ರಾಜಕೇಸರಿ ಸೇವಾ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರಿಗೆ 2026ನೇ ಸಾಲಿನ ‘ಸ್ಟಾರ್ ಆಫ್ ಕರ್ನಾಟಕ’ ರಾಜ್ಯ ಪ್ರಶಸ್ತಿ

ರಾಜಕೇಸರಿ ಸೇವಾ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರಿಗೆ 2026ನೇ ಸಾಲಿನ ‘ಸ್ಟಾರ್ ಆಫ್ ಕರ್ನಾಟಕ’ ರಾಜ್ಯ ಪ್ರಶಸ್ತಿ

Share

ಬೆಳ್ತಂಗಡಿ : ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರು 2026ನೇ ಸಾಲಿನ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೋಶಿಯಲ್ ವರ್ಕರ್ಸ್ ಅಸೋಸಿಯನ್, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಬೆಂಗಳೂರು ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ (ರಿ) ಇವರ ಸಹಾಯದಲ್ಲಿ ಕುಂದಾಪುರದ ಸೀತಾರಾಮ್ ಶೆಟ್ಟಿ
ಕಲಾಭವನದಲ್ಲಿ ಫೆಬ್ರವರಿ 8-2026ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಜಕೇಸರಿ ದೀಪಕ್ ಜಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಸಂಕಷ್ಟದಿಂದ ನೊಂದು ಬರುವ ಕಡು ಬಡವರ ಕುಂದುಕೊರತೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತವಾಗಿ ಆರಿಸಿ ಸದಾ ಕೈಲಾದ ಸೇವೆಯ ಮೂಲಕ ಸ್ಪಂದಿಸುವ ಚಿರಪರಿಚಿತ ನೊಂದವರ ಆಪ್ತ ಸಂಸ್ಥೆ ರಾಜಕೇಸರಿ ಟ್ರಸ್ಟ್.

ಸದಾ ಕಡುಬಡವರ ಚಿಂತನೆಯಲ್ಲಿ ದೀಪಕ್ ಜಿ ತಾನು ಶ್ರೀಮಂತನಲ್ಲದಿದ್ದರೂ ತಾನು ದುಡಿದ ಸಂಬಳದಲ್ಲಿ ಶೇಕಡಾ 20%ರಷ್ಟು ಕಡುಬಡವರಿಗೆ ಸಹಾಯದ ಮೂಲಕ ತನ್ನ ಜೊತೆ ಸಮಾನಮನಸ್ಕ ಯುವಕರನ್ನು ಸೇರಿಸಿಕೊಂಡು ಯುವಕರ ತಿಂಗಳ ಸಂಬಳದಲ್ಲಿ ಕಿಂಚಿತ್ತು ಸಹಾಯದ ಮೂಲಕ ಅರ್ಹರಿಗೆ‌ ಸ್ಪಂದಿಸುತ್ತಾ ಇಡೀ ರಾಜ್ಯಕ್ಕೆ ಮಾದರಿಯಾದ ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ ಮುಂದಾಳತ್ವವನ್ನು ವಹಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!