದ ಎಸ್ ಐ ಟಿ ತನಿಖೆಗೆ ಮರುಜೀವ
ಬೆಳ್ತಂಗಡಿ : ಬೇರೆ ದಿಕ್ಕಿಗೆ ತಿರುಗಿದ್ದ ಮತ್ತು ದೂರುದಾರರನ್ನೇ ಆರೋಪಿಗಳಂತೆ ನಡೆಸಿಕೊಂಡು ಕಿರುಕುಳ ನೀಡಿದ ಆರೋಪಕ್ಕೊಳಗಾಗಿದ್ದ ಮತ್ತು ಕೆಲವು ಸಮಯಗಳಿಂದ ‘ಕೋಮಾ ಸ್ಥಿತಿ’ ಯಲ್ಲಿದ್ದ ಎಸ್.ಐ.ಟಿ ತನಿಖೆ ಬಗ್ಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
“ಎಸ್.ಐ.ಟಿ. ತನಿಖೆ ಮುಂದುವರಿಯಲಿ ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ” ಎಂದು ರಾಜ್ಯ ಉಚ್ಛ ನ್ಯಾಯಾಲಯ ಇದೀಗ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 39/2025 ಪ್ರಕರಣದ ರದ್ದು ಕೋರಿದ ಮತ್ತು ತಮ್ಮ ವಿರುದ್ಧದ ಪ್ರಕರಣಕ್ಕೆ ತಡೆ ಕೋರಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ವಿಠಲ್ ಗೌಡ, ಜಯಂತ್.ಟಿ ಅರ್ಜಿ ಸಲ್ಲಿಸಿದ್ದ ಪ್ರಕರಣ ಕಳೆದ ಹಂತದ ವಿಚಾರಣೆಯಲ್ಲಿ ಎಸ್.ಐ.ಟಿ ವಿಚಾರಣೆಗೆ ತಡೆಯಾಜ್ಞೆ ತೆರವು ಮಾಡಿ ವಿಚಾರಣೆ ಮುಂದೂಡಿತ್ತು.
ನ.28 ರಂದು ಎಸ್.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ಸೂಚಿಸಿದೆ.
ಈ ಹಿಂದೆ ನೀಡಿದ್ದ ಆದೇಶದಂತೆ ಅರ್ಜಿದಾರರಿಗೆ ಎಸ್.ಐ.ಟಿ ಯಾವುದೇ ಕಿರುಕುಳ ನೀಡಬಾರದು ಎಂದು ಸೂಚಿಸಿದೆ. ಇದೀಗ ಎಸ್.ಐ.ಟಿ ತನಿಖೆಗೆ ಯಾವುದೇ ಅಡೆತಡೆಗಳು ಇಲ್ಲವಾಗಿದ್ದು ತನಿಖೆ ಮುಂದುವರಿಯಲಿದೆ.
ಈಗಾಗಲೆ ಎಸ್.ಐ.ಟಿ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ BNS 215 ಅಡಿಯಲ್ಲಿ ಮಧ್ಯಂತರ ವರದಿಯೊಂದನ್ನು ಸಲ್ಲಿಸಿದ್ದ ಎಸ್.ಐ.ಟಿ. ಮಹೇಶ್ ಶೆಟ್ಟಿ ಹಾಗೂ ಇತರರು ತನಿಖೆಯೊಂದಿಗೆ
ಸಹಕರಿಸುತ್ತಿಲ್ಲ ಎಂಬ ವಿಚಾರವನ್ನು ನ್ಯಾಯಾಧೀಶರ ಮುಂದಿಟ್ಟಿತ್ತು.
ಈ ಮಧ್ಯೆ ಎಸ್ ಐ ಟಿ ಅಧಿಕಾರಿಗಳು ವಿಚಾರಣೆಗೆ ಕರೆದು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ದೂರುದಾರರಿಂದ ಕೇಳಿ ಬಂದಿತ್ತು. ಈ ಬಗ್ಗೆ ಉನ್ನತ ಮಟ್ಟದ ದೂರುಗಳನ್ನೂ ದೂರುದಾರರು ನೀಡಿದ್ದು ಎಸ್ ಐ ಟಿಯ ಕೆಲವು ಅಧಿಕಾರಿಗಳ ನಡೆ ವ್ಯಾಪಕ ಚರ್ಚೆಗೂ, ಹಲವು ಅನುಮಾಗಳಿಗೂ ಕಾರಣವಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಎಸ್ ಐ ಟಿ ಅಧಿಕಾರಿಗಳು
ಡಿ.2 ರಂದು ಸೂಕ್ತ ಅನುಮತಿಗಳನ್ನು ಪಡೆದುಕೊಂಡು ಮತ್ತೆ ಮುಂದಿನ ತನಿಖೆಯನ್ನು ಚುರುಕುಗೊಳಿಸಬೇಕಾಗಿದೆ.
















Post Comment