ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ : ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು : ಡಿಸೆಂಬರ್ 21ರಂದು ಜರಗಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಅಮ್ಮನವರ ಮತ್ತು ಮೂಜುಲ್ನಾಯ ಕೊಡಮಣಿತ್ತಾಯ, ಸ್ಥಳ ಸಾನಿಧ್ಯದ ದೈವದ ಶುಭಾಶೀರ್ವಾದ ಪಡೆದುಕೊಂಡು ಕಂಬಳ ಸಮಿತಿಯ ಪ್ರಮುಖರು ಮತ್ತು ಗ್ರಾಮದ ಗಣ್ಯರ ಮೂಲಕ ಭಾನುವಾರ ಬಿಡುಗಡೆಗೊಳಿಸಲಾಯಿತು.
ಕಂಬಳದ ಆಮಂತ್ರಣ ಪತ್ರಿಕೆಯನ್ನು ಸಾಂಕೇತಿಕವಾಗಿ
ಬಿಡುಗಡೆಗೊಳಿಸಿದ ಕಂಬಳ ಸಮಿತಿಯ ಅಧ್ಯಕ್ಷರಾದ ನೋಣಾಲುಗುತ್ತು ಮತ್ತಿತರ ಗಣ್ಯರು ಶುಭ ಹಾರೈಸಿದರು.
ಈ ಸಂದರ್ಭ ರಶ್ಮಿತ್ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಮತ್ತು ಕಂಬಳ ಸಮಿತಿಯ ಜವಾಬ್ದಾರಿಯುತ ವಿವಿಧ ಪದಾಧಿಕಾರಿಗಳು, ಸ್ಥಳದಾನಿಗಳು,ವಿವಿಧ ಭಜನಾ ಮಂಡಳಿಯ ಪದಾಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಮತ್ತು ಕಂಬಳಾಭೀಮಾನಿಗಳು ಪಾಲ್ಗೊಂಡರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮಾತ್ರವಲ್ಲದೆ ಗ್ರಾಮದ ಗಣ್ಯರ, ಪ್ರಮುಖರು, ಸಂಘ ಸಂಸ್ಥೆಗಳು, ಯುವಕ, ಯುವತಿಯರು ಎಲ್ಲರೂ ಕಂಬಳದ ಯಶಸ್ವಿಗೆ ಶ್ರಮಿಸುವಂತೆ ಪದಾಧಿಕಾರಿಗಳು ವಿನಂತಿಸಿಕೊಂಡರು.
















Post Comment