ವೇಣೂರು ; ಒಬ್ಬಂಟಿಯಾಗಿ ವಾಸವಿದ್ದ ವೃದ್ಧ ನಾಪತ್ತೆ

ಬೆಳ್ತಂಗಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊಕ್ರಾಡಿ ಎಂಬಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ರಾಘು ಶೆಟ್ಟಿ ಅನ್ನೋಜಿ (70) ಎಂಬವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಔಷಧಿ ಪಡೆಯುತ್ತಿದ್ದು ಕಳೆದ ಒಂದೂವರೆ ವರ್ಷಗಳಿಂದ ಕೊಕ್ರಾಡಿಯ ಸಂಬಂಧಿಕರ ಮನೆಯ ಸಮೀಪ ಪ್ರತ್ಯೇಕವಾಗಿ ಒಬ್ಬಂಟಿಯಾಗಿ ವಾಸವಾಗಿದ್ದರು.
ಜ.18 ರಂದು ಸಂಜೆ 3 ಗಂಟೆಗೆ ಯಾರು ಇಲ್ಲದ ವೇಳೆಗೆ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಸ್ಥಳೀಯವಾಗಿ ಹುಡುಕಾಟ ನಡೆಸಿದರೂ ಈತನಕ ಪತ್ತೆಯಾಗದ ಕಾರಣ ವೇಣೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ರಘು ಶೆಟ್ಟಿ ಅವರ ಮಗ ಹೊಸಂಗಡಿ ಗ್ರಾಮದ ಕುರ್ಲೊಟ್ಟು ನಿವಾಸಿ ಅಶೋಕ್ ಶೆಟ್ಟಿ ಜ.2 ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ವೃದ್ಧ ರಾಘು ಶೆಟ್ಟಿ ಯಾನೆ ಅನ್ನೋಜಿ ಅವರ ಬಗ್ಗೆ ಮಾಹಿತಿ ಸಿಕ್ಕಿದ್ರೆ ವೇಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.














Post Comment