ಗ್ರಾ.ಪಂ. ಆಡಳಿತದ ಸ್ಪಂದನೆ ಇಲ್ಲದ ‘ಬಾರ್ಯ ಜನಸ್ಪಂದನ ಸಭೆ’ : ಪಿಡಿಒ ಬೇಜವಾಬ್ದಾರಿಗೆ ಶಾಸಕರ ಖಂಡನೆ:ಶಿಸ್ತುಕ್ರಮಕ್ಕೆ ಸೂಚನೆ

ಬೊಂಡ ಮೂಟೆ ಹೊತ್ತು ವೇದಿಕೆಯತ್ತ ಬಂದ ತಾ.ಪಂ. ಮಾಜಿ ಸದಸ್ಯ
ಬೆಳ್ತಂಗಡಿ : ಗ್ರಾಮಸ್ಥರಿಗೆ ಭಾಗವಹಿಸಲು ಸಾಕಾಗುವಷ್ಟು ಸಭಾಂಗಣವಿಲ್ಲ, ಬೇಜವಾಬ್ದಾರಿಯ ಅಧಿಕಾರಿಗಳಂತೆ ಕೆಟ್ಟು ಹೋದ ಧ್ವನಿ ವರ್ಧಕ ಸೇರಿದಂತೆ ಅತ್ಯಂತ ಅಸ್ವಸ್ಥೆಯ ಅಡ್ಡೆಯಂತಾದ ಜನಸ್ಪಂದನ ಸಭೆ ಬಾರ್ಯ ಗ್ರಾಮಪಂಚಾಯತ್ ನಲ್ಲಿ ಇಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮಪಂಚಾಯತ್ ನಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವ್ಯವಸ್ಥೆಯನ್ನು ಕಂಡು ಶಾಸಕ ಹರೀಶ್ ಪೂಂಜ ಅವರು ಸಭೆಯ ಪ್ರಾರಂಭದಲ್ಲೇ ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಖಂಡನೆ ವ್ಯಕ್ತಪಡಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಜನಸ್ಪಂದನ ಸಭೆಯಲ್ಲಿ ಜನಪ್ರತಿನಿಧಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ , ಕಂದಾಯ ನಿರೀಕ್ಷಕ
ಪವಾಡೆಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಮಾಜಿ ತಾ.ಪಂ.ಸದಸ್ಯ ಮಂಜುನಾಥ ಸಾಲ್ಯಾನ್ ಅವರು ಮಂಗಗಳ ಹಾವಳಿಯಿಂದ ಕೃಷಿಕರಿಗಾಗುವ ತೊಂದರೆಯನ್ನು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲು ಮಂಗಳು ತಿಂದ ಸಿಯಾಳದ ಅವಶೇಷಗಳ ಮೂಟೆಯನ್ನು ತಲೆಯಲ್ಲಿ ಹೊತ್ತು ವೇದಿಯತ್ತ ಬಂದು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
















Post Comment