ಬೆಳ್ತಂಗಡಿ ಜನಸ್ಪಂದನ ಫಲಶ್ರುತಿ: 94ಸಿ ಫಲಾನುಭವಿಗಳಿಗೆ 108 ಹಕ್ಕುಪತ್ರ 54 ನಡವಳಿ ವಿತರಣೆ

ಬೆಳ್ತಂಗಡಿ ಜನಸ್ಪಂದನ ಫಲಶ್ರುತಿ: 94ಸಿ ಫಲಾನುಭವಿಗಳಿಗೆ 108 ಹಕ್ಕುಪತ್ರ 54 ನಡವಳಿ ವಿತರಣೆ

Share
InShot_20260110_123105443-2-1024x1024 ಬೆಳ್ತಂಗಡಿ ಜನಸ್ಪಂದನ ಫಲಶ್ರುತಿ: 94ಸಿ ಫಲಾನುಭವಿಗಳಿಗೆ                              108 ಹಕ್ಕುಪತ್ರ 54 ನಡವಳಿ ವಿತರಣೆ

ಸುಲ್ಕೇರಿಯ ಕೊರಗ ಸಮುದಾಯದ ಮಹಿಳಾ ಫಲಾನುಭವಿಗಳ 94ಸಿ ಚಲನ್ ಪಾವತಿಸಲಿರುವ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ
ಜನರ ಬಳಿ ತಾಲೂಕಾಡಳಿತ ಪರಿಕಲ್ಪನೆಯಲ್ಲಿ 48 ಗ್ರಾ ಪಂ ಮಟ್ಟದಲ್ಲಿ ನಡೆದ ಜನಸ್ಪಂದನ ಸಭೆಗಳ ಫಲಶ್ರುತಿಯಾಗಿ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣಾ ಕಾರ್ಯಕ್ರಮವು ಶನಿವಾರ ನಡೆಯಿತು.

ತಾಲೂಕಿನ 48 ಗ್ರಾಮ ಪಂಚಾಯತ್ ಹಾಗೂ ಒಂದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದ ಜನಸ್ಪಂದನ ಸಭೆಗಳಲ್ಲಿ‌ ಗ್ರಾಮಸ್ಥರು ತಮ್ಮ 94/ಸಿ , ಹಾಗೂ 94 ಸಿಸಿ ನಡವಳಿ ಕಡತಗಳ ವಿಲೇವಾರಿ ವಿಳಂಬ ಮತ್ತಿತರ ಕುಂದು ಕೊರತೆಗಳ ಬಗ್ಗೆ ಶಾಸಕರೊಂದಿಗೆ ಅಳಲು ಹಂಚಿಕೊಂಡಿದ್ದರು.

ಜನಸ್ಪಂದನ ಸಭೆಗಳಲ್ಲಿ ಕೇಳಿ ಬಂದ ಜನರ ಕುಂದು ಕೊರತೆಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರುಸುವಂತೆ ಸೂಚನೆ ನೀಡಿದ್ದರು.
ಜನಸ್ಪಂದನ ಸಭೆಗಳ ಬೆನ್ನಲ್ಲೇ ತಾಲೂಕು‌ ಕಚೇರಿಗೆ ದಿಢೀರ್ ಭೇಟಿ ಟೇಬಕ್ ಟು ಟೇಬಲ್ ಗೆ ಹೋಗಿ ಕಂದಾಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದ್ದ ಶಾಸಕ ಹರೀಶ್ ಪೂಂಜ 108 ಮಂದಿಗೆ ಹಕ್ಕುಪತ್ರ ಹಾಗೂ 54 ಮುಂದಿಗೆ ನಡವಳಿ ವಿತರಿಸಲಾಯಿತು.
ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಕಳೆದ ಮೂರು ತಿಂಗಳಿಂದ ನಿರಂತರವಾಗಿ ತಾಲೂಕಿನ 48 ಗ್ರಾಮಪಂಚಾಯತ್ ನಲ್ಲಿ ಆಯೋಜಿಸಿದ ಜನಸ್ಪಂದನ ಸಭೆಯಲ್ಲಿ ಜನರಿಂದ 94ಸಿ ವಿತರಣೆಗೊಳಿಸಲು ಅಡ್ಡಿಯಾಗಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು ಮುಂದೆ ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳ ತನಿಖೆ ನಡೆಸಲು ಸೂಚಿಸಲಾಗಿತ್ತು.
ಕೆಲ ಕಡತಗಳಲ್ಲಿ ಅರಣ್ಯದ ನಿರಪೇಕ್ಷಣಾ ಪತ್ರ ವಿಳಂಬವಾಗಿದ್ದು ಕೂಡಲೇ ಕಡತ ಸುಗಮಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. 108 ಮುಂದಿಗೆ ಹಕ್ಕು ಪತ್ರ ಹಾಗೂ 54 ಮುಂದಿಗೆ ನಡವಳಿ ನೀಡಲಾಗಿದೆ. ರಾಜ್ಯದಲ್ಲಿಯೇ 32 ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮಪಂಚಾಯತ್ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಪ್ರಥಮವಾಗಿದೆ ಎಂದು ಹೇಳಿದ ಶಾಸಕರು ಕಡತಗಳ ವಿಲೇವಾರಿಗೆ
ಕ್ರಮ ವಹಿಸಿದ ಅಧಿಕಾರಿಗೆ ಅಭಿನಂದನೆ ಸಲ್ಲಿಸಿದರು.

ಸುಲ್ಕೇರಿಯ ಗ್ರಾಮದ ಅಟ್ರಿಂಜೆಯ ನಾಲ್ಕು ಕುಟುಂಬಗಳು ತಾವು ವಾಸ್ತವ್ಯವಿರುವ ಜಾಗಕ್ಕೆ 94ಸಿ ಹಕ್ಕುಪತ್ರ ಪಡೆಯಲು ಅಪೇಕ್ಷಿಸಿದ್ದು ಈ ಸಂದರ್ಭ ಹಾಜರಿದ್ದ ಕೊರಗ ಸಮುದಾಯದ 4 ಮಂದಿ ಮಹಿಳಾ
ಫಲಾನುಭವಿಗಳನ್ನು‌ ವೇದಿಕೆಯ ಮುಂದೆ ಕರೆದ ಶಾಸಕರು “ನೀವು 94ಸಿ ಹಕ್ಕು ಪತ್ರ ಪಡೆಯುವುದಾದರೆ ನಿಮ್ಮ ಚಲನ್ ನಾನು‌ ಪಾವತಿಸುತ್ತೇನೆ ಕೂಡಲೇ ಹಕ್ಕುಪತ್ರ ಕೊಡಿಸುವೆ”. ಎಂದು ಭರವಸೆ ನೀಡಿದರು. ಕೊರಗ ಮಹಿಳೆಯರು‌ ಶಾಸಕರ ಮಾತಿಗೆ ಸಮ್ಮತಿಸಿದರು.

Post Comment

ಟ್ರೆಂಡಿಂಗ್‌

error: Content is protected !!