ಕಳಿಯ ಮೂಡಾಯಿಪಲ್ಕೆ ಶ್ರೀ ಆದಿಲಿಂಗೇಶ್ವರ ಕ್ಷೇತ್ರದ 8ನೇ ವರ್ಷದ ಜಾತ್ರೋತ್ಸವ ಸಂಪನ್ನ

ಕಳಿಯ ಮೂಡಾಯಿಪಲ್ಕೆ ಶ್ರೀ ಆದಿಲಿಂಗೇಶ್ವರ ಕ್ಷೇತ್ರದ 8ನೇ ವರ್ಷದ ಜಾತ್ರೋತ್ಸವ ಸಂಪನ್ನ

Share

ಬೆಳ್ತಂಗಡಿ : ಕಳಿಯ ಗ್ರಾಮದ ಮೂಡಾಯಿ ಪಲ್ಕೆ ಪರಪು ಉದ್ಭವ
ಶ್ರೀ ಆದಿಲಿಂಗೇಶ್ವರ ದೇವಸ್ಥಾನದಲ್ಲಿ 8ನೇ ವರ್ಷದ ಜಾತ್ರೋತ್ಸವವು ಡಿಸೆಂಬರ್ 28ರಿಂದ 30ರವರೆಗೆ ನೆರವೇರಿತು.

ಜಾತ್ರಾಪ್ರಯಕ್ತ ವಿವಿಧ ಭಜನಾ ಸಂಘ ಸಂಸ್ಥೆಗಳಿಂದ ಭಜನಾ ಕಾರ್ಯಕ್ರಮವು ನಡೆದವು. ಓಂಕಾರೇಶ್ವರ ಭಜನಾಸಂಘ ಪಜೀರಡ್ಕ, ಚಾಮುಂಡೇಶ್ವರಿ ಭಜನಾ ಮಂಡಳಿ ಪಟ್ಲಡ್ಕ, ಕೊಕ್ಕಡ, ‌‌‌‌‌‌‌‌‌

ಶ್ರೀ ಚಾಮುಂಡೇಶ್ವರಿ ಭಜನಾಸಂಘ ಪಿಲಿಗೂಡು ಕಣಿಯೂರು ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಕಲಾಸಂಘ ಬೆಳ್ತಂಗಡಿ ಇವರಿಂದ ಭಕ್ತಿರಸಮಂಜರಿ ಕಾರ್ಯಕ್ರಮವು ನಡೆಯಿತು.
ಜಾತ್ರೋತ್ಸವ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ (ರಿ ) ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ಅವರನ್ನು ಫಲಪುಷ್ಪ ಸ್ಮರಣಿಕೆಗಳೊಂದಿಗೆ ಶಾಲು ಹೊದಿಸಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಪ್ರಧಾನ ಅರ್ಚಕ ಚಿತ್ತರಂಜನ್ ಆರ್., ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರುಕ್ಮಯ. ಎಂ., ಪ್ರಧಾನ ಕಾರ್ಯದರ್ಶಿ ವನಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

IMG-20260102-WA0009-1024x461 ಕಳಿಯ ಮೂಡಾಯಿಪಲ್ಕೆ                   ಶ್ರೀ ಆದಿಲಿಂಗೇಶ್ವರ ಕ್ಷೇತ್ರದ  8ನೇ ವರ್ಷದ ಜಾತ್ರೋತ್ಸವ ಸಂಪನ್ನ

ಮುಖಪುಟ » ಕಳಿಯ ಮೂಡಾಯಿಪಲ್ಕೆ ಶ್ರೀ ಆದಿಲಿಂಗೇಶ್ವರ ಕ್ಷೇತ್ರದ 8ನೇ ವರ್ಷದ ಜಾತ್ರೋತ್ಸವ ಸಂಪನ್ನ

Post Comment

ಟ್ರೆಂಡಿಂಗ್‌

error: Content is protected !!