ಗೇರುಕಟ್ಟೆ ; ಧನುಪೂಜೆಗೆ ಹೋದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ಗೇರುಕಟ್ಟೆ ; ಧನುಪೂಜೆಗೆ ಹೋದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

Share

ಬೆಳ್ತಂಗಡಿ : ಬೆಳಗ್ಗಿನ‌ ಜಾವ ಧನುಪೂಜೆಗೆಂದು ಮನೆಯಿಂದ ಸ್ಥಳೀಯ ದೇವಸ್ಥಾನಕ್ಕೆ ಹೊರಟು ಹೋಗಿದ್ದ ಬಾಲಕನೋರ್ವ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿದ್ದು ಇದೀಗ ಈತನ ಮೃತದೇಹ ಸ್ಥಳೀಯ ಕೆರೆಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಸಂಬೋಳ್ಯ ಎಂಬಲ್ಲಿನ ನಿವಾಸಿ‌ ಸುಬ್ರಹ್ಮಣ್ಯ ನಾಯಕ್ ಎಂಬವರ ಪುತ್ರ 9ನೇ ತರಗತಿ ವಿದ್ಯಾರ್ಥಿ ಸುಮಂತ್ ನಾಯಕ್ (15 ) ಎಂಬಾತನೇ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈತ ಬಾಲಕ ದಿನನಿತ್ಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ಪರಿಚಯದವರೊಂದಿಗೆ ಹೋಗುತ್ತಿದ್ದು ಇಂದು ಬೆಳಿಗ್ಗೆ 4.45ರಿಂದ 5 ಗಂಟೆಯ ಹೊತ್ತಿಗೆ ಮನೆಯಿಂದ ಹೊರಟಿದ್ದು ಗೇರುಕಟ್ಟೆ ಪೇಟೆಯ ಮೂಲಕ ಹಾದು ಹೋಗದೆ ನಾಪತ್ತೆಯಾಗಿದ್ದ.

ದಿನ ನಿತ್ಯ ಜೊತೆಗೆ ಹೋಗುವವರು ಮನೆಯಲ್ಲಿ ವಿಚಾರಿಸಿದಾಗ ಸುಮಂತ್ ನಾಪತ್ತೆಯಾಗಿರಬೇಕೆಂಬ ಸಂಶಯ ವ್ಯಕ್ತವಾಗಿತ್ತು.
ಮನೆಯಿಂದ ಗೇರುಕಟ್ಟೆ ಪೇಟೆಗೆ ಮುಖ್ಯ ರಸ್ತೆಗೆ ತಲುಪುವ ಮೊದಲೇ ಬಾಲಕ ನಾಪತ್ತೆಯಾಗಿದ್ದ ಈತ ಹಾದು ಹೋಗುವ ರಸ್ತೆಯ ಸಮೀಪ ಕೆರೆಯೊಂದಿದ್ದು ರಕ್ತ ಕಳೆ ಪತ್ತೆಯಾಗಿತ್ತು.
ಈ ಭಾಗದಲ್ಲಿ ಆಗಾಗ ಚಿರತೆ ಓಡಾಟ ಇರುವುದರಿಂದ ರಸ್ತೆ ಬದಿಯಲ್ಲಿ ರಕ್ತದ ಕುರುಹು ಪತ್ತೆಯಾಗಿರುವುದರಿಂದ ಮನೆಯವರಲ್ಲಿ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿತ್ತು.
ಬಾಲಕ ನಾಪತ್ತೆ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಸಂಬಂಧಪಟ್ಟ ಅಗ್ನಿಶಾಮಕ ಠಾಣೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಹುಟುಕಾಟ ನಡೆಸಿದ್ದು ಶೋಧ ನಡೆಸಿದಾಗ ಇದೀಗ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಶೋಧ ಕಾರ್ಯಾಚರಣೆ ಸಂದರ್ಭ ಅಗ್ನಿಶಾಮಕ, ಅರಣ್ಯ ಇಲಾಖಾಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲಿದ್ದು ಭಾಗಿಯಾದರು. ಬಾಲಕ ನಾಪತ್ತೆ ಪ್ರಕರಣವು ಮೃತದೇಹ ಪತ್ತೆಯಾಗುವ ಮೂಲಕ ತಿರುವು ಪಡೆದುಕೊಂಡು ಇನ್ನಷ್ಟು ಕುತೂಹಲ ಮೂಡಿಸಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ಹರೀಶ್ ಪೂಂಜ ಸ್ಥಳಕ್ಕಾಗಮಿಸಿ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!