ಶಿಶಿಲ ‘309’ ಜಂಟಿ ಸರ್ವೆಗೆ ಬಂದ ಅರಣ್ಯಾಧಿಕಾರಿಗಳ ಗರ್ವ ಭಂಗ!

ಶಿಶಿಲ ‘309’ ಜಂಟಿ ಸರ್ವೆಗೆ ಬಂದ ಅರಣ್ಯಾಧಿಕಾರಿಗಳ ಗರ್ವ ಭಂಗ!

Share

ಪೂರ್ವ ಮಾಹಿತಿ ನೀಡದೆ ಪಟ್ಟಾ ಭೂಮಿಗೆ ಪ್ರವೇಶಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರು ಸೂಚನೆಯಂತೆ
ಸಂತ್ರಸ್ತರ ಸಮಕ್ಷಮ ಚಾಲನೆ ನೀಡಲಾದ ಸರ್ವೆ ನಂಬ್ರ ಕಳೆಂಜ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾದ 309 ಸರ್ವೆ ನಂಬ್ರಕ್ಕೆ ಸಂಬಂಧಿಸಿದ ಅರಣ್ಯ ಮತ್ತು ಕಂದಾಯ ಇಲಾಖಾ ಜಂಟಿ ಸರ್ವೇ ಗಡಿ ಗುರುತು ಕಾರ್ಯ ಹಾಸನ ಮತ್ತು ದ.ಕ. ಜಿಲ್ಲಾ ಗಡಿಭಾಗದಿಂದ ಆರಂಭಗೊಂಡು ಇದೀಗ ಶಿಶಿಲ ಗ್ರಾಮದ ದೇನೋಡಿ ಪ್ರದೇಶ ತಲುಪಿದ್ದು ಶಿಶಿಲ ಗ್ರಾಮದ ಸುಮಾರು 80 ಕುಟುಂಬಗಳು ಜಂಟಿ ಸರ್ವೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಭೂಮಿ ಮಾತ್ರ ಸರ್ವೇ ನಡೆಸಿ, ನಮ್ಮ ಖಾಸಗಿ ಪಟ್ಟಾ ಭೂಮಿಗೆ ಪೂರ್ವ ಮಾಹಿತಿ ನೀಡದೆ ಪ್ರವೇಶಿಸಬೇಡಿ ಎಂದು ಪಟ್ಟು ಹಿಡಿದು ಅಧಿಕಾರಿಗಳನ್ನು ವಾಪಾಸು ಕಳಿಸಿದ ಘಟನೆ ಶಿಶಿಲ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ 309 ಸರ್ವೆ ನಂಬ್ರದ ಪ್ರದೇಶದಲ್ಲಿ 125 ವರ್ಷಗಳಿಂದ ವಾಸ್ತವ್ಯವಿರುವ ಸುಮಾರು 200 ಕುಟುಂಬಗಳ ಭೂಹಕ್ಕಿನ ಭವಿಷ್ಯದ ಪ್ರಶ್ನೆಯಾಗಿ ವಿವಾದಕ್ಕೆ ಕಾರಣವಾಗಿದ್ದು ಮರು ಜಂಟಿ ಸರ್ವೆ ಮೂಲಕ ವಿವಾದಕ್ಕೆ ಮತ್ತು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ ಇತ್ತೀಚೆಗೆ ಕಳೆಂಜದಲ್ಲಿ
ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆದ
ಅರಣ್ಯ, ಕಂದಾಯ ಇಲಾಖಾಧಿಕಾರಿಗಳ ಮತ್ತು ಗ್ರಾಮಸ್ಥರ ಮಹತ್ವದ ಸಭೆಯಲ್ಲಿ ಹಾಸನ-ದ.ಕ. ಜಿಲ್ಲೆಯ ಗಡಿಭಾಗದಿಂದ ಜಂಟಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಕಂದಾಯ-ಅರಣ್ಯ ಇಲಾಖೆಯ ಅಧಿಕಾರಿಗಳು ಇದೀಗ ಜಂಟಿ ಸರ್ವೆ ತಂಡ ಶಿಶಿಲ ತಲುಪಿದ್ದು ದೇನೋಡಿ ಪ್ರದೇಶದಲ್ಲಿ 80 ಕುಟುಂಬಗಳು ಸುಮಾರು 76 ವರ್ಷಗಳಿಂದ ವಾಸಿಸುತ್ತಿದ್ದು ಆ ಕುಟುಂಬಗಳ ಸ್ವಾಧೀನದಲ್ಲಿರುವ ಬಹುಭಾಗವು ಪಟ್ಟಾ ಭೂಮಿಯಾಗಿದ್ದು ಸ್ಥಳೀಯರಿಗೆ ಯಾವುದೇ ನೋಟಿಸ್ ಆಗಲಿ, ಪೂರ್ವ ಮಾಹಿತಿಯನ್ನಾಗಲಿ ನೀಡದೆ ಜಂಟಿ ಸರ್ವೆ ಕಾರ್ಯಕ್ಕೆ ಅಧಿಕಾರಿಗಳ ತಂಡ ಬಂದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಅರಣ್ಯ ಪ್ರದೇಶ ಮಾತ್ರ ಸರ್ವೆ ಮಾಡಿ, ನಮ್ಮ ಜಾಗಗಳಿಗೆ ಬರಬೇಡಿ ಎಂದು ಪಟ್ಟು ಹಿಡಿದರು. ಇದೀಗ 309ರ ಜಂಟಿ ಸರ್ವೇ ಗೊಂದಲ,ಕುತೂಹಲಗಳಿಗೆ ಕಾರಣವಾಗುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!