ಬಳಂಜ; ಪಿಕಪ್ – ಟಿಪ್ಪರ್ ನಲ್ಲಿ ಶಾಲಾ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದ ಪ್ರಕರಣ : ಹೆಚ್.ಎಂ. ಸಸ್ಪೆಂಡ್ !

‘News ಕೌಂಟರ್’ ವರದಿ ಇಂಪ್ಯಾಕ್ಟ್!
ಬೆಳ್ತಂಗಡಿ : ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಪಾಠ ಹೇಳಬೇಕಾದ ಶಿಕ್ಷಕರು ಮಕ್ಕಳನ್ನು ತೆರೆದ ಪಿಕಪ್ ವಾಹನದಲ್ಲಿ ಕಾನೂನು ಬಾಹಿರವಾಗಿ ವಿಹಾರಕ್ಕೆ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ಗುರುವಾರ ಶಿಕ್ಷಣ ಇಲಾಖೆ ತನಿಖೆ ನಡೆಸಿದ್ದು ವಿಚಾರಣಾ ವರದಿಯ ಆಧಾರದಲ್ಲಿ ಬಳಿಕ ಡಿಡಿಪಿಐ ಅವರು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸ್ಥಳೀಯ ಖಾಸಗಿ ಫಾರ್ಮ್ಸ್ ಗೆ ಸ್ಟಡಿ ಪಿಕ್ ನಿಕ್ ಕರೆದೊಯ್ಯಲು ನಿರ್ಧರಿಸಲಾಗಿತ್ತು.
ನಿರ್ಧರಿಸಿದಂತೆ ಮಕ್ಕಳನ್ನು ಅಧ್ಯಯನ ವಿಹಾರಕ್ಕೆ ಕರೆದೊಯ್ಯಲು ಒಂದು ಸುರಕ್ಷಿತವಾದ ವಾಹನವನ್ನು ಗೊತ್ತು ಮಾಡುವ ಬದಲಾಗಿ ತೆರೆದ ಪಿಕಪ್ (KA-21-A-8776) ಮತ್ತು ಟಿಪ್ಪರ್ (KA-70-2596) ವಾಹನಗಳನ್ನು ಬಾಡಿಗೆ ನೆಲೆಯಲ್ಲಿ ಮಾಡಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿಯಾಗಿ ಮಕ್ಕಳನ್ನು ಕರೆದೊಯ್ದಿದ್ದು ಫೊಟೋ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸ್ಥಳೀಯವಾಗಿ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಕಾರಣವಾಗಿತ್ತು.

ಈ ಬಗ್ಗೆ ‘News ಕೌಂಟರ್’ ಮೊದಲಾಗಿ ವರದಿ ಮಾಡಿತ್ತು. ಮುಗ್ಧ ಪುಟಾಣಿ ಮಕ್ಕಳನ್ನು ಟಿಪ್ಪರ್ , ಪಿಕಪ್ ನಲ್ಲಿ ವಿಹಾಕ್ಕೆ ಕರೆದುಕೊಂಡು ಹೋದ ಬಗ್ಗೆ ಪೋಷಕರಿಂದ ಸಾರ್ವಜನಿಕರಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಆಕ್ರೋಶಗೊಂಡ ಪೋಷಕರು ಈಗಾಗಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು.
ಬಳಂಜ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪಿಕಪ್ ಮತ್ತು ಟಿಪ್ಪರ್ ಗಳಲ್ಲಿ ಪುಟಾಣಿ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದಿದ್ದ ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಇಲಾಖಾ ಕ್ರಮದ ಭಾಗವಾಗಿ ಇದೀಗ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.















Post Comment