ಬಳಂಜ; ಕುರಿಗಳಂತೆ ಪಿಕಪ್-ಟಿಪ್ಪರ್ ಹತ್ತಿಸಿ ಶಾಲಾ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದ ಶಿಕ್ಷಕ!

ಬಳಂಜ; ಕುರಿಗಳಂತೆ ಪಿಕಪ್-ಟಿಪ್ಪರ್ ಹತ್ತಿಸಿ ಶಾಲಾ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದ ಶಿಕ್ಷಕ!

Share

ಬೆಳ್ತಂಗಡಿ : ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಪಾಠ ಹೇಳಬೇಕಾದ ಶಿಕ್ಷಕರು ಮಕ್ಕಳನ್ನು ತೆರೆದ ಪಿಕಪ್ ವಾಹನದಲ್ಲಿ ಕಾನೂನು ಬಾಹಿರವಾಗಿ ವಿಹಾರಕ್ಕೆ ಕರೆದೊಯ್ದ ಘಟನೆ ಬಳಂಜ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಹಾರಕ್ಕೆ ಕರೆದೊಯ್ಯಲು ನಿರ್ಧರಿಸಲಾಗುತ್ತು.
ನಿರ್ಧರಿಸಿದಂತೆ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ಯಲು ಒಂದು ಸುರಕ್ಷಿತವಾದ ವಾಹನವನ್ನು ಗೊತ್ತು ಮಾಡುವ ಬದಲಾಗಿ ತೆರೆದ ಪಿಕಪ್ ವಾಹನದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿಯಾಗಿ ಕರೆದೊಯ್ದಿದ್ದು ಶಿಕ್ಷಕರ ಬೇಜವಾಬ್ದಾರಿ ಮತ್ತು ಅವಿವೇಕಿತನಕ್ಕೆ ಸಾಕ್ಷಿಯಾಗಿದೆ. ಮನರಂಜನೆ, ವಿಹಾರಗಳೆಂದರೆ ಸಹಜವಾಗಿ‌ ಸಂಭ್ರಮಿಸುವ ಮುಗ್ಧ ಮಕ್ಕಳನ್ನು ಟಿಪ್ಪರ್ , ಪಿಕಪ್ ನಲ್ಲಿ ವಿಹಾಕ್ಕೆ ಕರೆದುಕೊಂಡು ಹೊದ ಶಿಕ್ಷಕರ ಬೇಜವಾಬ್ದಾರಿಯ ನಡೆಯ ಬಗ್ಗೆ ಪೋಷಕರಿಂದ , ಸಾರ್ವಜನಿಕರಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಘಟನೆ ಬಗ್ಗೆ ಆಕ್ರೋಶಗೊಂಡ ಪೋಷಕರು ಈಗಾಗಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೂಲಿಕಾರ್ಮಿಕರನ್ನು ಪಿಕಪ್ , ಟಿಪ್ಪರ್ ಗಳಲ್ಲಿ ಕೆಲಸಕ್ಕೆ ಕರೆದೊಯ್ದ ಪ್ರಸಂಗಗಳಿಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವ ಪೊಲೀಸರು, ಬಳಂಜ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪಿಕಪ್, ಟಿಪ್ಪರ್ ಗಳಲ್ಲಿ ಪುಟಾಣಿ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದ ಘಟನೆಗೆ ಕಾರಣಕರ್ತರಾದ ಶಿಕ್ಷಕರ ವಿರುದ್ಧ ಪೊಲೀಸರು, ಆರ್ ಟಿ ಒ ಅಥವಾ ಶಿಕ್ಷಣ ಇಲಾಖೆ ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ.

Previous post

ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರೋಚಕ ತಿರುವು! ‘ಕಿಡ್ನ್ಯಾಪ್ ಯತ್ನ-ಚೂರಿ ಇರಿತ’ ಪ್ರಕರಣವೇ ಕಟ್ಟು ಕಥೆ?

Next post

ಕಾರ್ಮಿಕಪರ ಕಾನೂನುಗಳ ರದ್ದತಿ, ರೈತ ವಿರೋಧಿ ಬೀಜ ಮಸೂದೆ ಜಾರಿ, ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕರ ಮುಷ್ಕರ – ರಸ್ತೆ ತಡೆ

Post Comment

ಟ್ರೆಂಡಿಂಗ್‌

error: Content is protected !!