ಲಾಯ್ಲಾದಲ್ಲಿ‌ ಹಾಡುಹಗಲೇ ಸರಕಾರಿ ಬಾವಿ ‘ಕಳವು’.!!

ಲಾಯ್ಲಾದಲ್ಲಿ‌ ಹಾಡುಹಗಲೇ ಸರಕಾರಿ ಬಾವಿ ‘ಕಳವು’.!!

Share

ಬೆಳ್ತಂಗಡಿ : ಸರಕಾರಿ ಬಾವಿಯನ್ನು ಸ್ಥಳೀಯ ಖಾಸಗಿ ನಿವಾಸಿ ಸರಕಾರಿ ಜಾಗವನ್ನು ಸಮೇತ ಒತ್ತುವರಿ ಮಾಡಿಕೊಂಡಿದ್ದರೂ ಗ್ರಾಪಂ ಆಡಳಿತ ಮಾತ್ರ ಕಣ್ಣಿದ್ದೂ ಕುರುಡಾಗಿ ಮೌನವಹಿಸಿ ದಿವ್ಯ ನಿರ್ಲಕ್ಷ್ಯವಹಿರುವ ಬಗ್ಗೆ ಗ್ರಾಮಸ್ಥರೊಬ್ಬರು ಗ್ರಾಪಂ ಆಡಳಿತ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ಬಳಿಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಸಾರ್ವಜನಿಕರಿಗಾಗಿ ಗ್ರಾಪಂ ವತಿಯಿಂದ ಕುಡಿಯುವ ನೀರಿನ ಬಾವಿಯನ್ನು ಸರಕಾರಿ ಜಾಗದಲ್ಲಿ ಮಾಡಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅದನ್ನು ಒತ್ತುವರಿ ಮಾಡಿಕೊಂಡ ಬೇಲಿಯನ್ನು ಹಾಕಿ ನೀರನ್ನು ಯಾರು ಕುಡಿಯದಂತೆ ನೀರಿನ ಬಾವಿಯೊಳಗೆ ಮಣ್ಣು ಮತ್ತು ಕಸವನ್ನು ಹಾಕಿ ಉಪಯೋಗಿಸದಂತೆ ಮಾಡಿದ್ದಾರೆ.
ಈ ಬಾವಿಯ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇದರ ಬಗ್ಗೆ ಕೂಲಂಕುಷ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅದಲ್ಲದೆ ಈ ಬಾವಿಯನ್ನು ಕಲುಷಿತ ಮಾಡಿದವರಿಂದಲ್ಲೇ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕೂಲ ಮಾಡಿಕೊಂಡಬೇಕಾಗಿ ಸ್ಥಳೀಯಯ ಅನ್ಸರ್ ಬಿ ಎಂಬವರು ದಕ ಜಿಲ್ಲಾಧಿಕಾರಿ, ತಹಶೀಲ್ದಾರ್, ಪಂ.ಅಭಿವೃದ್ಧಿ ಅಧಿಕಾರಿ ಮುಂತಾದವರಿಗೆ ದೂರು ಅರ್ಜಿ ಸಲ್ಲಿಸಿದ್ದು ಸ್ಥಳೀಯ ನಿವಾಸಿಗಳಿಗೆ
ಕುಡಿಯುವ ನೀರಿಗಾಗಿ ಅತಿಕ್ರಮಿತ ಬಾವಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!