ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರೋಚಕ ತಿರುವು! ‘ಕಿಡ್ನ್ಯಾಪ್ ಯತ್ನ-ಚೂರಿ ಇರಿತ’ ಪ್ರಕರಣವೇ ಕಟ್ಟು ಕಥೆ?

ಕಾಲೇಜಿಗೆ ಹೋಗಲು ಇಷ್ಟವಿಲ್ಲದೆ ಬ್ಲೇಡ್ ನಿಂದ ಗೀರಿಕೊಂಡು
ಕಥೆ ಕಟ್ಟಿದ ‘ಡ್ರಾಮಾ’ಜ್ಯೂನಿಯರ್?
ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಮುಸುಕುಧಾರಿಗಳು ಕಿಡ್ನ್ಯಾಪ್ ಮಾಡಲು ಪ್ರಯತ್ನಿಸಿ ಚೂರಿಯಿಂದ ಇರಿದು ಪರಾರಿಯಾಗಿದ್ದರೆನ್ನಲಾದ ಪ್ರಕರಣ ತಿರುವು ಪಡೆದುಕೊಂಡಿದ್ದು ಇಡೀ ಪ್ರಕರಣ ಕಾಲೇಜಿಗೆ ಹೋಗಲು ಇಷ್ಟವಿಲ್ಲದೆ ವಿದ್ಯಾರ್ಥಿನಿಯೇ ಹೆಣೆದ ಕಟ್ಟು ಕಥೆ ಎಂಬ ಸ್ಫೋಟಕ ಸಂಗತಿ ಇದೀಗ ಬಯಲಾಗಿದೆ.
ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ನೇ ಸೋಮವಾರ ಬೆಳಗ್ಗೆ ಸಮಯ ಸುಮಾರು 8:30ಕ್ಕೆ ಎಂದಿನಂತೆ ಸ್ಕೂಟರ್ ನಲ್ಲಿ
ಕಾಲೇಜಿಗೆ ಹೋಗುತ್ತಿದ್ದ 16 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ದಾರಿ ಮಧ್ಯೆ ಓಮಿನಿ ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು
ದಾಳಿ ನಡೆಸಿ ಅಪಹರಿಸಲು ಯತ್ನಿಸಿ ಚೂರಿಯಲ್ಲಿ ಕೈಗೆ ಇರಿದು ಪರಾರಿಯಾಗಿದ್ದರು, ಎಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.
ಶಾಸಕ ಹರೀಶ್ ಪೂಂಜ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ ಬಳಿಕ ದ.ಕ. ಪೊಲೀಸ್
ವರಿಷ್ಠಾಧಿಕಾರಿಕಾರಿಗಳನ್ನು ಸಂಪರ್ಕಿಸಿ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿದ್ದರು.
ಬೆಳ್ತಂಗಡಿ ಪೊಲೀಸರು ಮುಸುಕುಧಾರಿಗಳು ಹಾದು ಹೋದರೆನ್ನಲಾದ ರಸ್ತೆಯುದ್ದಕ್ಕೂ ಸುತ್ತಾಡಿ ಹಲವರನ್ನು ವಿಚಾರಿಸಿದ್ದಲ್ಲದೆ ಹಲವು ಮನೆ, ಅಂಗಡಿಗಳನ್ನು ಸಂಪರ್ಕಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಾಗಿ ಹುಡುಕಾಟ ನಡೆಸಿದ್ದರು. ಪೊಲೀಸರು
ಕಾರ್ಯಾಚರಣೆ ನಡೆಸಿದಾಗ ಯಾವುದೇ ಓಮಿನಿ ಕಾರು ಹಾದು ಹೋಗಿರುವುದು ಪತ್ತೆಯಾಗಿರಲಿಲ್ಲ. ಇನ್ನೊಂದೆಡೆ ಬಾಲಕಿಯನ್ನು ಹೆತ್ತವರು ಮತ್ತು ಕುಟುಂಬದ ಆತ್ಮೀಯರು ಆಪ್ತವಾಗಿ ಮತ್ತೆ ಮತಗತೆ ವಿಚಾರಿಸಿದಾಗ ತಾನೇ ಮಾಡಿಕೊಂಡ ಗಾಯ, ಯಾರೂ ಅಪಹರಿಸಲು ಬಂದಿಲ್ಲ ಎಂದು ತಿಳಿಸಿದ್ದು ಇಡೀ ಅಪಹರಣ ಪ್ರಕರಣವೇ ‘ಡ್ರಾಮಾ’ ಎಂಬ ಸ್ಫೋಟಕ ಸಂಗತಿ ಬಯಲಾಗಿದ್ದು
ಬೆಳ್ತಂಗಡಿ ಪೊಲೀಸರು ಒಂದೇ ದಿನದಲ್ಲಿ ಕಿಡ್ನ್ಯಾಪ್ ಯತ್ನ
ಚೂರಿ ಇರಿತ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.
ಕಾಲೇಜ್ ಗೆ ಹೋಗಲು ಇಷ್ಟವಿಲ್ಲದ ಕಾರಣದಿಂದ ತಾನೇ ಬ್ಲೇಡ್ ನಿಂದ ಗೀರಿಕೊಂಡು ಡ್ರಾಮಾ ಮಾಡಿಕೊಂಡಿದ್ದಾಳೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.













Post Comment