ನಡ ಕೃಷಿಕನ ಮೇಲೆ ಚಿರತೆ ದಾಳಿ ಪ್ರಕರಣ

ನಡ ಕೃಷಿಕನ ಮೇಲೆ ಚಿರತೆ ದಾಳಿ ಪ್ರಕರಣ

Share

ಬೆಳ್ತಂಗಡಿ : ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಎಂಬವವರು ಜ.16 ರಂದು ಬೆಳಿಗ್ಗೆ 8:15 ಗಂಟೆಗೆ ಮನೆಯ ಅಂಗಳದ ಬಳಿಯ ತೋಟದಲ್ಲಿರುವಾಗ ವೇಳೆ ಏಕಾಏಕಿ ಚಿರತೆಯೊಂದು ದಾಳಿ ನಡೆಸಿದೆ.ತಕ್ಷಣ ಜೀವರಕ್ಷಣೆಗಾಗಿ ಹತ್ತಿರದ ಅಡಿಕೆ ಮರ ಏರಿದ್ದು. ಈ ವೇಳೆ ಮಂಜಪ್ಪ ನಾಯ್ಕ ಅವರ ಕಾಲಿಗೆ ಗಂಭೀರ ಗಾಯಗಳಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಬಳಿಕ ಮಂಜಪ್ಪ ನಾಯ್ಕ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಡಕೆ ಮರದಲ್ಲಿ ಚಿರತೆ ಪರಚಿರುವ ಹಲವು ಉಗುರಿನ ಕುರುಹುಗಳು ಪತ್ತೆಯಾಗಿದೆ. ಚಿರತೆಯ ಉಗುರಿನ ಕುರುಹು ಎಂಬುದನ್ನು ಖಚಿತ ಪಡಿಸಲು ತಜ್ಞರಿಂದ ವರದಿ ಪಡೆಯಲ್ಲಿದ್ದಾರೆ. ‌ ಈ ಬಗ್ಗೆ ಸ್ಥಳೀಯರ ತಿಳಿಸಿದ ಜಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗುವುದು ಅದಲ್ಲದೆ ಕಾಡುಪ್ರಾಣಿಗಳ ಬಗ್ಗೆ ಮಾಹಿತಿ ಸಿಕ್ಕಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಆರ್.ಎಫ್.ಒ ತ್ಯಾಗರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಜೊತೆಯಲ್ಲಿ ಡಿ.ಆರ್.ಎಫ್.ಒ ರಾಕೇಶ್,ರಾಘವೇಂದ್ರ, ಸಂದೀಪ್, ಕಿರಣ್ ಪಾಟೀಲ್, ಗಸ್ತು ಅರಣ್ಯ ಪಾಲಕ ಪ್ರತಾಪ್‌ ಕುಮಾರ್, ಪರಶುರಾಮ್, ಚಾಲಕ ದಿವಕರ್ ಭಾಗಿಯಾಗಿದ್ದರು.

Post Comment

ಟ್ರೆಂಡಿಂಗ್‌

error: Content is protected !!