ಗೇರುಕಟ್ಟೆ ‘ಟಿಕ್ಕ ಶಾಪ್’ ಮಾಲಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

ಹೆತ್ತವರ ಬಾಯಿ ಮುಚ್ಚಿಸಲು
ಬಾಲಕಿ ವೀಡಿಯೋ ವೈರಲ್ !
ಬೆಳ್ತಂಗಡಿ : ಪರಿಚಿತ ದಂಪತಿಯ ಪುತ್ರಿಯಾಗಿರುವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಕೃತ್ಯ ಬೆಳಕಿಗೆ ಬಂದಿದ್ದು ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪೇಟೆಯಲ್ಲಿರುವ ‘ಟಿಕ್ಕಾ ಪಾರ್ಕ್’ ಎಂಬ ಅಂಗಡಿಯ ಮಾಲಕ ಮಹಮ್ಮದ್ ಎಂಬಾತನೇ ಕೆಲವು ಸಮಯಗಳ ಹಿಂದೆ ತನ್ನ ಅಂಗಡಿಗೆ ಬರುತ್ತಿದ್ದ 6ನೇ ತರಗತಿಯ ಅಪ್ರಾಪ್ತ ಬಾಲಕಿ ಟಿಕ್ಕ ತರಲೆಂದು ಹೋಗಿದ್ದ ಸಂದರ್ಭ ಹಲವು ಭಾರಿ ಬೇರೆ ಬೇರೆ ದಿನಗಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಂಗಡಿ ಬಾಲಕ ತಾನೆಸಗಿದ ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಬಾಲಕಿಗೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಅಂಗಡಿಗೆ ಬರುತ್ತಿದ್ದ ಹೆತ್ತವರ ಜೊತೆ ಹಲವು ಭಾರಿ ಅಂಗಡಿಗೆ ಬರುತ್ತಿದ್ದ ಕಾರಣ ಅಂಗಡಿಯವನಿಗೆ ಬಾಲಕಿ ಪರಿಚಯವಿತ್ತು.
ಅಂಗಡಿ ಮಾಲಕ ಪರಿಚಿತ ವ್ಯಕ್ತಿಯಾಗಿರುವ ಕಾರಣಕ್ಕಾಗಿ ಆಗಾಗ ಹೆತ್ತವರು ಟಿಕ್ಕ ಅಂಗಡಿಗೆ ಹೋಗುತ್ತಿದ್ದ ಸಂದರ್ಭಗಳಲ್ಲಿ ಬಾಲಕಿಯನ್ನು ಕರೆದೊಯ್ಯುತ್ತಿದ್ದು ಬಾಲಕಿಯು ಟ್ಯೂಷನ್ ಹೋಗುವಾಗ ಮತ್ತು ಟಿಕ್ಕ ತರಲೆಂದು ಕೆಲವು ಸಲ ಒಬ್ಬಳೇ ಹೋಗುತ್ತಿದ್ದು ಇಂಥ ಸಂದರ್ಭದಲ್ಲಿ ಆಕೆಯ ಸಲುಗೆ ಮತ್ತು ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅಂಗಡಿ ಮಾಲಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಾಲಕಿಯು ಹೆತ್ತವರಲ್ಲಿ ಹೇಳಿಕೊಂಡಾಗ ಕೃತ್ಯ ಬೆಳಕಿಗೆ ಬಂದಿತ್ತು.
ಈ ಕೃತ್ಯ ಬಾಲಕಿಯ ಹೆತ್ತವರಿಗೆ ತಿಳಿದು ಈ ಬಗ್ಗೆ ಹೋಗಿ ವಿಚಾರಿಸಲು ಹೋಗಿದ್ದು ಅಂಗಡಿ ಮಾಲಕ ಮತ್ತು ಬಾಲಕಿಯ ತಂದೆ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಇದೇ ಸಂದರ್ಭ ಆತ ಮತ್ತು ಇತರರು ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಇನ್ನೊಂದೆಡೆ ಅಂಗಡಿ ಮಾಲಕ ಮತ್ತು ಆತನ ಬೆಂಬಲಿಗರು ಸೇರಿ ಅಂಗಡಿ ಮಾಲಕನ ಲೈಂಗಿಕ ಕಿರುಕುಳ ಪ್ರಕರಣವನ್ನು
ಬಾಲಕಿಯ ಹೆತ್ತವರ ಬಾಯಿ ಮುಚ್ಚಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಅಪ್ರಾಪ್ತ ಬಾಲಕಿ ಒಂಟಿಯಾಗಿ ಅಂಗಡಿಗೆ ಬಂದಿದ್ದ ಸಂದರ್ಭದ ಸಿಸಿ ಕ್ಯಾಮೆರಾ ಫೂಟೇಜನ್ನು ಮೊಬೈಲ್ ಮೂಲಕ ವೈರಲ್ ಮಾಡಿ ಕಳ್ಳತನದ ಆರೋಪ ಹೊರಿಸಿ ಬಾಲಕಿ ಇನ್ನಷ್ಟು ಮಾನಸಿಕ ಆಘಾತಕ್ಕೊಳಗಾಗಲು ಪ್ರಚೋದನೆ ನೀಡುವ ಕೃತ್ಯವೆಸಗಿದ್ದಾರೆ.
ವೀಡಿಯೋ ವೈರಲ್ ಆದ ಕಾರಣ ಅವಮಾನಗೊಂಡ ತಮ್ಮ ಅಪ್ರಾಪ್ತ ಮಗಳು ಇದೀಗ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದು ಮಗಳ
ಶಿಕ್ಷಣ ಮತ್ತು ಭವಿಷ್ಯ ಕುಂಠಿತಗೊಳ್ಳುವ ಬಗ್ಗೆ ಹೆತ್ತವರಿಗೆ
ಚಿಂತೆಯಾಗಿದ್ದು ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾತ್ರವಲ್ಲದೆ ಈ ಪ್ರಕರಣ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಟ್ಟಿಲೇರಿದೆ.
















Post Comment