ಸೌಜನ್ಯ ಮತ್ತು ತಾಯಿ ಕುಸುಮಾವತಿ ಸಂಬಂಧ ಶಂಕಿಸಿ ವ್ಯಕ್ತಿಯೊಬ್ಬನ ‘ಬುರುಡೆ’ ದೂರು:

“ಸೌಜನ್ಯ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ಯಾವುದೇ ಅನುಮಾನಗಳಿಲ್ಲ…”
ಎಸ್ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ
ಮಂಗಳೂರು : “ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ದಿ. ಚಂದಪ್ಪ ಗೌಡ ಅವರ ಪತ್ನಿ , ಕು. ಸೌಜನ್ಯ ತಾಯಿ ಕುಸುಮಾವತಿ ಮತ್ತು ಸೌಜನ್ಯ ಸಂಬಂಧದ ಕುರಿತು ಅನುಮಾನವಿದೆ” ಎಂದು ಸಂಶಯಾಸ್ಪದ ದಾಖಲೆ ಸೃಷ್ಟಿಸಿ ಧರ್ಮಸ್ಥಳ ಗ್ರಾಮದ ಕಿಶೋರ್ ಎಂಬಾತ ಎಸ್‌ಐಟಿಗೆ ದೂರು ನೀಡಿದ್ದು ಸೌಜನ್ಯ ಪ್ರಕರಣದ ಮರುತನಿಖೆಯ ದಿಕ್ಕು ತಪ್ಪಿಸುವ ಷಡ್ಯಂತ್ರದ ಭಾಗದಂತಿರುವ ಈ ಸಂಶಯಾಸ್ಪದ ದೂರಿನ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಮಹತ್ವದ ಸ್ಪಷ್ಟನೆಯೊಂದನ್ನು ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
“ಸೌಜನ್ಯ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ಈ ಬಗ್ಗೆ ನಾವು
ನಮ್ಮ ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಷಡ್ಯಂತ್ರ ಅಥವಾ ತನಿಖೆಯ ದಿಕ್ಕು ತಪ್ಪಿಸುವ ಕಳಪೆ ದೂರಿಗೆ ಸಂಬಂಧಿಸಿ
ಮಾಧ್ಯಮಗಳಿಗೆ ಅವರು ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಅಂತಹ ಯಾವುದೇ ಕೇಸ್ ಗಳಿದ್ದರೆ ಸ್ಥಳೀಯ ಪೊಲೀಸರಿಗೆ ದೂರು ನೀಡಬಹುದು ಸ್ಥಳೀಯ ಪೊಲೀಸರು ಅದರ ಬಗ್ಗೆ ಗಮನಿಸಬಹುದು ಎಂದು ಸುಧೀರ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.














Post Comment