ಬೆಳ್ತಂಗಡಿ ಪ್ರಬುದ್ಧ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

ಬೆಳ್ತಂಗಡಿ : ನಗರದ “ಪ್ರಬುದ್ಧ ” ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು.
ಪ್ರಾರಂಭದಲ್ಲಿ ಮತ್ತಿತರರು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಕುರಿತು ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್ ಮಾತಾಡುತ್ತಾ ಬಾಬಾ ಸಾಹೇಬ್ ಡಾ.ಬಿ. ಆರ್ಆ. ಅಂಬೇಡ್ಕರ್ ರವರು ಸಮಾನತೆಗೋಸ್ಕರ ಜೀವನದುದ್ದಕ್ಕೂ ಹೋರಾಟ ಮಾಡುತ್ತಲೇ ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಪ್ರಪಂಚದಲ್ಲಿಯೇ ಅತೀ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶದ ಸರ್ವ ಜನಾಂಗಕ್ಕೆ ನೀಡಿದ್ದಾರೆ ಅವರ ಸಿದ್ಧಾಂತ ಗಳನ್ನ ನಮ್ಮ ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಬಹುಜನ ಮುಖಂಡ ಸಂಜೀವ ಆರ್ ಮಾತನಾಡಿ ಅಂಬೇಡ್ಕರ್ ರವರು ನಮ್ಮ ವಿಮೋಚನೆಗೆ, ಪರಿವರ್ತನೆಗೆ ಸಂವಿಧಾನವನ್ನು ನಮಗೆ ಅರ್ಪಿಸಿ 75 ವರ್ಷ ಕಳೆದರೂ ದಲಿತರ, ಶೋಷಿತ ವರ್ಗದವರ ಸಮಸ್ಯೆ ಸಮಸ್ಯೆ ಗಳಾಗಿಯೇ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಮುಖಂಡರಾದ ಜಯಾನಂದ, ರಾಜು ಪಡಂಗಡಿ ಸಂದರ್ಭೋಚಿತವಾಗಿ ಮಾತನಾಡಿದರು. ವಿಚಾರದ ಬಗ್ಗೆ ತನ್ನ ಅನಿಸಿಕೆ ಗಳನ್ನು ಹಂಚಿ ಕೊಂಡರು. ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ (ರಿ ) ಅಧ್ಯಕ್ಷ ಚೆನ್ನಕೇಶವ ಸ್ವಾಗತಿಸಿ ಧನ್ಯವಾದವಿತ್ತರು.
















Post Comment