ಬೆಳ್ತಂಗಡಿಯಲ್ಲಿ ಸರ್ವಧರ್ಮೀಯ ‘ಸದ್ಭಾವನಾ ಮಂಚ್’ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿಯಲ್ಲಿ ಸರ್ವಧರ್ಮೀಯ ‘ಸದ್ಭಾವನಾ ಮಂಚ್’ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ

Share
IMG-20251204-WA0001-1024x576 ಬೆಳ್ತಂಗಡಿಯಲ್ಲಿ             ಸರ್ವಧರ್ಮೀಯ      'ಸದ್ಭಾವನಾ ಮಂಚ್' ಅಸ್ತಿತ್ವಕ್ಕೆ:        ಪದಾಧಿಕಾರಿಗಳ ಆಯ್ಕೆ


ಬೆಳ್ತಂಗಡಿ : ಮನುಷ್ಯ ಮನುಷ್ಯರ ಮಧ್ಯೆ, ಧರ್ಮ -ಧರ್ಮಗಳ ನಡುವೆ ಪರಸ್ಪರ ನಂಬಿಕೆ ವಿಶ್ವಾಸಗಳನ್ನು ಸದೃಢಗೊಳಿಸುವ ಮತ್ತು ಊಹೆ , ಅಪನಂಬಿಕೆಗಳನ್ನು ತೊಡೆದು ಹಾಕುವ ಪ್ರಯತ್ನವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಧರ್ಮೀಯ ಸಮಾನ ಮನಸ್ಕ ಹಿರಿಯರ ಭಾಗವಹಿಸುವಿಕೆಯಲ್ಲಿ ಮುಕ್ತ ಸಮಾಲೋಚನೆ ಬಳಿಕ ‘ಸದ್ಭಾವನಾ ಮಂಚ್ ‘ ಎಂಬ ಸಂಘಟನಾತ್ಮಕ ಕೂಟವೊಂದು ಬೆಳ್ತಂಗಡಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸೈಂಟ್ ಪೀಟರ್ ಕ್ಲಾವರ್ ಕಾಥೋಲಿಕ್ ಚರ್ಚ್ ಹಾಲ್ ನಲ್ಲಿ ನಡೆದ ವಿವಿಧ ಧರ್ಮಗಳ ಸಮಾನ ಮನಸ್ಕ ಹಿರಿಯರ ಸಭೆಯಲ್ಲಿ ನಡೆದ ಚರ್ಚೆ ಮತ್ತು ಸಮಾಲೋಚನೆಯ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು.
ಎಲ್ಲಾ ಧರ್ಮಗಳನ್ನು ಹತ್ತಿರದಿಂದ ಅರಿಯುವ ಮತ್ತು ತಪ್ಪು ಕಲ್ಪನೆಗಳನ್ನು ಅಳಿಸುವ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಎಲ್ಲಾ ಧರ್ಮಗಳ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಒಟ್ಟು ಸೇರಿ ಹಬ್ಬದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವುದು, ಪ್ರಮುಖ ರಾಷ್ಟ್ರೀಯ ದಿನಾಚರಣೆಗಳನ್ನು ಒಂದಾಗಿ ಆಚರಿಸುವುದು ಮುಂತಾದ ನಿರ್ಮಾಣಾತ್ಮಕ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶದಿಂದ ಇಂಥ ವೇದಿಕೆಗಳನ್ನು ಬೆಳ್ತಂಗಡಿ ತಾಲೂಕಿನಾದ್ಯಂತ ಸ್ಥಾಪಿಸಲು ಪ್ರಯತ್ನಿಸುವುದು ಎಂದು ನಿರ್ಧರಿಸಲಾಯಿತು.

‘ಸದ್ಭಾವನಾ ಮಂಚ್ ‘ ನ ಪದಾದಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಫಾ| ಇಲಿಯಾಸ್ ಡಿ’ ಸೋಜಾ, ಅಧ್ಯಕ್ಷರಾಗಿ ಸುಭಾಶ್ಚಂದ್ರ ರೈ , ಪ್ರಧಾನ ಕಾರ್ಯದರ್ಶಿಗಳಾಗಿ ಆದಂ ಶಾಫಿ, ಖಜಾಂಚಿಯಾಗಿ ವಿಕ್ಟರ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಮಬ್ಯಾಝ್, ಸುರೇಶ್ ಜೈನ್, ಲಿಯೋ ಪೆರೇರಾ ಮತ್ತು ನಾಸಿರ್ ಖಾನ್ ಆಯ್ಕೆಯಾದರು.

InShot_20251003_220916895-1024x1024 ಬೆಳ್ತಂಗಡಿಯಲ್ಲಿ             ಸರ್ವಧರ್ಮೀಯ      'ಸದ್ಭಾವನಾ ಮಂಚ್' ಅಸ್ತಿತ್ವಕ್ಕೆ:        ಪದಾಧಿಕಾರಿಗಳ ಆಯ್ಕೆ

Post Comment

ಟ್ರೆಂಡಿಂಗ್‌

error: Content is protected !!