ಬೆಳ್ತಂಗಡಿಯಲ್ಲಿ “ಕೊಂದವರು ಯಾರು?” ಬೃಹತ್ ಮಹಿಳಾ ನ್ಯಾಯ ಸಮಾವೇಶಕ್ಕೆ ಚಾಲನೆ

ಬೆಳ್ತಂಗಡಿಯಲ್ಲಿ “ಕೊಂದವರು ಯಾರು?” ಬೃಹತ್ ಮಹಿಳಾ ನ್ಯಾಯ ಸಮಾವೇಶಕ್ಕೆ ಚಾಲನೆ

Share

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ಮತ್ತು ವೇದವಲ್ಲಿ ಹರಳೆ, ಪದ್ಮಲತಾ, ಆನೆ ಮಾವುತ ನಾರಾಯಣ ಸಫಲ್ಯ ಮತ್ತು ಯಮುನಾ ಹಾಗೂ ನೂರಾರು ಅಸಹಜ ಸಾವುಗಳ ಪ್ರಕರಣಗಳ ನ್ಯಾಯಕ್ಕಾಗಿ ನೂರಾರು ಮಹಿಳಾ ಸಂಘಟನೆಗಳ ಬೆಂಬಲದೊಂದಿಗೆ “ಕೊಂದವರು ಯಾರು- ಮಹಿಳಾ ನ್ಯಾಯ ಸಮಾವೇಶವು ಇಂದು ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದು
ಇಲ್ಲಿನ ಮಾರಿಗುಡಿ ಬಳಿಯಿಂದ ಹೊರಟ ಮಹಿಳೆಯರ ಬೃಹತ್ ಮೌನ ಮೆರವಣಿಗೆಯು ತಾಲೂಕು ಆಡಳಿತ ಸೌಧದ ವಠಾರದಲ್ಲಿ ಸಮಾವೇಶಗೊಂಡರು.
“ಕೊಂದವರು ಯಾರು” ಮಹಿಳಾ ನ್ಯಾಯ ಸಮಾವೇಶವು ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸುವ ಮೂಲಕ ವೇದಿಕೆಯಿಂದ ಚಾಲನೆ ನೀಡಲಾಯಿತು.
ಪ್ರಾರಂಭದಲ್ಲಿ ದಲಿತ ಜನಪದ ಸಂಸ್ಕೃತಿಯ ಪ್ರತೀಕವಾದ ದುಡಿ ನುಡಿ ಮೂಲಕ ಚಾಲನೆಗೊಂಡ ‘ಕೊಂದವರು ಯಾರು’ ನ್ಯಾಯ ಸಮಾವೇಶ ಮೌನ ಮೆರವಣಿಗೆಯಲ್ಲಿ ಜನಸಾಮಾನ್ಯರು, ಸಾಮಾಜಿಕ ಸಂಘಟನೆಗಳ ಪ್ರಮುಖರು,
ಮಹಿಳಾ ಸಂಘಟನೆಗಳ ನಾಯಕಿಯರು ಭಾಗಿಯಾದರು.
ಮಹಿಳೆಯರು ಮಹಿಳೆಯರಿಗಾಗಿ ಮಹಿಳೆಯರಿಂದ ಎಂಬ ಧ್ಯೇಯದೊಂದಿಗೆ ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರನ್ನು ಕೊಂದವರು ಯಾರು? ಎಂಬ ಶೀರ್ಷಿಕೆಯಡಿ ಮಹಿಳಾ ಸಮಾವೇಶ ನಡೆಯುತ್ತಿದೆ. ಸೌಜನ್ಯ ನ್ಯಾಯಪರ ಹೋರಾಟಗಾರರು ಚಾರಿತ್ರಿಕ ಮಹಿಳಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದು ಘೋಷಣೆಗಳ ಮೂಲಕ ಅತ್ಯಾಚಾರಿಗಳನ್ನು ಕೊಲೆಗಡುಕರ ನೊಂದವರಪರ ನಿಂತು ಕೊಂದವರ ಕಠಿಣ ಶಿಕ್ಷೆಗಾಗಿ ಒತ್ತಾಯಿಸಿದ್ದಾರೆ. ಮಹಿಳಾ ನಾಯಕಿ ಗೌರಮ್ಮ ಮಹಿಳಾ ನ್ಯಾಯ ಸಮಾವೇಶದ ಮನವಿ ವಾಚಿಸಿದರು.

Post Comment

ಟ್ರೆಂಡಿಂಗ್‌

error: Content is protected !!