‘ಕೋರೆಗಾಂವ್’ ವಿಜಯದಿಂದ ದೇಶದಲ್ಲಿ ಶೋಷಿತರಿಗೆ ಶಿಕ್ಷಣದ ಹೆಬ್ಬಾಗಿಲು ತೆರೆಯಿತು : ಸೇವಿಯರ್ ಪಾಲೇಲಿ

‘ಕೋರೆಗಾಂವ್’ ವಿಜಯದಿಂದ ದೇಶದಲ್ಲಿ ಶೋಷಿತರಿಗೆ ಶಿಕ್ಷಣದ ಹೆಬ್ಬಾಗಿಲು ತೆರೆಯಿತು : ಸೇವಿಯರ್ ಪಾಲೇಲಿ

Share

ಬೆಳ್ತಂಗಡಿ : ಕೋರೆಗಾಂವ್ ಯುದ್ಧವು ಶತಶತಮಾನಗಳ ಅಮಾನವೀಯ , ಜೀವವಿರೋಧಿ ಅಸ್ಪೃಶ್ಯತೆ ಅಪಮಾನಗಳ ವಿರುದ್ಧ ಶೋಷಿತರು ಸ್ವಾಭಿಮಾನಕ್ಕಾಗಿ ನಡೆದ ಆಕ್ರೋಶದ ಕದನವಾಗಿದೆ ಕೋರೆಗಾಂವ್ ಯುದ್ಧ ವಿಜಯೋತ್ಸವವು ಶೋಷಿತ ಸಮುದಾಯಗಳ ಹೋರಾಟಗಳಿಗೆ ಸ್ಫೂರ್ತಿಯಾಗಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿ ಸೇವಿಯರ್ ಪಾಲೇಲಿ ಹೇಳಿದರು.
ಅವರು ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜ:4ನೇ ಭಾನುವಾರ ಆಯೋಜಿಸಲಾದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋರೆಗಾಂವ್ ಕದನ‌ ಇತಿಹಾಸ ಮತ್ತು ವಿಜಯೋತ್ಸವದ ಅರಿವಿನಿಂದ ಜಾಗೃತರಾಗಿ ಶೋಷಿತರು ಶಿಕ್ಷಣಕ್ಕೆ ಒತ್ತು ಕೊಡಬೇಕು‌ ಏಕೆಂದರೆ ಆ ಯುದ್ಧದ ಗೆಲುವಿನಿಂದಲೇ ಶೋಷಿತ ಸಮುದಾಯಗಳ ಪಾಲಿಗೆ ಶಿಕ್ಷಣದ ಹೆಬ್ಬಾಗಿಲು ತೆರೆಯಿತು ಮತ್ತು ಆ ಭೀಕರ ಯುದ್ಧದ ವಿಜಯದಿಂದ ಮತ್ತೊಮ್ಮೆ ಶೋಷಿತರ ಕೆಚ್ಚೆದೆ ಮತ್ತು ಸ್ವಾಭಿಮಾನದ ಚರಿತ್ರೆಯನ್ನು ಜಗತ್ತಿಗೆ ಎತ್ತಿ ತೋರಿಸಲು ಸಾಧ್ಯವಾಯಿತು, ದಲಿತ ಸಂಘಟನೆಗಳು ಶೋಷಿತ ಸಮುದಾಯ ಕೋರೆಗಾಂವ್ ಯುದ್ಧ ಗೆದ್ದ ಸೈನಿಕರ ವೀರ, ಶೂರತನದ ಇತಿಹಾಸವನ್ನು ಗ್ರಾಮಗ್ರಾಮಗಳ ಮನೆಮನೆಗಳಿಗೆ ತಲುಪಿಸಬೇಕು ಎಂದು ಅವರು ಆಶಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷೆ
ಆಶಾ ಸಂತೋಷ್ ಅವರು ವಿಚಾರ ಮಂಡನೆ ಮಾಡುತ್ತಾ
ಶತಶತಮಾನಗಳಿಂದ ಅಸ್ಪೃಶ್ಯತೆಯ ಅವಮಾನಗಳಿಂದ ನೊಂದು ಬೆಂದ ಪರಿಣಾಮ ಶಿಕ್ಷಣ ಮತ್ತು ಸಮಾನತೆಯಿಂದ ವಂಚಿತರಾಗಿದ್ದ ದಲಿತ ಶೋಷಿತ ಸಮುದಾಯಗಳಿಗೆ ಭೀಮಾಕೋರೆಗಾಂವ್ ಯುದ್ಧ ವಿಜಯೋತ್ಸವದ ಬಳಿಕ ಶಿಕ್ಷಣದ ಅವಕಾಶ ದೊರೆಯಿತು.
ಆ ಯುದ್ಧದ ಗೆಲುವಿನಿಂದಲೇ ದೇಶದ ದಮನಿತ ಜನಾಂಗಗಳು ಶಿಕ್ಷಣದ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಸ್ವಾಭಿಮಾನದೊಂದಿಗೆ ಪಡೆದುಕೊಳ್ಳಲು ಸಾಧ್ಯವಾಯಿತು. ದುಷ್ಟ ಆಡಳಿತದ ಮೂಲಕ ಶೋಷಿತರನ್ನು ಅಸ್ಪೃಶ್ಯತೆ ಅಮಾನವೀಯತೆಯಿಂದ ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಪೇಶ್ವೆಗಳ ಎರಡನೇ ಬಾಜಿರಾಯನ ಬೃಹತ್ ಸೈನ್ಯ ಬಲದ ವಿರುದ್ಧ ವೀರನಾಯಕ ಸಿಧಾನಕ ಮತ್ತು ಸಂಗಡಿಗರು ಜೀವದ ಹಂಗು ತೊರೆದು ಕೆಚ್ಚೆದೆಯಿಂದ ಹೋರಾಡಿ ಕೋರೆಗಾಂವ್ ಯುದ್ಧ ಗೆದ್ದ ಪ್ರತಿಫಲವಾಗಿ ಬಾಬಾ ಸಾಹೇಬರು ಮತ್ತು ಅವರ ಪೂರ್ವಜರು ಶಿಕ್ಷಣದ ಬೆಳಕನ್ನು ಪಡೆಯಲು ನಾಂದಿಯಾಯಿತು, ದೇಶಕ್ಕೆ ಶ್ರೇಷ್ಠ ಸಂವಿಧಾನ ಪಡೆಯಲು ಕಾರಣವಾಯಿತು.
ಪರಮಪೂಜ್ಯ ಅಂಬೇಡ್ಕರ್ ರವರು ದೇಶ ವಿದೇಶಗಳಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಸತತ ಅಧ್ಯಯನಗಳಿಂದ ದೇಶದ ಶ್ರೇಷ್ಠ ಸಂವಿಧಾನವನ್ನು ಸಮರ್ಪಿಸಲು‌ ಸಾಧ್ಯವಾಯಿತು, ಇಂದು ನಾವು ಶಿಕ್ಣಣ ಪಡೆಯುತ್ತಿರುವುದಕ್ಕೂ ಕೋರೆಗಾಂವ್ ಯುದ್ಧದ ವಿಜಯೋತ್ಸವವೇ ಕಾರಣ ಎಂದು ಆಶಾ ಸಂತೋಷ್ ಪ್ರತಿಪಾದಿಸಿದರು. ಬುದ್ಧ ಬಸವ ಅಂಬೇಡ್ಕ‌ರ್ ವಚನ ಟ್ರಸ್ಟ್ (ರಿ.) ಇದರ ಅಧ್ಯಕ್ಷ ಚೆನ್ನಕೇಶವ ಅಧ್ಯಕ್ಷತೆವಹಿಸಿ ಮಾತನಾಡಿ ಟ್ರಸ್ಟ್ ಆಶಯವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಸಮಾನ ಮನಸ್ಕರ ಸಂಘಟನೆ ಗೌರವಾಧ್ಯಕ್ಷ ರಾಜಾ ಚೆಂಡ್ತಿಮಾರ್, ಕ.ದ.ಸಂ.ಸ. (ಅಂಬೇಡ್ಕರ್ ವಾದ) ಜಿ.ಸಂ. ಸಂಚಾಲಕ ವೆಂಕಣ್ಣ ಕೊಯ್ಯೂರು, ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಠಾನ ಸಮಿತಿ ಸದಸ್ಯ ಕೆ.ನೇಮಿರಾಜ್ ಕಿಲ್ಲೂರು, ಬಹುಜನ ಚಳುವಳಿ ಮುಖಂಡ ಸಂಜೀವ ಆರ್. , ಜಿ.ಪಂ.ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಕ.ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್., ಪತ್ರಕರ್ತ ಅಚುಶ್ರೀ ಬಾಂಗೇರು ಮುಂತಾದವರು ಕೋರೆಗಾಂವ್ ವಿಜಯೋತ್ಸವದ ಚಾರಿತ್ರಿಕ ಮಹತ್ವವನ್ನು ತಿಳಿಸಿದರು.
ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ
ಪ್ರಭಾಕರ ಶಾಂತಿಕೋಡಿ, ಸಂಘಟನೆಯ ಮಹಿಳಾ ಕಾರ್ಯಕರ್ತೆ ಯಮುನಾ ಲಾಯಿಲಾ, ತಾಲೂಕು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲಾ ಉಪಸ್ಥಿತರಿದ್ದರು. ಕು.ಸುಶ್ಮಿತಾ ನಾರಾವಿ ಸ್ವಾಗತಿಸಿ ‘ಸಂವಿಧಾನ ಪೀಠಿಕೆ’ ವಾಚಿಸಿದರು.
ಪ್ರಶಾಂತ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

ಹಿರಿಯರಾದ ಯಮುನಾ ನಾರಾವಿ, ಸವಿತಾ ಸುಲ್ಕೇರಿ, ಪಿ.ಕೆ.ಚೀಂಕ್ರ ಕೊಕ್ಕಡ, ಸಂತೋಷ್ ಮೂಡಿಗೆರೆ, ಸುಂದರ ನಾಲ್ಕೂರು, ಶೀನ ಪಿಲ್ಯ,
ನಾಗರಾಜ್ ಎಸ್. ಲಾಯಿಲಾ, ಸಂಜೀವ ನೀರಾಡಿ ಹಾಗೂ
ಚರಣ್ ಕುಕ್ಕೇಡಿ, ಕೆ.ಸಿ. ರಮೇಶ್ ಹಲೇಜಿ, ಪ್ರವೀಣ್ ಕೊಕ್ಕಡ, ಚರಣ್ ಕುಕ್ಕೇಡಿ, ಹೊನ್ನಪ್ಪ ಕೊಕ್ಕಡ, ಗಿರೀಶ್ ಪಣಕಜೆ, ಶೇಖರ ಮಾಲಾಡಿ ಮತ್ತಿತರರು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!