ಮಲೆಂಗಲ್ಲು ಶ್ರೀಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವ ಸಿದ್ಧತಾ ಸಭೆ ನಾಳೆ

ಮಲೆಂಗಲ್ಲು ಶ್ರೀಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವ ಸಿದ್ಧತಾ ಸಭೆ ನಾಳೆ

Share

ಬೆಳ್ತಂಗಡಿ : ಕಣಿಯೂರು ಗ್ರಾಮದ ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಹಂಚಿಕೆ ಹಾಗೂ ವಿವಿಧ ಸಮಿತಿಗಳ ಪೂರ್ವತಯಾರಿ ಬಗ್ಗೆ ಮಹತ್ವದ ಸಭೆಯನ್ನು ನಾಳೆ ಫೆಬ್ರವರಿ 14(2026)ನೇ ಶನಿವಾರ ಪೂರ್ವಾಹ್ನ ಪದ್ಮುಂಜ ಸಿ.ಎ.ಬ್ಯಾಂಕ್ ನ ರೈತ ಸಭಾಭವನದಲ್ಲಿ ಕರೆಯಲಾಗಿದೆ. ಈ ಸಭೆಯು ದೇವಸ್ಥಾನದ ಆಡಳಿತ ಮಂಡಳಿ, ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಮತ್ತಿತರ ಉಪಸಮಿತಿಗಳ ಪದಾಧಿಕಾರಿಗಳು ಸದಸ್ಯರು, ಊರಿನ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ.
ಈ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಭಾಗವಹಿಸಿ
ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸೂಕ್ತ ಮಾರ್ಗದರ್ಶನ ಸಲಹೆ,ಸೂಚನೆಗಳನ್ನು ನೀಡಲಿದ್ದಾರೆ.
ಈ ಸಭೆಯಲ್ಲಿ ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಊರಿನ ಸಮಸ್ತ ಹಿಂದೂ ಬಾಂಧವರು ಭಾಗವಹಿಸುವಂತೆ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸಿಕೊಂಡಿದೆ.

Post Comment

ಟ್ರೆಂಡಿಂಗ್‌

error: Content is protected !!