ವೇಣೂರು ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ: ವಿಜ್ಞಾಪನಾಪತ್ರ ಬಿಡುಗಡೆ

ವೇಣೂರು ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ: ವಿಜ್ಞಾಪನಾಪತ್ರ ಬಿಡುಗಡೆ

Share

ಬೆಳ್ತಂಗಡಿ : ವೇಣೂರು ಗ್ರಾಮದ ಶಿವಾಜಿ ನಗರದ ಜನತಾ ಕಾಲೋನಿಯ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದ ಜೀರ್ಣೋದ್ಧಾರ ಮತ್ತು ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮವು ಆದಿಶಕ್ತಿ ಕಲಾ ಭವನದಲ್ಲಿ ಪೂಜಾದಿ ವೈದಿಕ ವಿಧಿವಿಧಾನಗಳ ಮೂಲಕ ಇತ್ತೀಚೆಗೆ ನೆರವೇರಿತು.

ಪ್ರಾರಂಭದಲ್ಲಿ ಸರಸ್ವತಿ ಪೂಜೆ , ಶ್ರೀದೇವಿ ಆದಿಶಕ್ತಿ ಅಮ್ಮನವರಿಗೆ ಮಹಾಪೂಜೆಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಖಂಡಿಗ, ತಾ.ಪಂ. ಮಾಜಿ ಸದಸ್ಯ ವಿಜಯ ಗೌಡ, ಗ್ರಾ.ಪಂ. ಸದಸ್ಯ ಲೋಕಯ್ಯ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಗ್ರಾ.ಪಂ.ಸದಸ್ಯ ನೇಮಯ್ಯ ಕುಲಾಲ್, ಎಸ್.ಕೆ.ಡಿ.ಆರ್.ಪಿ. ವೇಣೂರು ವಲಯ ಮೇಲ್ವಿಚಾರಕಿ ಶಾಲಿನಿ, ವಲಯ ಸೇವಾ ಪ್ರತಿನಿಧಿ ಜಯಂತಿ, ಭಜನಾ ಮಂದಿರದ ಸಂಚಾಲಕ ಶಂಕರ.ಎಸ್., ಗೌರವಾಧ್ಯಕ್ಷ ಶಿವಪ್ಪ ಕೊಳಚಲ, ಅಧ್ಯಕ್ಷ ಯೋಗೀಶ್ ಕೆ.ಬಿ. ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ಶಂಕರ.ಎಸ್. ಪ್ರಸ್ತಾವನೆಗೈದರು. ಸದಾಶಿವ.ಡಿ. ಸ್ವಾಗತಿಸಿ ಶೇಖರ್ ವಿ.ಜಿ. ವಂದಿಸಿದರು.

Post Comment

ಟ್ರೆಂಡಿಂಗ್‌

error: Content is protected !!