ಕಾಜೂರು ಉರೂಸ್ ಸಂಭ್ರಮ: ದಿನನಿತ್ಯ ಧಾರ್ಮಿಕ ವೈವಿಧ್ಯ

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸಮನ್ವಯ ಕೇಂದ್ರವೆನಿಸಿಕೊಂಡಿರುವ ಕಾಜೂರು ದರ್ಗಾ ಶರೀಫ್
ಜ.16ರಿಂದ ಉರೂಸ್ ಸಂಭ್ರಮದಲ್ಲಿದ್ದು ಪ್ರತಿದಿನ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿವೆ.
ಜ16ರಂದು ಉಪನ್ಯಾಸ ಮಾಲಿಕೆಯನ್ನು ಸಯ್ಯಿದ್ ಕಾಜೂರು ತಂಙಳ್ ಶುಭಾರಂಭಗೊಳಿಸಿದರೆ, ಜ.17ರಂದು ಸಯ್ಯಿದ್ ಕಿಲ್ಲೂರು ತಂಙಳ್ ಉಪನ್ಯಾಸವಿತ್ತರು.
ಜ.18ರಂದು ಲೆತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಿತು. ಜ.19.ರಂದು ದಾರುಸ್ಸಲಾಂ ಬೆಳ್ತಂಗಡಿಯ ಚೇರ್ಮೆನ್ ಸಯ್ಯಿದ್ ಜಿಫ್ರಿ ತಂಙಳ್ ದುಆ ನೇತೃತ್ವ ವಹಿಸಿ, ವಾಗ್ಮಿ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಉಪನ್ಯಾಸ ನೀಡಿ ಜ.20 ರಂದು ಜಲಾಲಿ ಉಸ್ತಾದ್ ಉಪನ್ಯಾಸ ನೆರವೇರಿಸಿ, ಜ.21ರಂದು ಪೆರ್ಮುಗಂ ಅಶ್ರಫ್ ಉಸ್ತಾದ್ ನೇತೃತ್ವದಲ್ಲಿ ಇಸ್ಲಾಮಿಕ್ ಕಥಾಪ್ರಸಂಗ ನಡೆಸಿಕೊಡಲಿದ್ದಾರೆ.
ದಿಕ್ರ್ ಮಜ್ಲಿಸ್, ಪದವಿ ಪ್ರದಾನ, ಉರೂಸ್ ಸಮಾರೋಪ ಉರೂಸ್ ಉಳಿದ ಕಾರ್ಯಕ್ರಮಗಳ ಪೈಕಿ ಇನ್ನು 4 ದಿನಗಳು ಮಾತ್ರ ಬಾಕಿಯಿದ್ದು ಜ.22ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ “ಬೃಹತ್ ದ್ಸಿಕ್ರ್ ಮಜ್ಲಿಸ್” ಬಾಯಾರ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ಡಾ. ಕಾವಳಕಟ್ಟೆ ಹಝ್ರತ್ ಸಹಿತ ಉಲೆಮಾ ಪ್ರಮುಖರು ಭಾಗವಹಿಸಲಿದ್ದಾರೆ.
ಜ.23 ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಹಾಗೂ ಜ.25ರಂದು ಬೆಳಿಗ್ಗೆ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ ಉರೂಸ್ ಸಮಾರಂಭ ನೆರವೇರಲಿದೆ. ಸಂಜೆ ಸಮಾರೋಪ ಸಮಾರಂಭಕ್ಕೆ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ವಕ್ಫ್ ಸಚಿವ ಬಿ.ಝೆಡ್ ಝಮೀರ್ ಅಹಮ್ಮದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೌಲಾನಾ ಶಾಫಿ ಸಅದಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸಂಸದ ಕ್ಯಾ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮಾಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ. ಕೊನೆಯ ದಿನ ಅನ್ನದಾನ ನಡೆಯಲಿದೆ.















Post Comment