ನಡ ಮಲೆಯಡ್ಕ ಹಾಟ್ ಮಿಕ್ಸಿಂಗ್ ಪ್ಲಾಂಟ್ ವಿರುದ್ಧ ಜನವರಿ 13ಕ್ಕೆ ‘ಗುಮ್ಮಟೆ ಚಳುವಳಿ’

ನಡ ಮಲೆಯಡ್ಕ ಹಾಟ್ ಮಿಕ್ಸಿಂಗ್ ಪ್ಲಾಂಟ್ ವಿರುದ್ಧ ಜನವರಿ 13ಕ್ಕೆ ‘ಗುಮ್ಮಟೆ ಚಳುವಳಿ’

Share

ಬೆಳ್ತಂಗಡಿ : ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ‌ ಪ್ರದೇಶದಲ್ಲಿ ಸ್ಥಳೀಯ ಪರಿಶಿಷ್ಟ ಪಂಗಡದ ಕುಟುಂಬಗಳ ನೆಲ,ಜಲ ಮತ್ತು ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಹಾಟ್ ಮಿಕ್ಸ್ ಪ್ಲಾಂಟ್ ರದ್ದುಗೊಳಿಸಲು ಆಗ್ರಹಿಸಿ‌ ಮರಾಠಿ (ಪರಿಶಿಷ್ಟ ಪಂಗಡ) ನಾಯ್ಕ ಸಮುದಾಯದ ಕುಟುಂಬಗಳು ತಮ್ಮ ಸಾಂಪ್ರದಾಯಿಕ ಅಸ್ಮಿತೆಯಾದ ಗುಮ್ಮಟೆ ಬಡಿತ ಕುಣಿತದ ಮೂಲಕ ‌ ‘ಗುಮ್ಮಟೆ ಚಳುವಳಿ’ ಎಂಬ ವಿಶಿಷ್ಟ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿ
ನಡ ಗ್ರಾಮದ ಮಲೆಯಡ್ಕ, ಇಚ್ಚಾವು, ಕೋಡಿಜಾಲು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಬದುಕಿನೊಂದಿಗೆ ಹಾಟ್ ಮಿಕ್ಸಿಂಗ್ ಪ್ಲಾಂಟ್ ಕಂಪೆನಿ ಚೆಲ್ಲಾಟವಾಡುತ್ತಿದೆ. ಉಜಿರೆ-ಪಡ್ವೆಟ್ಟು- ಸುರ್ಯ ರಸ್ತೆ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಮಿಕ್ಸಿಂಗ್ ಘಟಕದ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಖಾಸಗಿ ಕಂಪೆನಿಯ ಹಾಟ್ ಮಿಕ್ಸ್ ಪ್ಲಾಂಟ್ ದೌರ್ಜನ್ಯ ಖಂಡಿಸಿ, ಹಾಟ್ ಮಿಕ್ಸ್ ಪ್ಲಾಂಟ್ ರದ್ದುಗೊಳಿಸಲು ಆಗ್ರಹಿಸಿ ನಡ ಗ್ರಾಮಪಂಚಾಯತ್ ಕಚೇರಿಯ ಎದುರು ಜನವರಿ 13ನೇ ಮಂಗಳವಾರದಂದು ಗುಮ್ಮಟೆ ಚಳುವಳಿ ನಡೆಯಲಿದೆ.
“ಮಲೆಯಡ್ಕ ಉಳಿಸಿ, ಬುಡಕಟ್ಟು ರಕ್ಷಿಸಿ” ಎಂಬ ಪ್ರಮುಖ
ಘೋಷಣೆಯೊಂದಿಗೆ ಗುಮ್ಮಟೆ ಚಳುವಳಿ ನಡೆಯಲಿದೆ.
ನಡ ಗ್ರಾಮದ ಮಲೆಯಡ್ಕ ಸುತ್ತಮುತ್ತಲಿನ ಹಲವಾರು ಬಡ ಸಂತ್ರಸ್ತ ಕುಟುಂಬಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ಲಾಂಟ್ ವಿರುದ್ಧ ಧ್ವನಿ ಎತ್ತುವ ಮೂಲಕ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯಲಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!