ಧರ್ಮಸ್ಥಳದಲ್ಲಿ ಕಪಟ ಸ್ವಾಮಿಗಳ ಭಸ್ಮ ಮಹಾತ್ಮೆ..!

‘ಅ’ಸ್ವಾಮಿಯ ಮಂಕುಬೂದಿಗೆ ಮೂರ್ಛೆ ಹೋದ ಮಹಿಳೆ : ಪುರುಷನಿಂದ ಹಣ ದೋಚಿ ಪರಾರಿಯಾದ ಸ್ವಾಮೀಜಿ ವೇಷಧಾರಿಗಳು!
ಬೆಳ್ತಂಗಡಿ : ಸತ್ಯಸಾಯಿ ಭಕ್ತರ ಸೋಗಿನಲ್ಲಿ ಸ್ವಾಮೀಜಿಗಳ ವೇಷದಲ್ಲಿ ಸಂಶಯಾಸ್ಪದವಾಗಿ ಬಂದ ಅಪರಿಚಿತ ವ್ಯಕ್ತಿಗಳ ತಂಡವೊಂದು ಮನೆಗಳಿಗೆ ತೆರಳಿ ಭಸ್ಮ ಎರಚಿ ಭಯ ಹುಟ್ಟಿಸಿ ಹಣ ದೋಚಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ನೋಂದಣಿಯ ಪಿಕಪ್ ಟೆಂಪೋದಲ್ಲಿ ಶಿರ್ಡಿ ಬಾಬಾ, ಈಶ್ವರ ಮತ್ತಿತರ ದೇವರ ಚಿತ್ರಗಳನ್ನು ಅಂಟಿಸಿಕೊಂಡು ಬಂದ ಕೇಸರಿ ಮುಂಡಾಸುಧಾರಿಗಳು ಧರ್ಮಸ್ಥಳದ ಮೋಂಟ ಪೂಜಾರಿ ಎಂಬವರ ಮನೆಗೆ ಬೆಳಿಗ್ಗೆ ಬಂದು ಮಹಿಳೆಯ ಮೇಲೆ ಭಸ್ಮ ಎರಚಿ ಮೂರ್ಛೆ ಹೋಗಿದ್ದು ಇದೇ ಸಂದರ್ಭ ಮನೆಯಲ್ಲಿದ್ದ ಗಂಡಸು ಸ್ವಾಮೀಜಿ ವೇಷದಲ್ಲಿದ್ದ ವ್ಯಕ್ತಿಗಳಿಗೆ ದುಡ್ಡು ನೀಡಿದ್ದಾರೆ.
ಇದೇ ಸಂದರ್ಭ ಘಟನೆಯ ಬಗ್ಗೆ ಸ್ಥಳೀಯರು ಗಮನಿಸಿ ಎಚ್ಚೆತ್ತುಕೊಂಡಾಗ ಸ್ವಾಮೀಜಿ ವೇಷದಲ್ಲಿದ್ದ ಕೇಸರಿ ಮುಸುಕುಧಾರಿಗಳು ಪರಾರಿಯಾಗಿದ್ದು ಸ್ಥಳೀಯವಾಗಿ ಆತಂಕ, ಗೊಂದಲದ ವಾತಾವರಣ ಉಂಟಾಗಿದೆ.
ಈ ಘಟನೆಯ ಮಾಹಿತಿಯನ್ನು ಸ್ಥಳೀಯರು ಇದೀಗ ಧರ್ಮಸ್ಥಳ ಪೊಲೀಸರ ಗಮನಕ್ಕೆ ತಂದಿದ್ದಾರೆ.
















Post Comment