ಗೇರುಕಟ್ಟೆ ; ಬೆಳಗ್ಗಿನ ಜಾವಧನುಪೂಜೆಗೆ ಹೋದ ಬಾಲಕ ನಾಪತ್ತೆ: ಸ್ಥಳೀಯರಲ್ಲಿ ಆತಂಕ

ಬೆಳ್ತಂಗಡಿ : ಬೆಳಗ್ಗಿನ ಜಾವ ಧನುಪೂಜೆಗೆಂದು ಮನೆಯಿಂದ ಸ್ಥಳೀಯ ದೇವಸ್ಥಾನಕ್ಕೆ ಬಾಲಕನೋರ್ವ ದೇವಸ್ಥಾನಕ್ಕೆ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿರುವ ಘಟನೆ ಗೇರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಬೆಲಕಿಗೆ ಬಂದಿದೆ.
ಗೇರುಕಟ್ಟೆ ಪೇಟೆ ಬಳಿಯ ನಿವಾಸಿಯಾಗಿರುವ ಒಂಭತ್ತನೇ ತರಗತಿಯ ಬಾಲಕ ದಿನನಿತ್ಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ಪರಿಚಯದವರೊಂದಿಗೆ ಹೋಗುತ್ತಿದ್ದು ಇಂದು ಬೆಳಿಗ್ಗೆ 4.45ರಿಂದ 5 ಗಂಟೆಯ ಹೊತ್ತಿಗೆ ಮನೆಯಿಂದ ಹೊರಟಿದ್ದು ಗೇರುಕಟ್ಟೆ ಪೇಟೆಯ ಮೂಲಕ ಹಾದು ಹೋಗದೆ ನಾಪತ್ತೆಯಾಗಿದ್ದಾನೆ.
ದಿನ ನಿತ್ಯ ಜೊತೆಗೆ ಹೋಗುವವರು ಮನೆಯಲ್ಲಿ ವಿಚಾರಿಸಿದಾಗ ಈತ ನಾಪತ್ತೆಯಾಗಿರಬೇಕೆಂಬ ಸಂಶಯ ವ್ಯಕ್ತವಾಗಿದೆ.
ಮನೆಯಿಂದ ಗೇರುಕಟ್ಟೆ ಪೇಟೆಗೆ ಮುಖ್ಯ ರಸ್ತೆಗೆ ತಕುಪುವ ಮೊದಲೇ ಬಾಲಕ ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ.
ಬಾಲಕ ಹಾದು ಹೋಗುವ ರಸ್ತೆಯ ಸಮೀಪ ಕೆರೆಯೊಂದಿದ್ದು
ರಕ್ತ ಕಳೆ ಪತ್ತೆಯಾಗುದ್ದು ಈ ಭಾಗದಲ್ಲಿ ಆಗಾಗ ಚಿರತೆ ಓಡಾಟ ಇರುವುದರಿಂದ ರಸ್ತೆ ಬದಿಯಲ್ಲಿ ರಕ್ತದ ಕುರುಹು ಪತ್ತೆಯಾಗಿರುವುದರಿಂದ ಮನೆಯವರಲ್ಲಿ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿದೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುರುವ ಸ್ಥಳೀಯರು ಹುಟುಕಾಟದಲ್ಲಿ ತೊಡಗಿದ್ದಾರೆ. ಇದೀಗ ಈ ಭಾಗದಲ್ಲಿ ವ್ಯಾಪಕ ಕುತೂಹಲ , ಆತಂಕ ಮೂಡಿದೆ.















Post Comment