ಸೌಜನ್ಯ ಪ್ರಕರಣ ಮರುತನಿಖೆ: ಎಸ್ಐಟಿ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಸಭೆ; ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಕೆ

ಸೌಜನ್ಯ ಪ್ರಕರಣ ಮರುತನಿಖೆ: ಎಸ್ಐಟಿ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಸಭೆ; ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಕೆ

Share
IMG-20261030-WA0001 ಸೌಜನ್ಯ ಪ್ರಕರಣ ಮರುತನಿಖೆ: ಎಸ್ಐಟಿ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಸಭೆ; ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಕೆ

ಬೆಂಗಳೂರು : ಎಸ್‌ಐಟಿ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ನಡೆಸಿದರೆನ್ನಲಾದ ಸಭೆಯ ಬಗ್ಗೆ ಆಕ್ಷೇಪಿಸಿ ತನಿಖೆಯ ಪ್ರಗತಿಯ ಕುರಿತು ಮಾಹಿತಿ ನೀಡಲಾಗಿದೆಯೇ ಎಂದು ಸ್ಪಷ್ಟನೆ ಕೋರಿ ಹಾಗೂ ಜೊತೆಗೆ ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿ ಸೌಜನ್ಯ ಹೋರಾಟಗಾರ್ತಿ ರಾಮಾ ನಾಗರಾಜ್ ಎಂಬವರು ಸುಪ್ರೀಂಕೋರ್ಟ್ ಗೆ
ದೂರು ಸಲ್ಲಿಸಿದ್ದು ಎಸ್ ಐ ಟಿ ತನಿಖೆಯ ಮಧ್ಯೆ ಎಸ್ ಐ ಟಿ ಮುಖ್ಯಸ್ಥರಾಗಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿದಲ್ಲಿ ಎಸ್ ಐಟಿ ತನಿಖೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬಿತ್ಯಾದಿ ಆತಂಕಗಳನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

ಈ ದೂರನ್ನು ಭಾರತದ ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಿ, ನ್ಯಾಯಾಲಯವು ಸೂಕ್ತವೆಂದು ಪರಿಗಣಿಸುವ ಆದೇಶಗಳನ್ನು ಹೊರಡಿಸಲು ವಿನಂತಿಸುತ್ತೇನೆ. ಅವುಗಳಲ್ಲಿ ಕೆಳಗಿನ ಕ್ರಮಗಳೂ ಸೇರಿರಲಿ:(ಎ) 28.10.2026ರಂದು ಏನು ನಡೆಯಿತು, ಯಾರ ಸೂಚನೆಯ ಮೇರೆಗೆ ಈ ಭೇಟಿ ನಡೆಯಿತು, ಮತ್ತು ತನಿಖೆಗೆ ಸಂಬಂಧಿಸಿದ ಯಾವುದೇ ವರದಿ ಅಥವಾ ದಾಖಲೆಯನ್ನು ಮುಖ್ಯಮಂತ್ರಿಗಳಿಗೆ ಅಥವಾ ಅವರ ಕಚೇರಿಗೆ ನೀಡಲಾಗಿದೆಯೇ ಎಂಬುದರ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಹಾಗೂ SIT ಮುಖ್ಯಸ್ಥರಿಂದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ನಿರ್ದೇಶಿಸಬೇಕು.
(ಬಿ) SITಯು ತನಿಖೆಯ ಕುರಿತು ಮುಖ್ಯಮಂತ್ರಿಗಳಿಗೆ, ಯಾವುದೇ ಸಚಿವರಿಗೆ ಅಥವಾ ರಾಜಕೀಯ ಕಾರ್ಯಾಂಗದ ಯಾವುದೇ ಅಧಿಕಾರಿಗೆ ವರದಿ ಸಲ್ಲಿಸಬಾರದು, ಮಾಹಿತಿ ನೀಡಬಾರದು ಅಥವಾ ತನಿಖೆಗೆ ಸಂಬಂಧಿಸಿದ ವಿವರಗಳನ್ನು ಒದಗಿಸಬಾರದು ಎಂದು ನಿರ್ದೇಶಿಸಬೇಕು. (ಸಿ) ಪೊಲೀಸ್ ವರದಿ ಸಲ್ಲಿಸುವವರೆಗೆ ತನಿಖೆಯ ಪ್ರಗತಿಯ ಸ್ಥಿತಿಗತಿ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಈ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಬೇಕು. (ಡಿ) 29.04.2026ರಂದು ಆದೇಶಿಸಲಾದ ಎಂಟು ಸಾಕ್ಷಿಗಳ ರಕ್ಷಣೆಯ ವ್ಯವಸ್ಥೆಯನ್ನು ಹಾಗೂ ಹೆಚ್ಚುವರಿ ಸಾಕ್ಷಿಗಳಿಗೆ ನೀಡಬೇಕಾದ ರಕ್ಷಣೆಯನ್ನೂ ಪರಿಶೀಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸುಪ್ರೀಂಕೋರ್ಟ್ ಗೆ ಸೌಜನ್ಯ ಹೋರಾಟಗಾರ್ತಿ ರಾಮಾನಾಗರಾಜ್ ಸಲ್ಲಿಸಿದ ದೂರಿನಲ್ಲಿ ಇಡಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!